➤ ಭಾರತೀಯ ನೌಕಾಪಡೆಯ ತರಬೇತಿ ನೌಕೆಯಾದ ಐಎನ್‌ಎಸ್ ಸುದರ್ಶಿನಿ (INS Sudarshini) ತನ್ನ ಐತಿಹಾಸಿಕ 'ಲೋಕಯಾನ-26' ಎಂಬ 10 ತಿಂಗಳ ದೀರ್ಘಾವಧಿಯ ಅಂತರಾಷ್ಟ್ರೀಯ ಸಮುದ್ರಯಾನವನ್ನು ಆರಂಭಿಸಿದೆ. ಕೊಚ್ಚಿಯ ನೌಕಾ ನೆಲೆ ಹಾಗೂ ದಕ್ಷಿಣ ನೌಕಾ ಕಮಾಂಡ್‌ನ ಮುಖ್ಯಸ್ಥರಾದ ವೈಸ್ ಅಡ್ಮಿರಲ್ ಸಮೀರ್ ಸಕ್ಷೇನಾ ಅವರು ಈ ಯಾನಕ್ಕೆ ಹಸಿರು ನಿಶಾನೆ ತೋರಿದರು.
➤ ಈ ನೌಕೆಯು ಸುಮಾರು 10 ತಿಂಗಳಲ್ಲಿ 22,000 ನಾಟಿಕಲ್ ಮೈಲು ದೂರವನ್ನು ಕ್ರಮಿಸಲಿದೆ. ಒಟ್ಟು 13 ದೇಶಗಳ 18 ಬಂದರುಗಳಿಗೆ ಭೇಟಿ ನೀಡುವ ಮೂಲಕ ಭಾರತದ ರಾಯಭಾರಿಯಾಗಿ ಕಾರ್ಯನಿರ್ವಹಿಸಲಿದೆ. ಈ ಯಾನದಲ್ಲಿ ಭಾರತೀಯ ನೌಕಾಪಡೆ ಮತ್ತು ಕರಾವಳಿ ರಕ್ಷಣಾ ಪಡೆಯ ಸುಮಾರು 200ಕ್ಕೂ ಹೆಚ್ಚು ತರಬೇತಿ ನಾವಿಕರು ಸಾಂಪ್ರದಾಯಿಕ ನೌಕಾಯಾನ ಮತ್ತು ನಾಯಕತ್ವದ ತರಬೇತಿ ಪಡೆಯಲಿದ್ದಾರೆ.
ವಿಶೇಷ ಕಾರ್ಯಕ್ರಮಗಳು:
=> ಫ್ರಾನ್ಸ್‌ನಲ್ಲಿ ನಡೆಯುವ 'Escale à Sète' ಸಮುದ್ರ ಹಬ್ಬದಲ್ಲಿ ಭಾಗವಹಿಸುವಿಕೆ.
=> ಅಮೆರಿಕದ 250ನೇ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ನ್ಯೂಯಾರ್ಕ್‌ನಲ್ಲಿ ನಡೆಯಲಿರುವ 'SAIL 250' ಅಂತರಾಷ್ಟ್ರೀಯ ಹಡಗು ಪರೇಡ್‌ನಲ್ಲಿ ಭಾಗಿ.
➤ ಉದ್ದೇಶ: ಜಗತ್ತೇ ಒಂದು ಕುಟುಂಬ ಎಂಬ ಸಂದೇಶ ಸಾರುವುದು. 'ಪ್ರಾಂತೀಯ ಭದ್ರತೆ ಮತ್ತು ಅಭಿವೃದ್ಧಿಗೆ ಪರಸ್ಪರ ಸಹಕಾರ' (Maritime Cooperation for Security and Growth in the Region) ಎಂಬ ಭಾರತದ ದೃಷ್ಟಿಕೋನವನ್ನು ಉತ್ತೇಜಿಸುವುದು ಮತ್ತು ಸಾಗರ್ (SAGAR): 'Security and Growth for All in the Region' ಎಂಬ ಕಾರ್ಯತಂತ್ರದ ಭಾಗವಾಗಿ ಸ್ನೇಹ ಹಸ್ತ ಚಾಚುವುದು.
➤ ಐಎನ್‌ಎಸ್ ಸುದರ್ಶಿನಿ: ಇದು ಗೋವಾ ಶಿಪ್‌ಯಾರ್ಡ್ ಲಿಮಿಟೆಡ್‌ನಲ್ಲಿ ದೇಶೀಯವಾಗಿ ನಿರ್ಮಿಸಲ್ಪಟ್ಟ ತರಬೇತಿ ನೌಕೆಯಾಗಿದೆ. ಇದು ಮೂರು ಪಟಗಳಿರುವ (Three-masted sailing ship) ಹಡಗಾಗಿದ್ದು, ಯುವ ನಾವಿಕರಿಗೆ ಪ್ರಾಚೀನ ನೌಕಾಯಾನ ಕಲೆಗಳನ್ನು ಕಲಿಸಲು ಬಳಸಲಾಗುತ್ತದೆ.
ಶುಕ್ರವಾರ, 23 ಜನವರಿ 2026
11:19 ಪೂರ್ವಾಹ್ನ
Daily PDF
ಐಎನ್‌ಎಸ್ ಸುದರ್ಶಿನಿ 'ಲೋಕಯಾನ-26': ಭಾರತದ ಸಮುದ್ರ ಶಕ್ತಿಯ ಜಾಗತಿಕ ಪಯಣ ಆರಂಭ.
Authored by:
Akshata Halli