KPSC KAS Exam 2026: 319 ಗೆಜೆಟೆಡ್ ಪ್ರೊಬೇಷನರ್ಸ್ ಹುದ್ದೆಗಳ ಪರೀಕ್ಷೆಯ ಪತ್ರಿಕೆ-1 ಮತ್ತು 2ರ ತಾತ್ಕಾಲಿಕ ಕೀ ಉತ್ತರ ಪ್ರಕಟ. 1.74 ಲಕ್ಷ OMR ಶೀಟ್ ಅಪ್‌ಲೋಡ್, ಆಕ್ಷೇಪಣೆ ಸಲ್ಲಿಸಲು ನ.19 ಕೊನೆಯ ದಿನ. ಡೌನ್‌ಲೋಡ್ ಲಿಂಕ್ ಮತ್ತು ಸಂಪೂರ್ಣ ಮಾಹಿತಿ ಇಲ್ಲಿದೆ.
ಕರ್ನಾಟಕ ಲೋಕಸೇವಾ ಆಯೋಗವು (KPSC) 2026-27ನೇ ಸಾಲಿನ ಗೆಜೆಟೆಡ್ ಪ್ರೊಬೇಷನರ್ಸ್ (KAS) ಹುದ್ದೆಗಳ ನೇಮಕಾತಿ ಪ್ರಕ್ರಿಯೆಯಲ್ಲಿ ಮಹತ್ವದ ಅಪ್‌ಡೇಟ್ ನೀಡಿದೆ. 319 ಗೆಜೆಟೆಡ್ ಪ್ರೊಬೇಷನರ್ಸ್ ಹುದ್ದೆಗಳ ಪೂರ್ವಭಾವಿ ಪರೀಕ್ಷೆಯ ಪತ್ರಿಕೆ-1 ಮತ್ತು ಪತ್ರಿಕೆ-2ರ ತಾತ್ಕಾಲಿಕ ಕೀ ಉತ್ತರಗಳನ್ನು ಪ್ರಕಟಿಸಲಾಗಿದೆ. ಇದರ ಜೊತೆಗೆ ಅಭ್ಯರ್ಥಿಗಳ OMR ಉತ್ತರ ಪತ್ರಿಕೆಗಳನ್ನು ಆನ್‌ಲೈನ್‌ನಲ್ಲಿ ವೀಕ್ಷಿಸಲು ಮತ್ತು ಡೌನ್‌ಲೋಡ್ ಮಾಡಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ.
ಪರೀಕ್ಷೆಯಲ್ಲಿ ಭಾಗವಹಿಸಿದ್ದ ಅಭ್ಯರ್ಥಿಗಳು ಇದೀಗ ತಮ್ಮ OMR ಉತ್ತರ ಪತ್ರಿಕೆಗಳನ್ನು ಪರಿಶೀಲಿಸಿ, ಆಯೋಗ ಪ್ರಕಟಿಸಿರುವ ತಾತ್ಕಾಲಿಕ ಕೀ ಉತ್ತರಗಳೊಂದಿಗೆ ಹೋಲಿಕೆ ಮಾಡಿಕೊಳ್ಳಬಹುದು. ಕೀ ಉತ್ತರಗಳಲ್ಲಿ ತಪ್ಪುಗಳಿದ್ದರೆ ನಿಗದಿತ ಅವಧಿಯೊಳಗೆ ಸೂಕ್ತ ದಾಖಲೆಗಳೊಂದಿಗೆ ಆಕ್ಷೇಪಣೆ ಸಲ್ಲಿಸಬಹುದು.
ಪ್ರಚಲಿತ ಘಟನೆಗಳನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ
ನೇಮಕಾತಿಯ ಪ್ರಮುಖ ವಿವರಗಳು
- ಒಟ್ಟು ಹುದ್ದೆಗಳು: 319
- RPC (ರಾಜ್ಯ ವೃಂದ): 297 ಹುದ್ದೆಗಳು
- ಕಲ್ಯಾಣ ಕರ್ನಾಟಕ (KK): 22 ಹುದ್ದೆಗಳು
- ಪರೀಕ್ಷೆಯ ದಿನಾಂಕ: 15 ನವೆಂಬರ್ 2026
- ಪರೀಕ್ಷೆಯ ಹಂತ: ಪೂರ್ವಭಾವಿ ಪರೀಕ್ಷೆ
- ಕೀ ಉತ್ತರಗಳ ಪ್ರಕಟಣೆ: 16 ನವೆಂಬರ್ 2026
OMR ಶೀಟ್ ಮತ್ತು ಕೀ-ಉತ್ತರ ಪರಿಶೀಲನೆ ಹೇಗೆ? (How to Check)
ಅಭ್ಯರ್ಥಿಗಳು ತಮ್ಮ OMR ಶೀಟ್‌ಗಳನ್ನು ಡೌನ್‌ಲೋಡ್ ಮಾಡಿಕೊಳ್ಳಲು KPSC ಯ ಅಧಿಕೃತ OMR ಪೋರ್ಟಲ್‌ಗೆ ಭೇಟಿ ನೀಡಬೇಕು:
- OMR ಲಿಂಕ್: kpsc.karnataka.gov.in/OmrPortal/
- ಅದೇ ರೀತಿ, ಪತ್ರಿಕೆ-1 ಮತ್ತು ಪತ್ರಿಕೆ-2 ರ ಅಧಿಕೃತ ಕೀ-ಉತ್ತರಗಳನ್ನು KPSC ಯ ಮುಖ್ಯ ವೆಬ್‌ಸೈಟ್‌ನಲ್ಲಿ (16.11.2026 ರಂದು ಪ್ರಕಟಿಸಲಾಗಿದೆ) ಡೌನ್‌ಲೋಡ್ ಮಾಡಿ, ನಿಮ್ಮ OMR ಶೀಟ್ ಜೊತೆಗೆ ತಾಳೆ ಮಾಡಿ ಅಂಕಗಳನ್ನು ಲೆಕ್ಕಹಾಕಬಹುದು.
ಕೀ-ಉತ್ತರಗಳಿಗೆ ಆಕ್ಷೇಪಣೆ ಸಲ್ಲಿಸುವುದು ಹೇಗೆ? (How to File Objections)
ಪ್ರಕಟವಾದ ಕೀ-ಉತ್ತರಗಳಲ್ಲಿ ಆಯೋಗವು ನೀಡಿರುವ ಉತ್ತರಗಳ ಬಗ್ಗೆ ಅಭ್ಯರ್ಥಿಗಳಿಗೆ ಆಕ್ಷೇಪಣೆಗಳಿದ್ದರೆ, ಆನ್‌ಲೈನ್ ಮೂಲಕವೇ ದೂರು/ಆಕ್ಷೇಪಣೆ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ.
- ಕೊನೆಯ ದಿನಾಂಕ: 19.11.2026 (ಬೆಳಿಗ್ಗೆ 10:30 ಗಂಟೆಯೊಳಗೆ).
- ಸಲ್ಲಿಸುವ ಲಿಂಕ್: https://cetonline.karnataka.gov.in/kpscobjection/forms/login.aspx
- ಆಕ್ಷೇಪಣಾ ಶುಲ್ಕ: ಪ್ರತಿ ಆಕ್ಷೇಪಣೆಗೆ (ಒಂದು ಪ್ರಶ್ನೆಗೆ) ರೂ. 50/- ಪಾವತಿಸಬೇಕು (ಈ ಶುಲ್ಕ ಮರುಪಾವತಿಯಾಗುವುದಿಲ್ಲ).
- ಅಗತ್ಯ ದಾಖಲೆಗಳು: ಆಕ್ಷೇಪಣೆ ಸಲ್ಲಿಸುವಾಗ ಪತ್ರಿಕೆಯ ವಿವರ, ಪ್ರಶ್ನೆಪತ್ರಿಕೆ ವರ್ಷನ್ ಕೋಡ್, ಪ್ರಶ್ನೆ ಸಂಖ್ಯೆಯನ್ನು ಕಡ್ಡಾಯವಾಗಿ ನಮೂದಿಸಬೇಕು. ಜೊತೆಗೆ ಸರಿಯಾದ ಉತ್ತರಕ್ಕೆ ಪೂರಕವಾದ ಆಧಾರ/ದಾಖಲೆಗಳನ್ನು PDF ರೂಪದಲ್ಲಿ (ಗರಿಷ್ಠ 1 MB ಗಾತ್ರದಲ್ಲಿ) ಅಪ್‌ಲೋಡ್ ಮಾಡುವುದು ಕಡ್ಡಾಯವಾಗಿದೆ.
ಗಮನಿಸಿ (Important Instructions):
- ಯಾವುದೇ ಆಕ್ಷೇಪಣೆಯನ್ನು ಆಫ್‌ಲೈನ್ ಮೂಲಕ (ಖುದ್ದಾಗಿ ಅಥವಾ ಅಂಚೆ ಮೂಲಕ) ಸಲ್ಲಿಸಿದರೆ ಅದನ್ನು ಪರಿಗಣಿಸಲಾಗುವುದಿಲ್ಲ.
- ಪೂರಕ ದಾಖಲೆಗಳಿಲ್ಲದ, ವರ್ಷನ್ ಕೋಡ್ ಇಲ್ಲದ, ಹಾಗೂ ಶುಲ್ಕ ಪಾವತಿಸದ ಆಕ್ಷೇಪಣೆಗಳನ್ನು ನೇರವಾಗಿ ತಿರಸ್ಕರಿಸಲಾಗುತ್ತದೆ.
- ಅಭ್ಯರ್ಥಿಗಳು ಸಲ್ಲಿಸಿದ ಆಕ್ಷೇಪಣೆಗಳನ್ನು 'ವಿಷಯ ತಜ್ಞರ ಸಮಿತಿಯು' ಪರಿಶೀಲಿಸಿದ ಬಳಿಕ ಬಿಡುಗಡೆ ಮಾಡುವ ಅಂತಿಮ ಕೀ-ಉತ್ತರಗಳೇ (Final Key Answer) ಅಂತಿಮವಾಗಿರುತ್ತವೆ.
ಸೂಚನೆ: OMR ಡೌನ್‌ಲೋಡ್ ಮಾಡುವಾಗ ಆರಂಭದಲ್ಲಿ ಕೆಲವೊಂದು ತಾಂತ್ರಿಕ ಸಮಸ್ಯೆಗಳು ಎದುರಾಗಿದ್ದವು ಎಂದು ಅಭ್ಯರ್ಥಿಗಳು ಆರೋಪಿಸಿದ್ದರು, ಆದರೆ ಇದೀಗ ವೆಬ್‌ಸೈಟ್ ಸುಗಮವಾಗಿ ಕಾರ್ಯನಿರ್ವಹಿಸುತ್ತಿದೆ
.jpeg)