* ಯುಕೆ ಮೂಲದ ಎಚ್ಎಸ್ಬಿಸಿ (HSBC The Hongkong and Shanghai Banking Corporation Limited) ಬ್ಯಾಂಕ್ನ 159 ವರ್ಷ ಇತಿಹಾಸದಲ್ಲಿ ಮೊದಲ ಬಾರಿಗೆ ಮಹಿಳೆಯೊಬ್ಬರು ಎಕ್ಸಿಕ್ಯೂಟಿವ್ ಹುದ್ದೆ ಅಲಂಕರಿಸಿದ್ದಾರೆ.
* ಭಾರತದ ಮೂಲದ ಮಹಿಳೆಯೇ ಈ ಗೌರವ ಪಡೆದಿರುವುದು ವಿಶೇಷವಾಗಿದೆ. ಪಂಜಾಬ್ ಸಂಜಾತೆಯಾದ ಪಾಮ್ ಕೌರ್ (Pam Kaur) ಅವರು ಎಚ್ಎಸ್ಬಿಸಿ ಹೋಲ್ಡಿಂಗ್ಸ್ನ ಸಿಎಫ್ಒ ಆಗಿ ನೇಮಕವಾಗಿದ್ದಾರೆ.
* ಹಲವು ಜಾಗತಿಕ ಪ್ರಮುಖ ಸಂಸ್ಥೆಗಳಿಗೆ ಭಾರತ ಮೂಲದ ಸಿಇಒಗಳೇ ಹಲವರಿದ್ದಾರೆ. ಆದರೆ ಪಾಮ್ ಕೌರ್ (Pam Kaur) ಹೊಸ ಇತಿಹಾಸ ನಿರ್ಮಿಸಿದ್ದಾರೆ.
* ಹದಿನಾರು ದಶಕಗಳಷ್ಟು ಸುದೀರ್ಘ ಇತಿಹಾಸ ಇರುವ ಎಚ್ಎಸ್ಬಿಸಿಯಲ್ಲಿ ಮೊದಲ ಬಾರಿಗೆ ಎಕ್ಸಿಕ್ಯೂಟಿವ್ ಹುದ್ದೆ ಪಡೆದಿದ್ದಾರೆ. ಅದೂ ಆ ಸಾಧನೆ ಬಂದಿದ್ದು ಭಾರತ ಮೂಲದ ವ್ಯಕ್ತಿಯಿಂದ ಎಂಬುದು ಹೆಮ್ಮೆಯ ವಿಚಾರ.
* ಈ ಮುಂಚೆ ಸಿಎಫ್ಒ ಆಗಿದ್ದ ಜಾರ್ಜಸ್ ಎಲೆಡೆರಿ (Georges Elhedery) ಅವರು ಸಿಇಒ ಆಗಿ ಜವಾಬ್ದಾರಿ ಪಡೆದಿದ್ದರು. ಈ ವರ್ಷದಿಂದ ಸಿಎಫ್ಒ Chief financial officer (CFO) ಸ್ಥಾನ ಹಾಗೇ ಉಳಿದುಕೊಂಡಿತ್ತು. 2013ರಿಂದಲೂ ಎಚ್ಎಸ್ಬಿಸಿ ಸಂಸ್ಥೆಯಲ್ಲೇ ಕೆಲಸ ಮಾಡುತ್ತಿರುವ ಪಾಮ್ ಕೌರ್ ಅವರ ಹೆಸರನ್ನು ಜಾರ್ಜಸ್ ಅವರೇ ಸೂಚಿಸಿದ್ದರು. ಅಕ್ಟೋಬರ್ 22 ರಂದು ಕೌರ್ ಸಿಎಫ್ಒ ಆಗಿ ನೇಮಕವಾಗಿದ್ದಾರೆ.
* ಪಂಜಾಬ್ನಲ್ಲಿ ಹುಟ್ಟಿದ ಪಾಮ್ ಕೌರ್ ಅವರು ಪಂಜಾಬ್ ಯೂನಿವರ್ಸಿಟಿಯಿಂದ ಬಿಕಾಂ ಮತ್ತು ಎಂಬಿಎ ಮಾಡಿದ್ದಾರೆ. ಇಂಗ್ಲೆಂಡ್ನಲ್ಲಿ ಚಾರ್ಟರ್ಡ್ ಅಕೌಂಟೆಂಟ್ ಓದಿದ್ದಾರೆ.
* ಸಿಟಿ ಗ್ರೂಪ್, ಡಾಯ್ಷೆ ಬ್ಯಾಂಕ್ ಮೊದಲಾದ ಬ್ಯಾಂಕುಗಳಲ್ಲಿ ಗ್ರೂಪ್ ಆಡಿಟ್ನ ಮುಖ್ಯ ಹುದ್ದೆಗಳನ್ನು ನಿಭಾಯಿಸಿದ್ದಾರೆ. ರಾಯಲ್ ಬ್ಯಾಂಕ್ ಆಫ್ ಸ್ಕಾಟ್ಲ್ಯಾಂಡ್ ಗ್ರೂಪ್ನಲ್ಲಿ ಸಿಎಫ್ಒ ಮತ್ತು ಸಿಒಒ ಹುದ್ದೆ ಕೂಡ ಹೊಂದಿದ್ದರು.
* 2013ರಲ್ಲಿ ಅವರು ಎಚ್ಎಸ್ಬಿಸಿ ಸಂಸ್ಥೆಯ ಇಂಟರ್ನಲ್ ಆಡಿಟ್ನ ಗ್ರೂಪ್ ಹೆಡ್ ಆಗಿ ನೇಮಕಗೊಂಡರು. 2020ರಲ್ಲಿ ಅವರನ್ನು ಗ್ರೂಪ್ ಚೀಫ್ ರಿಸ್ಕ್ ಆಫೀಸರ್ ಆಗಿ ನೇಮಕ ಮಾಡಲಾಯಿತು. ಪಾಮ್ ಕೌರ್ ಅವರು ಬ್ಯಾಂಕ್ನ ಗ್ರೂಪ್ ಎಂಡಿ ಆಗಿದ್ಧಾರೆ.
ಬುಧವಾರ, 23 ಅಕ್ಟೋಬರ್ 2024
9:12 ಪೂರ್ವಾಹ್ನ
Daily PDF
HSBC ಬ್ಯಾಂಕ್ ನ ಮೊದಲ ಮಹಿಳಾ CFO ಆಗಿ ಪಾಮ್ ಕೌರ್ ನೇಮಕ
Authored by:
Yallamma G