- ಬ್ಯಾಂಕ್ ಹೆಸರು: ಭಾರತೀಯ ಸ್ಟೇಟ್ ಬ್ಯಾಂಕ್ (State Bank of India - SBI)
- ಸಂಗ್ರಹಿಸುತ್ತಿರುವ ಮೊತ್ತ: ₹5,000 ಕೋಟಿ (₹50 Billion)
- ಬಾಂಡ್‌ನ ಪ್ರಕಾರ: ಬಾಟಲ್-III ಅನುಸರಣೆಯ AT-1 ಪರ್ಪೆಚುಯಲ್ ಬಾಂಡ್‌ಗಳು (Rupee-denominated)
- ಕಾಲ್ ಆಪ್ಷನ್ (Call Option): 5 ವರ್ಷಗಳ ಕಾಲಾವಧಿ
- ಒಟ್ಟು ಬಂಡವಾಳ ಸಂಗ್ರಹ ಯೋಜನೆ: ಪ್ರಸಕ್ತ ಹಣಕಾಸು ವರ್ಷದಲ್ಲಿ ಒಟ್ಟು ₹60,000 ಕೋಟಿ ಸಾಲ ನಗದೀಕರಣಕ್ಕೆ ಜೂನ್‌ನಲ್ಲಿ ಎಸ್‌ಬಿಐ ಆಡಳಿತ ಮಂಡಳಿ ಅನುಮೋದನೆ ನೀಡಿದೆ.
- ಸ್ಥಿರ ಮುಕ್ತಾಯ ದಿನಾಂಕ ಇರುವುದಿಲ್ಲ (No Maturity Date): ಪರ್ಪೆಚುಯಲ್ ಬಾಂಡ್‌ಗಳಿಗೆ ನಿರ್ದಿಷ್ಟ ಮರುಪಾವತಿ ಅವಧಿ (Maturity Period) ಇರುವುದಿಲ್ಲ. ಅಂದರೆ, ಹೂಡಿಕೆದಾರರಿಗೆ ಮೂಲ ಹಣವನ್ನು ಬ್ಯಾಂಕ್ ತಕ್ಷಣ ಮರಳಿಸಬೇಕಾಗಿಲ್ಲ.
- ಕಾಲ್ ಆಪ್ಷನ್ (Call Option): ಬ್ಯಾಂಕ್ ಬಯಸಿದರೆ 5 ವರ್ಷಗಳ ನಂತರ ಹೂಡಿಕೆದಾರರ ಬಾಂಡ್‌ಗಳನ್ನು ವಾಪಸ್ ಖರೀದಿಸಿ (Redeem) ಹಣ ಮರಳಿಸುವ ಹಕ್ಕನ್ನು ಹೊಂದಿರುತ್ತದೆ.
- ಬಾಸೆಲ್-III ನಿಯಮಾವಳಿ: ಬ್ಯಾಂಕಿಂಗ್ ಕ್ಷೇತ್ರದಲ್ಲಿ ಆರ್ಥಿಕ ಅಪಾಯವನ್ನು ಕಡಿಮೆ ಮಾಡಲು ಮತ್ತು ಬಂಡವಾಳದ ಭದ್ರತೆಯನ್ನು ಹೆಚ್ಚಿಸಲು ಅಂತರರಾಷ್ಟ್ರೀಯ ಮಟ್ಟದಲ್ಲಿ ಬಾಸೆಲ್-III ನಿಯಮಗಳನ್ನು ಜಾರಿಗೆ ತರಲಾಗಿದೆ.
- Capital Adequacy Ratio (CAR): ಈ ಬಾಂಡ್‌ಗಳ ಮೂಲಕ ಸಂಗ್ರಹಿಸುವ ಹಣವು ಬ್ಯಾಂಕಿನ 'ಟೈರ್-1 ಬಂಡವಾಳ' ಹೆಚ್ಚಿಸಲು ಮತ್ತು 'ಬಂಡವಾಳ ಪರ್ಯಾಪ್ತತೆ ಪ್ರಮಾಣ' (CAR) ಬಲಪಡಿಸಲು ನೆರವಾಗುತ್ತದೆ.
➤ ಈ ಹಿಂದಿನ ಹಿನ್ನೆಲೆ:
- ಕೆನರಾ ಬ್ಯಾಂಕ್ (Canara Bank): 2025ರ ನವೆಂಬರ್‌ನಲ್ಲಿ ₹3,500 ಕೋಟಿ ಮೌಲ್ಯದ AT-1 ಬಾಂಡ್‌ಗಳನ್ನು (7.55% ಕೂಪನ್ ದರದಲ್ಲಿ) ಬಿಡುಗಡೆ ಮಾಡಿದ ಕೊನೆಯ ಸಾರ್ವಜನಿಕ ವಲಯದ ಬ್ಯಾಂಕ್ ಆಗಿದೆ.
- ಎಸ್‌ಬಿಐ ಕೊನೆಯ ಸಾಲ ಸಂಗ್ರಹ: ಎಸ್‌ಬಿಐ ಕೊನೆಯದಾಗಿ 2024ರ ಅಕ್ಟೋಬರ್‌ನಲ್ಲಿ 10 ವರ್ಷಗಳ ಕಾಲ್ ಆಪ್ಷನ್‌ನೊಂದಿಗೆ ₹5,000 ಕೋಟಿಯನ್ನು 7.98% ಕೂಪನ್ ದರದಲ್ಲಿ ಸಂಗ್ರಹಿಸಿತ್ತು.