➤ ಪ್ರತಿ ವರ್ಷ ಜುಲೈ 30 ರಂದು ಜಾಗತಿಕವಾಗಿ ‘ವಿಶ್ವ ಮಾನವ ಕಳ್ಳಸಾಗಣೆ ವಿರೋಧಿ ದಿನ’ (World Day Against Trafficking in Persons) ಅನ್ನು ಆಚರಿಸಲಾಗುತ್ತದೆ.
2026ರ ಥೀಮ್ (ಧ್ಯೇಯವಾಕ್ಯ)"Trapped Behind the Scam" (ಸ್ಕ್ಯಾಮ್‌ಗಳ/ಸೈಬರ್ ವಂಚನೆಯ ಬಲೆಗೆ ಬಿದ್ದವರು) 
➤ 2026ರ ಥೀಮ್: "Trapped Behind the Scam": 2026ರ ವಿಶ್ವ ಮಾನವ ಅಕ್ರಮ ಸಾಗಣೆ ವಿರೋಧಿ ದಿನದ ಪ್ರಮುಖ ಗಮನವು ಸೈಬರ್ ಅಪರಾಧ ಮತ್ತು ಬಲವಂತದ ಅಪರಾಧ ಪ್ರವೃತ್ತಿ (Forced Criminality) ಯ ಮೇಲಿದೆ.
  • ಉದ್ಯೋಗದ ಹೆಸರಲ್ಲಿ ವಂಚನೆ: ಸಂಘಟಿತ ಅಪರಾಧ ಜಾಲಗಳು ವಿದೇಶಗಳಲ್ಲಿ (ವಿಶೇಷವಾಗಿ ಆಗ್ನೇಯ ಏಷ್ಯಾದ ದೇಶಗಳಲ್ಲಿ) ಐಟಿ, ಕಸ್ಟಮರ್ ಕೇರ್ ಅಥವಾ ಮಾರ್ಕೆಟಿಂಗ್ ಉದ್ಯೋಗ ನೀಡುವುದಾಗಿ ಸುಳ್ಳು ಜಾಹೀರಾತು ನೀಡಿ ಯುವಕರನ್ನು ಆಕರ್ಷಿಸುತ್ತವೆ.
  • ಸೈಬರ್ ವಂಚನೆಗೆ ಬಳಕೆ: ವಿದೇಶಕ್ಕೆ ತಲುಪಿದ ತಕ್ಷಣ ಸಂತ್ರಸ್ತರ ಪಾಸ್‌ಪೋರ್ಟ್‌ಗಳನ್ನು ಕಸಿದುಕೊಂಡು, ಅವರನ್ನು ಸೈಬರ್ ಕ್ಯಾಂಪ್‌ಗಳಲ್ಲಿ ಬಂಧಿಸಿ ಇಡಲಾಗುತ್ತದೆ. ನಂತರ ಅವರನ್ನು ಬಲವಂತವಾಗಿ ಆನ್‌ಲೈನ್ ಹೂಡಿಕೆ ವಂಚನೆ, ಕ್ರಿಪ್ಟೋಕರೆನ್ಸಿ ಸ್ಕ್ಯಾಮ್, ರೋಮ್ಯಾನ್ಸ್ ಸ್ಕ್ಯಾಮ್ ಮತ್ತು ಫಿಶಿಂಗ್ ನಂತಹ ಜಾಗತಿಕ ಆನ್‌ಲೈನ್ ವಂಚನೆಗಳನ್ನು ಮಾಡಲು ಪೀಡಿಸಲಾಗುತ್ತದೆ.
  • ದೈಹಿಕ ಮತ್ತು ಮಾನಸಿಕ ಕಿರುಕುಳ: ಈ ಸ್ಕ್ಯಾಮ್ ಜಾಲದಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗದಂತೆ ಸಂತ್ರಸ್ತರ ಮೇಲೆ ಬೆದರಿಕೆ, ಹಿಂಸೆ ಮತ್ತು ಸಾಲದ ಸುಳಿಗೆ (Debt bondage) ಸಿಲುಕಿಸಲಾಗುತ್ತದೆ.
➤ UNODC ವರದಿ ಪ್ರಕಾರ: 2023 ರಲ್ಲಿ ಪೂರ್ವ ಮತ್ತು ಆಗ್ನೇಯ ಏಷ್ಯಾದಲ್ಲಿ ಸೈಬರ್ ಆಧಾರಿತ ಸ್ಕ್ಯಾಮ್‌ಗಳಿಂದ ಸುಮಾರು 18 ಶತಕೋಟಿ ಯೂಎಸ್ ಡಾಲರ್‌ನಿಂದ 37 ಶತಕೋಟಿ ಯೂಎಸ್ ಡಾಲರ್‌ವರೆಗೆ ಜಾಗತಿಕ ಹಣಕಾಸು ನಷ್ಟ ಸಂಭವಿಸಿದೆ.
➤ 'ಬ್ಲೂ ಹಾರ್ಟ್' ಅಭಿಯಾನ (Blue Heart Campaign):
  • ನೀಲಿ ಹೃದಯ (Blue Heart): ಇದು ಮಾನವ ಅಕ್ರಮ ಸಾಗಣೆ ವಿರುದ್ಧದ ಜಾಗತಿಕ ಹೋರಾಟದ ಅಧಿಕೃತ ಸಂಕೇತವಾಗಿದೆ.
  • ಅರ್ಥ: ಇದು ಸಂತ್ರಸ್ತರ ನೋವು ಮತ್ತು ದುಃಖವನ್ನು ವ್ಯಕ್ತಪಡಿಸುವುದರ ಜೊತೆಗೆ, ಮಾನವರನ್ನು ಮಾರಾಟ ಮಾಡುವ ಅಪರಾಧಿಗಳ "ಕಲ್ಲು ಹೃದಯ"ವನ್ನು (Cold-heartedness) ಪ್ರತಿನಿಧಿಸುತ್ತದೆ.
  • ಧ್ಯೇಯ: 'Blue Heart Campaign' ಮೂಲಕ UNODC ಜಾಗತಿಕವಾಗಿ ಜಾಗೃತಿ ಮೂಡಿಸುತ್ತದೆ ಮತ್ತು #EndHumanTrafficking ಹ್ಯಾಶ್‌ಟ್ಯಾಗ್ ಬಳಸಿ ಸಂತ್ರಸ್ತರಿಗೆ ಬೆಂಬಲ ಸೂಚಿಸಲು ಕರೆ ನೀಡುತ್ತದೆ.