* ಭಾರತದ ಬಡತನ ತಗ್ಗಿಸುವುದು ಬಹಳ ಮುಖ್ಯವಾದ ಕಾರ್ಯ ವಾಗಿದೆ ಲಕ್ಷಾಂತರ ಜನರ ಆರ್ಥಿಕ ವ್ಯವಸ್ಥೆಯ ಅಡಿಯಲ್ಲಿ ತಂದಿರುವ ಭಾರತದ ಡಿಜಿಟಲೀಕರಣದ ಮಾದರಿಯನ್ನು ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ ಅಧ್ಯಕ್ಷ ಡೆನಿಸ್ ಫ್ರಾನ್ಸಿಸ್ ಅವರು ಶ್ಲಾಘಿಸಿದ್ದಾರೆ.
* ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ ಅಧ್ಯಕ್ಷ ಡೆನಿಸ್ ಫ್ರಾನ್ಸಿಸ್ ಅವರು ಮಾತನಾಡಿ ಭಾರತದ ಈ ಡಿಜಿಟಲೀಕರಣದ ಪಾಠವನ್ನು ಜಾಗತಿಕ ಸಮುದಾಯದಜೊತೆ ಭಾರತ ಹಂಚಿಕೊಳ್ಳಬಹುದಾಗಿದೆ ಎಂದರು. ಡಿಜಿಟಲೀಕರಣ ಒಂದು ದೇಶದ ಅಭಿವೃದ್ಧಿಗೆ ಅತ್ಯಂತ ಪ್ರಮುಖವಾದದ್ದು. ಏಕೆಂದರೆ ಇದು ಉತ್ಪಾದಕತೆ ಹೆಚ್ಚಿಸುವ ಜೊತೆಗೆ ವೆಚ್ಚ ತಗ್ಗಿಸುತ್ತದೆ.
* ಭಾರತದಲ್ಲಿಈ ವರ್ಷ ಜನವರಿ 22ರಿಂದ 26ರವರೆಗೆ ಫ್ರಾನ್ಸಿಸ್ ಭಾರತಕ್ಕೆ ಅಧಿಕೃತ ಪ್ರವಾಸ ಕೈಗೊಂಡಿದ್ದರು. ಈ ಸಂದರ್ಭದಲ್ಲಿ ಅವರು ವಿದೇಶಾಂಗ ವ್ಯವಹಾರಗಳ ಸಚಿವ ಜೈಶಂಕರ್ ಜೊತೆ ದ್ವಿಪಕ್ಷೀಯ ಮಾತುಕತೆ ಕೂಡಾ ನೆಡೆಸಿದರು.
* ಭಾರತದ ದೇಶದ ಉದ್ದಗಲಕ್ಕೂ ಮಹಿಳೆಯರು, ರೈತರಿಗೆ ಡಿಜಿಟಲೀಕರಣ ನೆರವಾಗಿ ತಮ್ಮ ಮನೆಗಳು ಮತ್ತು ತೋಟಗಳಲ್ಲೇ ಕೆಲಸ ಮಾಡಿಕೊಂಡು ಬ್ಯಾಂಕ್ ಸಂಬಂಧಿತ ಎಲ್ಲ ವಹಿವಾಟುಗಳನ್ನು ಡಿಜಿಟಲ್ ಪಾವತಿಗಳ ಮೂಲಕ ಮಾಡುತ್ತಿದ್ದಾರೆ.
* ಭಾರತದ ಮೂಲ ಸೌಕರ್ಯ ಕ್ಷೇತ್ರದ ಭಾರತ ಮಾಡಿರುವ ಅಗಾಧ ಹೂಡಿಕೆಯನ್ನು ಕಂಡು ಚಕಿತನಾಗಿದ್ದೇನೆ ಎಂದು ಡೆನಿಸ್ ಫ್ರಾನ್ಸಿಸ್ ಅವರು ಹೇಳಿದ್ದಾರೆ.
ಸೋಮವಾರ, 08 ಎಪ್ರಿಲ್ 2024
1:03 ಅಪರಾಹ್ನ
Daily PDF
ಭಾರತ ಡಿಜಿಟಲೀಕರಣಕ್ಕೆ ವಿಶ್ವಸಂಸ್ಥೆ ಶ್ಲಾಘನೆ
Authored by:
Akshata Halli