* ಭಾರತ ಮಹಿಳಾ ಕ್ರಿಕೆಟ್ ತಂಡದ ಉಪನಾಯಕಿ ಸ್ಮೃತಿ ಮಂಧಾನ ಅವರು 2024ರ ICC ವರ್ಷದ ಮಹಿಳಾ ಏಕದಿನ ಕ್ರಿಕೆಟ್ ಆಟಗಾರ್ತಿ ಪ್ರಶಸ್ತಿಗೆ ಆಯ್ಕೆ ಮಾಡಿದೆ.
* ಕಳೆದ ವರ್ಷ ಏಕದಿನ ಕ್ರಿಕೆಟ್ನಲ್ಲಿ 13 ಇನ್ನಿಂಗ್ಸ್ಗಳನ್ನು ಆಡಿದ್ದ ಮಂಧಾನ ಅವರ ನಾಲ್ಕು ಭರ್ಜರಿ ಶತಕಗಳ ಸಹಿತ ಬರೋಬ್ಬರಿ 747 ರನ್ ಕಲೆಹಾಕಿದ್ದರು.
* ಈ ಮೂಲಕ 2024ರಲ್ಲಿ ಅತಿ ಹೆಚ್ಚು ರನ್ ಗಳಿಸಿದ ಎಡಗೈ ಮಹಿಳಾ ಕ್ರಿಕೆಟ್ ಆಟಗಾರರ ಪೈಕಿ ಸ್ಮೃತಿ ಮಂಧಾನ ಅತಿ ಹೆಚ್ಚು ರನ್ ಗಳಿಸಿದ್ದಾರೆ.
* ಉಳಿದಂತೆ ಲಾರಾ ವೊಲ್ವಾರ್ಡ್ (697), ಟ್ಯಾಮಿ ಬ್ಯೂಮಾಂಟ್ (554) ಮತ್ತು ಹೇಲಿ ಮ್ಯಾಥ್ಯೂಸ್ (469) ರನ್ ಗಳಿಸಿದ್ದಾರೆ.
* ಮಂಧಾನ 57.86ರ ಸರಾಸರಿಯಲ್ಲಿ 95.15 ರ ಸ್ಟ್ರೈಕ್ ರೇಟ್‌ನಲ್ಲಿ ರನ್ ಗಳಿಸಿದ್ದಾರೆ. ಅವರು ಈ ವರ್ಷದಲ್ಲಿ ನಾಲ್ಕು ಶತಕ ಗಳಿಸುವ ಮೂಲಕ ಮಹಿಳಾ ಕ್ರಿಕೆಟ್ ನಲ್ಲಿ ಹೊಸ ದಾಖಲೆ ಮಾಡಿದ್ದಾರೆ. 95 ಬೌಂಡರಿ ಹಾಗೂ ಆರು ಸಿಕ್ಸರ್ ಹೊಡೆದಿದ್ದಾರೆ.
* 2024ರಲ್ಲಿನ ಅದ್ಬುತ ಪ್ರದರ್ಶನವು ಐಸಿಸಿ ಮಹಿಳಾ ಚಾಂಪಿಯನ್ ಶಿಪ್ ನಲ್ಲಿ ಅತಿ ಹೆಚ್ಚು ರನ್ ಗಳಿಸಿದವರ ಪಟ್ಟಿಯಲ್ಲಿ ಸ್ಮೃತಿ ಮಂಧಾನ ಸ್ಥಾನವನ್ನು ಭದ್ರಪಡಿಸಿದೆ.
ಸ್ಮೃತಿ ಮಂಧಾನಗೆ ICC ವರ್ಷದ ಮಹಿಳಾ ಏಕದಿನ ಕ್ರಿಕೆಟ್ ಆಟಗಾರ್ತಿ ಪ್ರಶಸ್ತಿ
Published by Jyoti Angadi
28 ಜನವರಿ 2025