➤ ಪ್ರತಿ ವರ್ಷ ಸೆಪ್ಟೆಂಬರ್ 29 ರಂದು ಜಗತ್ತಿನಾದ್ಯಂತ ‘ವಿಶ್ವ ಹೃದಯ ದಿನ’ (World Heart Day) ವನ್ನು ಆಚರಿಸಲಾಗುತ್ತದೆ. ಹೃದಯ ಸಂಬಂಧಿ ಕಾಯಿಲೆಗಳು (Cardiovascular Diseases - CVDs), ಅವುಗಳ ಅಪಾಯಕಾರಿ ಅಂಶಗಳು ಮತ್ತು ತಡೆಗಟ್ಟುವ ಕ್ರಮಗಳ ಬಗ್ಗೆ ಜನರಲ್ಲಿ ಅರಿವು ಮೂಡಿಸುವುದು ಈ ದಿನದ ಮುಖ್ಯ ಉದ್ದೇಶವಾಗಿದೆ.
➤ 2026 ರ ಧೇಯ್ಯವಾಕ್ಯ (Theme): "Don't Miss a Beat" (ಹೃದಯದ ಮಿಡಿತವನ್ನು ನಿರ್ಲಕ್ಷಿಸಬೇಡಿ)
➤ 2026 ರ ಅಭಿಯಾನದ ಪ್ರಮುಖ ಮೂರು ಸ್ತಂಭಗಳು: ವಿಶ್ವ ಹೃದಯ ಒಕ್ಕೂಟವು (WHF) 2026 ರ ಅಭಿಯಾನದಲ್ಲಿ ಮೂರು ಮುಖ್ಯ ಅಂಶಗಳಿಗೆ ಆದ್ಯತೆ ನೀಡಿದೆ:

  1. ಲಕ್ಷಣಗಳನ್ನು ಗುರುತಿಸಿ (See the Signs): ಹೃದಯ ಕಾಯಿಲೆಯ ಗುಪ್ತ/ಮೌನ ಲಕ್ಷಣಗಳನ್ನು (Hidden Symptoms) ಆರಂಭಿಕ ಹಂತದಲ್ಲೇ ಪತ್ತೆಹಚ್ಚುವುದು. "Are You Heart Smart?" ಎಂಬ ಕ್ವಿಜ್ ಅಭಿಯಾನವನ್ನು ಪ್ರಾರಂಭಿಸಲಾಗಿದೆ.
  2. ಹೃದಯವನ್ನು ಸಂರಕ್ಷಿಸಿ (Protect Your Heart): ಶೇಕಡಾ 80 ರಷ್ಟು ಹೃದಯ ಸಂಬಂಧಿ ಸಾವುಗಳನ್ನು ಸರಿಯಾದ ಜೀವನಶೈಲಿಯಿಂದ ತಡೆಗಟ್ಟಬಹುದು. ಇದಕ್ಕಾಗಿ 'Keep the Beat' ಸವಾಲಿನ ಮೂಲಕ ದೈಹಿಕ ಚಟುವಟಿಕೆಗಳನ್ನು ಉತ್ತೇಜಿಸಲಾಗುತ್ತಿದೆ.
  3. ಕ್ರಮಕ್ಕೆ ಆಗ್ರಹಿಸಿ (Demand Action): ಜಾಗತಿಕ ಮಟ್ಟದಲ್ಲಿ ರಾಷ್ಟ್ರೀಯ ಹೃದಯ ಆರೋಗ್ಯ ನೀತಿಗಳನ್ನು ಜಾರಿಗೆ ತರಲು ಸರ್ಕಾರಗಳು ಮತ್ತು ನಾಯಕರಿಗೆ ಮನವಿ ಮಾಡುವುದು.

➤ ವಿಶ್ವ ಹೃದಯ ದಿನದ ಇತಿಹಾಸ (History of World Heart Day):

  • ಸ್ಥಾಪನೆ: ವಿಶ್ವ ಹೃದಯ ಒಕ್ಕೂಟದ (WHF) ಮಾಜಿ ಅಧ್ಯಕ್ಷ ಆಂಟೋನಿ ಬೇಯೆಸ್ ಡಿ ಲೂನಾ (Antoni Bayés de Luna) ಅವರ ಕಲ್ಪನೆಯಂತೆ 1999 ರಲ್ಲಿ ಈ ದಿನದ ಆಚರಣೆ ರೂಪುಗೊಂಡಿತು.
  • ಮೊದಲ ಆಚರಣೆ: ಸೆಪ್ಟೆಂಬರ್ 24, 2000 ರಂದು ಮೊದಲ ಬಾರಿಗೆ ಆಚರಿಸಲಾಯಿತು.
  • ದಿನಾಂಕ ಬದಲಾವಣೆ: 2011 ರವರೆಗೆ ಸೆಪ್ಟೆಂಬರ್ ತಿಂಗಳ ಕೊನೆಯ ಭಾನುವಾರದಂದು ಆಚರಿಸಲಾಗುತ್ತಿತ್ತು. ಆದರೆ 2012 ರಿಂದ ಪ್ರತಿ ವರ್ಷ ಸೆಪ್ಟೆಂಬರ್ 29 ರಂದು ಸ್ಥಿರವಾಗಿ ಆಚರಿಸಲು ನಿರ್ಧರಿಸಲಾಯಿತು.

➤ ಹೃದಯ ರೋಗಗಳಿಗೆ ಪ್ರಮುಖ ಅಪಾಯಕಾರಿ ಅಂಶಗಳು: ವಿಶ್ವ ಆರೋಗ್ಯ ಸಂಸ್ಥೆಯ (WHO) ಪ್ರಕಾರ, ಹೃದಯ ಸಂಬಂಧಿ ಕಾಯಿಲೆಗಳಿಗೆ ಪ್ರಮುಖ ಕಾರಣಗಳು:
- ಅಸಮತೋಲಿತ ಆಹಾರ: ಅಧಿಕ ಉಪ್ಪು, ಸಕ್ಕರೆ, ಟ್ರಾನ್ಸ್ ಫ್ಯಾಟ್ (Trans fats) ಹಾಗೂ ಸಂಸ್ಕರಿಸಿದ ಆಹಾರಗಳ ಸೇವನೆ.
- ದೈಹಿಕ ಅಕ್ರಿಯತೆ (Physical Inactivity): ವ್ಯಾಯಾಮದ ಕೊರತೆ ಮತ್ತು ಒಂದೇ ಕಡೆ ಕುಳಿತು ಕೆಲಸ ಮಾಡುವ ಜೀವನಶೈಲಿ.
- ತಂಬಾಕು ಸೇವನೆ: ಸಿಗರೇಟ್ ಮತ್ತು ಧೂಮಪಾನದಿಂದ ರಕ್ತನಾಳಗಳಿಗೆ ತೀವ್ರ ಹಾನಿ.
- ಉನ್ನತ ರಕ್ತದೊತ್ತಡ ಮತ್ತು ಮಧುಮೇಹ: ಹೈಪರ್ ಟೆನ್ಷನ್ (Hypertension) ಮತ್ತು ಸಕ್ಕರೆ ಕಾಯಿಲೆಯನ್ನು ಸರಿಯಾಗಿ ನಿಯಂತ್ರಿಸದಿರುವುದು.