* ಅಖಂಡ ಹಿಂದೂ ರಾಷ್ಟ್ರ ರಚನೆ ಪ್ರಸ್ತಾವಿತ ಮೊದಲ ಸಂವಿಧಾನ ರಚನೆ ಪೂರ್ಣಗೊಂಡಿದೆ.
* ಪ್ರಯಾಗರಾಜ್ ಮಹಾಕುಂಭ ಮೇಳದಲ್ಲಿ ಫೆಬ್ರುವರಿ 3 ವಸಂತ ಪಂಚಮಿ ದಿನ 501 ಪುಟಗಳ ಅಖಂಡ ಹಿಂದೂ ರಾಷ್ಟ್ರದ ಸಂವಿಧಾನವನ್ನು ಬಿಡುಗಡೆ ಮಾಡಲಾಗುತ್ತಿದೆ.
* ಮನುಸ್ಮೃತಿ, ರಾಮರಾಜ್ಯ, ಚಾಣಕ್ಯನ ಅರ್ಥಶಾಸ್ತ್ರದ ತತ್ವಗಳ ಆಧಾರದಲ್ಲಿ ತಜ್ಞರು ಸಂವಿಧಾನ ರಚಿಸಿದ್ದಾರೆ. ಶಂಕರಾಚಾರ್ಯರ ನಾಲ್ಕು ಪೀಠಗಳ ಒಪ್ಪಿಗೆ ಬಳಿಕ ಅದು ಕೇಂದ್ರಕ್ಕೆ ಕಳುಹಿಸಲಾಗಿದೆ.
* ಸಂವಿಧಾನದಲ್ಲಿರುವ ಅಂಶಗಳು :
• ಪ್ರತಿಯೊಬ್ಬ ನಾಗರಿಕನೂ ಸೇನೆಯಲ್ಲಿ ಸೇವೆ ಸಲ್ಲಿಸುವುದು ಕಡ್ಡಾಯ. ಕೃಷಿ ಆದಾಯವು ತೆರಿಗೆ ವ್ಯವಸ್ಥೆಯೊಳಗೆ ಬರುವುದಿಲ್ಲ. ಏಕಪತ್ನಿತ್ವ ಮತ್ತು ಅವಿಭಕ್ತ ಕುಟುಂಬ ವ್ಯವಸ್ಥೆಗೆ ಪ್ರೋತ್ಸಾಹ ಮತ್ತು ಜಾತಿ ಪದ್ಧತಿ ರದ್ದು
• ಹಿಂದೂ ನ್ಯಾಯಾಂಗ ವ್ಯವಸ್ಥೆ ಜಾರಿಯಾಗಲಿದ್ದು ತ್ವರಿತ ನ್ಯಾಯದಾನ ವ್ಯವಸ್ಥೆ ಇರಲಿದೆ. ವ್ಯಕ್ತಿತ್ವ ಬದಲಾವಣೆಯೇ ಶಿಕ್ಷೆ ನೀಡುವುದಕ್ಕೆ ಮುಖ್ಯ ಉದ್ದೇಶ. ಸುಳ್ಳು ಆರೋಪ ಮಾಡುವವರಿಗೂ ಶಿಕ್ಷೆ.
• ಗುರುಕುಲ ಪದ್ಧತಿ ಜಾರಿ. ಈಗಿರುವ ಎಲ್ಲ ಆಂಗ್ಲ ಮಾಧ್ಯಮ ಶಾಲೆಗಳನ್ನು ಗುರುಕುಲಗಳನ್ನಾಗಿ ಮರುರೂಪಿಸಲಾಗುವುದು ಮತ್ತು ಸರ್ಕಾರದ ಆರ್ಥಕ ನೆರವಿನಿಂದ ನಡೆಯುತ್ತಿರುವ ಎಲ್ಲ ಮದರಸಾಗಳನ್ನು ಮುಚ್ಚಿಸಲಾಗುವುದು.
* ವೇದಾಧ್ಯಯನ ಕಡ್ಡಾಯ ಹಿಂದೂ ರಾಷ್ಟ್ರದ ‘ಸಂವಿಧಾನ’ದಲ್ಲಿ ‘ಏಕ ಸದನ ಸಂಸದೀಯ ವ್ಯವಸ್ಥೆ’ಯನ್ನು ಪ್ರತಿಪಾದಿಸಲಾಗಿದೆ. ಸಂಸತ್ತಿಗೆ ‘ಧರ್ಮ ಸಂಸತ್ತು’ ಎಂದು ಹೆಸರಿಸಲಾಗಿದೆ.
ಮಂಗಳವಾರ, 28 ಜನವರಿ 2025
4:08 ಅಪರಾಹ್ನ
Daily PDF
ವಸಂತ ಪಂಚಮಿಯಂದು ಅಖಂಡ ಹಿಂದೂ ಸಂವಿಧಾನ ಅನಾವರಣ
Authored by:
Jyoti Angadi