* ಜಗತ್ತಿನ ಪ್ರಖ್ಯಾತ ಸರ್ಜ್‌ ಇಂಜಿನ್‌ ಗೂಗಲ್‌ ಸಂಸ್ಥೆಯಲ್ಲಿ ಹೊಸ ಮುಖ್ಯ ತಂತ್ರಜ್ಞ  Chief Technology Officer.(CTO)ರಾಗಿ ಪ್ರಭಾಕರ್‌ ರಾಘವನ್‌ ಅವರು ನೇಮಕಗೊಂಡಿದ್ದಾರೆ. ಈಗ ಗೂಗಲ್ ಎಕ್ಸಿಕ್ಯೂಟಿವ್ ನಿಕ್ ಫಾಕ್ಸ್ ಅವರ ಸ್ಥಾನಕ್ಕೆ ರಾಘವನ್ ಅವರು ಬರಲಿದ್ದಾರೆ.
* ಪ್ರಭಾಕರ್‌ ರಾಘವನ್‌ ಅವರು ಮದ್ರಾಸ್​​ ಇಂಡಿಯನ್​ ಇನ್​ಸ್ಟಿಟ್ಯೂಟ್​​ ಆಫ್​ ಟೆಕ್ನಾಲಜಿಯಲ್ಲಿ ಬ್ಯಾಚುಲರ್​ ಆಫ್​ ಟೆಕ್ನಾಲಜಿ ಮತ್ತು ಪಿಎಚ್​ಡಿ ಪಡೆದಿದ್ದಾರೆ. ಯುಸಿ ಬ್ಲರ್ಕಿಯಿಂದ ಎಲೆಕ್ಟ್ರಿಕ್​ ಎಂಜಿನಿಯರಿಂಗ್​​ ಮತ್ತು ಕಂಪ್ಯೂಟರ್​​ ಸೈನ್ಸ್​ ಮಾಡಿದ್ದಾರೆ.
* ಪ್ರಭಾಕರ್​ ರಾಘವನ್​ ನ್ಯಾಷನಲ್​ ಅಕಾಡೆಮಿ ಆಫ್​​ ಎಂಜಿನಿಯರಿಂಗ್​ನ ಸದಸ್ಯರಾಗಿದ್ದು, ಇನ್​​ಸ್ಟಿಟ್ಯೂಟ್​​ ಆಫ್​​ ಎಲೆಕ್ಟ್ರಿಕಲ್​​ ಮತ್ತು ಎಲೆಕ್ಟ್ರಾನಿಕ್ಸ್​ ಇಂಜಿನಿಯರ್ಸ್​​ ಮತ್ತು ಅಸೋಸಿಯೇಷನ್​ ಫಾರ್​ ಕಂಪ್ಯೂಟಿಂಗ್​​ ಮೆಷಿನರಿಯಲ್ಲಿ ಗುರುತಿಸಿಕೊಂಡಿದ್ದಾರೆ. ಇದಲ್ಲದೆ, ಸ್ಟ್ಯಾನ್​ಫೋರ್ಡ್​​​ ವಿಶ್ವವಿದ್ಯಾನಿಲಯದಲ್ಲಿ ಸಲಹಾ ಪ್ರಾಧ್ಯಾಪಕರಾಗಿಯೂ ಕೆಲಸ ಮಾಡಿದ್ದಾರೆ. ಎಸಿಎಮ್​ನ ಮುಖ್ಯ ಸಂಪಾದಕರು ಆಗಿದ್ದರು. 
* 2009ರಲ್ಲಿ ಪ್ರಭಾಕರ್‌ ರಾಘವನ್‌ ಅವರಿಗೆ ಬೊಲೆಗ್ನಾ ವಿಶ್ವವಿದ್ಯಾಲಯ ಲಾರಿಯಾ ಗೌರವಾನಿತ್ವ ಸನ್ಮಾನವನ್ನು ಮಾಡಿ ಪ್ರಶಸ್ತಿಯನ್ನು ನೀಡಿದೆ.
* ಗೂಗಲ್​ ಸೇರುವ ಮೊದಲು Yahooನಲ್ಲಿ ಕೆಲಸ ಮಾಡುತ್ತಿದ್ದರು. ಜಾಹೀರಾತು ಶ್ರೇಯಾಂಕ, ಮಾರುಕಟ್ಟೆ ವಿನ್ಯಾಸದ ಮೇಲೆ ಹೆಚ್ಚು ಕೆಲಸ ಮಾಡುತ್ತಿದ್ದರು. ಐಬಿಎಮ್​ನಲ್ಲಿ 14 ವರ್ಷಗಳ ಕಾಲ ಕಾರ್ಯ ನಿರ್ವಹಿಸಿದ್ದಾರೆ.