* ವಾಯು ಗುಣಮಟ್ಟ ಸೂಚ್ಯಂಕ (ಏರ್ ಕ್ವಾಲಿಟಿ ಇಂಡೆಕ್ಸ್)ವು 2024ರ ವಿಶ್ವದ ಅತ್ಯಂತ ಮಾಲಿನ್ಯ ನಗರಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಜಗತ್ತಿನ ಅತ್ಯಂತ ಕೆಟ್ಟ ಮಾಲಿನ್ಯ ನಗರಗಳ ಪಟ್ಟಿಯಲ್ಲಿ ಭಾರತದ ರಾಜಧಾನಿ ದೆಹಲಿ 3ನೇ ಸ್ಥಾನವನ್ನು ಪಡೆದುಕೊಂಡಿದೆ. ಮೊದಲ ಸ್ಥಾನದಲ್ಲಿ ಆಸ್ಟ್ರೇಲಿಯಾದ ಮೌಂಟ್ ಇಸಾ ನಂ,1 ಮಾಲಿನ್ಯ ನಗರ ಎಂಬ ಕುಖ್ಯಾತಿಗೆ ಪಾತ್ರವಾಗಿದೆ.
* ಪಾಕಿಸ್ತಾನದ ಪೇಶಾವರ 2ನೇ ಸ್ಥಾನದಲ್ಲಿದೆ. ವಿಶ್ವದ ಅತ್ಯಂತ ಮಾಲಿನ್ಯ ನಗರಗಳ ಟಾಪ್ 10 ಪಟ್ಟಿಯಲ್ಲಿ ಭಾರತದ ಒಟ್ಟು 6 ನಗರಗಳು ಸ್ಥಾನ ಪಡೆದುಕೊಂಡಿವೆ.
* ಎಕ್ಯೂಐ ಎಂಬುದು ಗಾಳಿಯಲ್ಲಿನ ವಿವಿಧ ಮಾಲಿನ್ಯಕಾರಕಗಳ ಸಾಂದ್ರತೆಯ ಅಳತೆಯಾಗಿದೆ. ವಾಯು ಗುಣಮಟ್ಟ ಮಾಪನ ಸೂಚ್ಯಂಕದ ಅನುಸಾರ, 0 ಮತ್ತು 50 ರ ನಡುವಿನ ಎಕ್ಯೂಐ ಅನ್ನು 'ಉತ್ತಮ', 51 ಮತ್ತು 100 'ತೃಪ್ತಿದಾಯಕ', 101 ಮತ್ತು 200 'ಮಧ್ಯಮ', 201 ಮತ್ತು 300 'ಕಳಪೆ', 301 ಮತ್ತು 400 'ಅತಿ ಕಳಪೆ', ಮತ್ತು 401 ಮತ್ತು 500 'ತೀವ್ರ' ಎಂದು ಪರಿಗಣಿಸಲಾಗುತ್ತದೆ.
* ಅತ್ಯಂತ ಕೆಟ್ಟ ಮಾಲಿನ್ಯ ನಗರಗಳ ಪಟ್ಟಿಯಲ್ಲಿ ಭಾರತದ ದೆಹಲಿ, ಉತ್ತರ ಪ್ರದೇಶ ಮತ್ತು ಹರಿಯಾಣದ ನಗರಗಳು ಸ್ಥಾನ ಪಡೆದುಕೊಂಡಿವೆ. ಚಂಡೀಗಢ, ಫರಿದಾಬಾದ್, ಗಾಜಿಯಾಬಾದ್, ಗುರ್ ಗಾಂವ್, ಜಲಂಧರ್ ಮತ್ತು ಹಿಸ್ಸಾರ್ ಅಗ್ರ ಸ್ಥಾನದಲ್ಲಿವೆ.
* ವಿಶ್ವದ ಅತ್ಯಂತ ಮಾಲಿನ್ಯ ನಗರಗಳ ಟಾಪ್ 10 ಪಟ್ಟಿ :
1. ಮೌಂಟ್ ಇಸಾ, ಆಸ್ಟ್ರೇಲಿಯಾ - 358
2. ಪೇಶಾವರ, ಪಾಕಿಸ್ತಾನ – 304
3. ಹೊಸದಿಲ್ಲಿ, ಭಾರತ - 296
4. ಕಲ್ಯಾಣ್ ನಗರ, ಭಾರತ- 278
5. ಬೆಹಬಹಾನ್, ಇರಾನ್ - 258
6. ಸೋನಿಪತ್, ಭಾರತ - 253
7. ಟೀರಾ, ಇಸ್ರೇಲ್ - 253
8. ಪಣಜಿ, ಭಾರತ - 247
9. ಕರ್ಚೋರಮ್, ಭಾರತ - 246
10. ರೋಸ್ಟಕ್, ಭಾರತ - 244
ಬುಧವಾರ, 23 ಅಕ್ಟೋಬರ್ 2024
11:19 ಪೂರ್ವಾಹ್ನ
Daily PDF
ವಿಶ್ವದ ಅತ್ಯಂತ ಮಾಲಿನ್ಯ ನಗರಗಳ ಪಟ್ಟಿ : ಆಸ್ಟ್ರೇಲಿಯಾದ ಮೌಂಟ್ ಇಸಾ ವಿಶ್ವದ ಅತ್ಯಂತ ಮಾಲಿನ್ಯ ನಗರ
Authored by:
Yallamma G