➤ ನವದೆಹಲಿ: ಭಾರತದ 77ನೇ ಗಣರಾಜ್ಯೋತ್ಸವ ಸಂಭ್ರಮಕ್ಕೆ ರಾಜಪಥ (ಕರ್ತವ್ಯ ಪಥ) ಸಜ್ಜಾಗುತ್ತಿದೆ. ಈ ಬಾರಿಯ ಪಥಸಂಚಲನದಲ್ಲಿ ಕೇಂದ್ರ ಸಂಸ್ಕೃತಿ ಸಚಿವಾಲಯವು 'ವಂದೇ ಮಾತರಂ' ಎಂಬ ಶಕ್ತಿಯುತ ಧೈಯವಾಕ್ಯದೊಂದಿಗೆ ಅತ್ಯಾಧುನಿಕ ಹಾಗೂ ಸಾಂಸ್ಕೃತಿಕ ಪರಂಪರೆಯನ್ನು ಬಿಂಬಿಸುವ ಸ್ತಬ್ಧಚಿತ್ರವನ್ನು ಪ್ರದರ್ಶಿಸಲಿದೆ. ದೇಶದ ನಾರೀಶಕ್ತಿ, ಸಾಂಸ್ಕೃತಿಕ ವೈವಿಧ್ಯತೆ ಮತ್ತು ತಾಂತ್ರಿಕ ಪ್ರಗತಿಯನ್ನು ಈ ಸ್ತಬ್ಧಚಿತ್ರವು ಅನಾವರಣಗೊಳಿಸಲಿದೆ.
ಈ ಬಾರಿಯ ಪರೇಡ್‌ನಲ್ಲಿ ಎರಡು ಪ್ರಮುಖ ಪರಿಕಲ್ಪನೆಗಳಡಿ ಸ್ತಬ್ಧಚಿತ್ರಗಳನ್ನು ಪ್ರದರ್ಶಿಸಲಾಗುವುದು:
1. 'ಸ್ವತಂತ್ರತಾ ಕಾ ಮಂತ್ರ - ವಂದೇ ಮಾತರಂ' (ಸ್ವಾತಂತ್ರ್ಯದ ಮಂತ್ರ - ವಂದೇ ಮಾತರಂ)
2. 'ಸಮೃದ್ಧಿ ಕಾ ಮಂತ್ರ - ಆತ್ಮನಿರ್ಭರ ಭಾರತ' (ಸಮೃದ್ಧಿಯ ಮಂತ್ರ - ಸ್ವಾವಲಂಬಿ ಭಾರತ)
➤ 2026ರ ಗಣರಾಜ್ಯೋತ್ಸವಕ್ಕೆ ಇಬ್ಬರು ಅಂತರಾಷ್ಟ್ರೀಯ ಗಣ್ಯರು ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ:
1. ಅಂಟೋನಿಯೊ ಕೋಸ್ಟಾ: ಯುರೋಪಿಯನ್ ಕೌನ್ಸಿಲ್‌ನ ಅಧ್ಯಕ್ಷರು.
2. ಉರ್ಸುಲಾ ವಾನ್ ಡೆರ್ ಲೇಯನ್: ಯುರೋಪಿಯನ್ ಕಮಿಷನ್‌ನ ಅಧ್ಯಕ್ಷರು.
➤ ವಂದೇ ಮಾತರಂ ಸ್ತಬ್ಧಚಿತ್ರದ ವಿಶೇಷತೆಗಳು: ಸಂಸ್ಕೃತಿ ಸಚಿವಾಲಯವು ಪ್ರದರ್ಶಿಸಲಿರುವ ಈ ಸ್ತಬ್ಧಚಿತ್ರದ ಪ್ರಮುಖ ಅಂಶಗಳು ಹೀಗಿವೆ:
- 1875ರಲ್ಲಿ ಬಂಕಿಮಚಂದ್ರ ಚಟ್ಟೋಪಾಧ್ಯಾಯರು ರಚಿಸಿದ ಈ ಹಾಡು ಸ್ವಾತಂತ್ರ್ಯ ಹೋರಾಟದ ಕಿಚ್ಚನ್ನು ಹಚ್ಚಿತ್ತು.
- ಸ್ತಬ್ಧಚಿತ್ರದಲ್ಲಿ ವಂದೇ ಮಾತರಂ ಹಾಡಿನ ಮೂಲ ಕೈಬರಹದ ಪ್ರತಿಯನ್ನು ಪ್ರದರ್ಶಿಸಲಾಗುತ್ತದೆ.
- 1923ರಲ್ಲಿ ಕಲಾವಿದ ತೇಜೇಂದ್ರ ಕುಮಾರ್ ಮಿತ್ರ ಅವರು ಈ ಹಾಡಿನ ಸಾಲುಗಳನ್ನು ಆಧರಿಸಿ ಬಿಡಿಸಿದ ಚಿತ್ರಗಳನ್ನು ಕರ್ತವ್ಯ ಪಥದ ಉದ್ದಕ್ಕೂ ಪ್ರದರ್ಶಿಸಲಾಗುತ್ತದೆ.
- ಇಂದಿನ ಪೀಳಿಗೆಯನ್ನು ಪ್ರತಿನಿಧಿಸುವ 'ಜೆನ್-ಜಿ' (Gen-Z) ಯುವಕರು ಈ ಹಾಡನ್ನು ಹಾಡಲಿದ್ದಾರೆ. ಇದರ ಜವಾಬ್ದಾರಿಯನ್ನು ಇಂದಿರಾಗಾಂಧಿ ರಾಷ್ಟ್ರೀಯ ಕಲಾಕೇಂದ್ರ (IGNCA) ವಹಿಸಿಕೊಂಡಿದೆ.
➤ ಚಿತ್ರರಂಗದ ಮೊದಲ ಪ್ರವೇಶ : ಖ್ಯಾತ ಚಲನಚಿತ್ರ ನಿರ್ದೇಶಕ ಸಂಜಯ್ ಲೀಲಾ ಭನ್ಸಾಲಿ ಅವರು ಇದೇ ಮೊದಲ ಬಾರಿಗೆ ಭಾರತೀಯ ಸಿನೆಮಾ ರಂಗದ ಸಾಧನೆಯನ್ನು ಬಿಂಬಿಸುವ ಸ್ತಬ್ಧಚಿತ್ರವನ್ನು ಕರ್ತವ್ಯ ಪಥದಲ್ಲಿ ಪ್ರದರ್ಶಿಸಲಿದ್ದಾರೆ.
➤ ಮಿಲಿಟರಿ ಶಕ್ತಿ ಮತ್ತು ವೈಮಾನಿಕ ಪ್ರದರ್ಶನ:-
1. ಯುದ್ಧೋಪಕರಣಗಳು: ಟಿ-90 ಟ್ಯಾಂಕ್‌ಗಳು, ಅರ್ಜುನ್ ಎಂ.ಬಿ.ಟಿ, ಬ್ರಹ್ಮೋಸ್ ಕ್ಷಿಪಣಿ, ಆಕಾಶ್ ಕ್ಷಿಪಣಿ ವ್ಯವಸ್ಥೆ ಮತ್ತು ಡ್ರೋನ್‌ಗಳ ಪ್ರದರ್ಶನ ಇರಲಿದೆ.
2. ಫ್ಲೈಪಾಸ್ಟ್: ರಫೇಲ್, ಸುಖೋಯ್-30, ಅಪಾಚೆ ಮತ್ತು ಎಲ್.ಸಿ.ಎಚ್ (LCH) ಹೆಲಿಕಾಪ್ಟರ್‌ಗಳು ಆಕಾಶದಲ್ಲಿ ಸಾಹಸ ಪ್ರದರ್ಶಿಸಲಿವೆ.
➤ ವಿಶೇಷ ಆಹ್ವಾನಿತರು: ಈ ಬಾರಿ ಸುಮಾರು 10,000 ವಿಶೇಷ ಅತಿಥಿಗಳನ್ನು ಆಹ್ವಾನಿಸಲಾಗಿದೆ:
- ವಿಶ್ವ ಅಥ್ಲೆಟಿಕ್ ಪ್ಯಾರಾ ಚಾಂಪಿಯನ್‌ಶಿಪ್ ವಿಜೇತರು.
- ನೈಸರ್ಗಿಕ ಕೃಷಿ ಮಾಡುವ ರೈತರು.
- ISRO ದ ಗಗನಯಾನ ಮತ್ತು ಚಂದ್ರಯಾನ ಯೋಜನೆಯ ವಿಜ್ಞಾನಿಗಳು.
- PM SMILE ಯೋಜನೆಯಡಿ ಪುನರ್ವಸತಿ ಪಡೆದ ಮಂಗಳಮುಖಿಯರು ಮತ್ತು ಭಿಕ್ಷುಕರು.
➤ ವಂದೇ ಮಾತರಂ ಹಾಡನ್ನು ಮೊದಲ ಬಾರಿಗೆ 1896ರ ಕಲ್ಕತ್ತಾ ಕಾಂಗ್ರೆಸ್ ಅಧಿವೇಶನದಲ್ಲಿ ರವೀಂದ್ರನಾಥ ಟ್ಯಾಗೋರ್ ಅವರು ಹಾಡಿದ್ದರು
ದೈನಂದಿನ ಕರಂಟ್ ಅಫೇರ್ಸ್ ಕ್ವಿಜ್‌ಗಾಗಿ ಈ ಲಿಂಕ್ ಬಳಸಿ
Test Your Knowledge!
Attempt daily current affairs quizzes to boost your exam readiness.
Discussion & Comments (0)
Have a query or thoughts about this current affair?
No comments on this article yet. Be the first to share your thoughts!
Stay Updated with KPSC Vaani
Get instant notifications for exam alerts, question papers, syllabus, and results directly on your phone.