* ಜಾಗತಿಕ ಮಟ್ಟದಲ್ಲಿ ಕೊಡಮಾಡಲಾದ 'ಇಂಟರ್‌ನ್ಯಾಷನಲ್ ಯಂಗ್ ಇಕೊ- ಹಿರೋ' ಪ್ರಶಸ್ತಿಗೆ 2023 ನೇ ಸಾಲಿನಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಒಟ್ಟು 17 ಯುವ ಪರಿಸರ ಕಾರ್ಯಕರ್ತರಿಗೆ ಪ್ರಶಸ್ತಿ ನೀಡಲಾಗಿದ್ದು, ಪ್ರಶಸ್ತಿ ಸ್ವೀಕರಿಸಿದವರಲ್ಲಿ ಬೆಂಗಳೂರಿನ ಯುವತಿ ಸೇರಿ ಭಾರತದ ಐವರು ಇದ್ದಾರೆ.
* ಅಮೆರಿಕ ಮೂಲದ ಸರ್ಕಾರೇತರ ಸಂಸ್ಥೆ 'ಆ್ಯಕ್ಷನ್ ಫಾರ್ ನೇಚರ್' ಈ ಪ್ರಶಸ್ತಿ ನೀಡುತ್ತಿದ್ದು, ಇಂಟರ್‌ನ್ಯಾಷನಲ್ ಯಂಗ್ ಇಕೊ- ಹಿರೋ' ಪ್ರಶಸ್ತಿಗೆ
- ಬೆಂಗಳೂರಿನ ಮಾನ್ಯ ಹರೀಶ್
- ಮೀರತ್‌ನ ಐಹಾ ದೀಕ್ಷಿತ್
- ದೆಹಲಿಯ ನಿರ್ವಾಣ್ ಸೊಮಾನಿ ಮತ್ತು ಮನ್ನತ್ ಕೌರ್
- ಮುಂಬೈನ ಕರ್ಣವ್ ರಸ್ತೋಗಿ ಅವರು ಪ್ರಶಸ್ತಿಗೆ ಭಾಜನರಾಗಿದ್ದಾರೆ.
* ಈ ವರ್ಷದ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಮೀರತ್‌ನ ಐಹಾ ದೀಕ್ಷಿತ್ ಅವರು ಪಡೆದುಕೊಂಡಿದ್ದಾರೆ. ಇವರು ಸ್ವಯಂಸೇವಕರ ಸಹಾಯದೊಂದಿಗೆ ತಮ್ಮ “ಗ್ರೀನ್ ಐಹಾ ಸ್ಟೈಲ್ ಫೌಂಡೇಷನ್' ಮೂಲಕ ಕಳೆದ ನಾಲ್ಕು ವರ್ಷಗಳಲ್ಲಿ 20,000ಕ್ಕೂ ಹೆಚ್ಚು ಗಿಡಗಳನ್ನು ನೆಟ್ಟಿದ್ದಾರೆ.
'ಯಂಗ್ ಇಕೋ ಹೀರೊ' ಪ್ರಶಸ್ತಿಗೆ ಬೆಂಗಳೂರಿನ ಯುವತಿ ಸೇರಿ ಭಾರತದ ಐವರು ಆಯ್ಕೆ
Published by Bhagya R K
18 ಆಗಸ್ಟ್ 2023