* ವಿಪ್ರೋ ಸಿಇಒ ಥಿಯೆರಿ ಡೆಲಾಪೋರ್ಟೆ ಅವರು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (ಸಿಇಒ) ಸ್ಥಾನಕ್ಕೆ ಏಪ್ರಿಲ್ 6 ರಂದು ರಾಜೀನಾಮೆ ನೀಡಿದ್ದಾರೆ. ಕಂಪನಿಯು ಈ ಮಾಹಿತಿಯನ್ನು ನಿಯಂತ್ರಕ ಫೈಲಿಂಗ್‌ನಲ್ಲಿ ಬಹಿರಂಗಪಡಿಸಿದೆ.
* ಸಾಫ್ಟ್‌ವೇರ್ ಮೇಜರ್ ಶ್ರೀನಿವಾಸ್ ಪಾಲ್ಲಿಯಾ ಅವರನ್ನು ವಿಪ್ರೋ ಕಂಪನಿಯ ನೂತನ ಸಿಇಒ ಮತ್ತು ಎಂಡಿ ಆಗಿ ನೇಮಿಸಲಾಗಿದ್ದು, ಪಾಲ್ಲಿಯಾ ಅವರು ಏಪ್ರಿಲ್ 7 ರಂದು ಅಧಿಕಾರವನ್ನು ವಹಿಸಿಕೊಂಡಿದ್ದಾರೆ.
* ಪಾಲ್ಲಿಯಾ ಅವರು ಮೂರು ದಶಕಗಳಿಂದ ವಿಪ್ರೊದಲ್ಲಿದ್ದಾರೆ ಮತ್ತು ಇತ್ತೀಚೆಗಷ್ಟೇ ವಿಪ್ರೊದ ಅತಿದೊಡ್ಡ ಮತ್ತು ವೇಗವಾಗಿ ಬೆಳೆಯುತ್ತಿರುವ ಆಯಕಟ್ಟಿನ ಮಾರುಕಟ್ಟೆಯಾದ ಅಮೇರಿಕಾಸ್ 1 ಗೆ CEO ಆಗಿ ಸೇವೆ ಸಲ್ಲಿಸಿದ್ದಾರೆ. ಪಲ್ಲಿಯಾ ಅವರು ವಿಪ್ರೋ ಕಾರ್ಯಕಾರಿ ಮಂಡಳಿಯ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ.
* ಜುಲೈ 2020 ರಲ್ಲಿ ವಿಪ್ರೋ ಸಿಇಒ ಆಗಿ ಅಧಿಕಾರ ವಹಿಸಿಕೊಳ್ಳುವ ಮೊದಲು ಡೆಲಾಪೋರ್ಟೆ ಕ್ಯಾಪ್ಜೆಮಿನಿಯೊಂದಿಗೆ ಕೆಲಸ ಮಾಡಿದರು. ವಿಪ್ರೊದಲ್ಲಿ ಡೆಲಾಪೋರ್ಟೆ ಅವರ ವಾರ್ಷಿಕ ವೇತನ ರೂ 80 ಕೋಟಿ ಆಗಿತ್ತು.
* ಸಿಇಒ ಮತ್ತು ಎಂಡಿ ಆಗಿ ನನ್ನ ಅಧಿಕಾರಾವಧಿಯಲ್ಲಿ ನಾವು ಕಂಪನಿಯೊಳಗೆ ಗಮನಾರ್ಹವಾದ ರೂಪಾಂತರವನ್ನು ಕಂಡಿದ್ದೇವೆ ಅದು ಹಣಕಾಸಿನ ಬೆಳವಣಿಗೆಯನ್ನು ಮಾತ್ರವಲ್ಲದೆ ನಮ್ಮ ಸಹವರ್ತಿಗಳು, ಗ್ರಾಹಕರು ಮತ್ತು ಷೇರುದಾರರ ಮೇಲೆ ಧನಾತ್ಮಕ ಪರಿಣಾಮ ಬೀರಿದೆ" ಎಂದು ಡೆಲಾಪೋರ್ಟೆ ಹೇಳಿದರು.
ಸೋಮವಾರ, 08 ಎಪ್ರಿಲ್ 2024
11:02 ಪೂರ್ವಾಹ್ನ
Daily PDF
ವಿಪ್ರೋ ಸಿಇಒ ಥಿಯೆರಿ ಡೆಲಾಪೋರ್ಟೆ ಅವರು ಸಿಇಒ ಸ್ಥಾನಕ್ಕೆ ರಾಜೀನಾಮೆ
Authored by:
Yallamma G