KPSC
01 ಏಪ್ರಿಲ್ 2020
6 years ago
Published by Basavaraj Halli
`KPSC' ಅಧಿಸೂಚಿಸಲಾದ ವಿವಿಧ ಇಲಾಖಾ ಪರೀಕ್ಷೆಗಳು ಮುಂದೂಡಿಕೆ
ಬೆಂಗಳೂರು :ಕರ್ನಾಟಕ ಲೋಕಸೇವಾ ಆಯೋಗವು ದಿನಾಂಕ ಏಪ್ರಿಲ್ 11 ರಿಂದ ಮೇ 3 ರವರೆಗೆ ಮೂರು ಹಂತಗಳಲ್ಲಿ ನಡೆಸಲು ನಿಗದಿಪಡಿಸಿದ್ದ ವಿವಿಧ ಇಲಾಖಾ ಪರೀಕ್ಷೆಗಳನ್ನು ಅನಿರ್ದಿಷ್ಟಾವಧಿಗೆ ಮುಂದೂಡಿ ಪ್ರಕಟಣೆ ಹೊರಡಿಸಿದೆ.
ಕಳೆದ ವರ್ಷ ಮಾರ್ಚ್ 31 ರಂದು KPSC ಯು ಇಲಾಖಾ ಪರೀಕ್ಷೆಗಳಿಗೆ ಅಧಿಸೂಚನೆ ಪ್ರಕಟಿಸಿತ್ತು, ಮತ್ತು 2020 ರ ಪ್ರಥಮ ಅಧಿವೇಶನದ ಇಲಾಖಾ ಪರೀಕ್ಷೆಗಳನ್ನು ನಡೆಸಲು ವೇಳಾಪಟ್ಟಿಯನ್ನು ನಿಗದಿಪಡಿಸಲಾಗಿತ್ತು. ಆದರೆ ರಾಷ್ಟ್ರಾದ್ಯಂತ ವ್ಯಾಪಿಸುತ್ತಿರುವ ಕೋವಿಡ್ 19 ವೈರಸ್ ಭೀತಿ ಹಿನ್ನೆಲೆ ಏಪ್ರಿಲ್ 11 ರಿಂದ ಮೇ. 3 ರವರೆಗೆ ಮೂರು ಹಂತಗಳಲ್ಲಿ ನಡೆಸಲು ನಿಗದಿ ಮಾಡಲಾಗಿದ್ದ ಇಲಾಖಾ ಪರೀಕ್ಷೆಗಳನ್ನು ಮುಂದೂಡಲಾಗಿದೆ.
Praveen Raikar
28 ಮೇ 2020, 08:50 ಪೂರ್ವಾಹ್ನdepartment exam when
Praveen Naik
01 ಏಪ್ರಿಲ್ 2020, 11:40 ಪೂರ್ವಾಹ್ನFDA KAS post pone aguttha