* ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಹಾಗೂ ಆವಿಷ್ಕಾರ ವಿಭಾಗದಲ್ಲಿ ಅಸಾಧಾರಣ ಸಾಧನೆ ಮಾಡಿದ ವಿಜ್ಞಾನಿಗಳಿಗೆ ಪ್ರತಿ ವರ್ಷವೂ ರಾಷ್ಟ್ರೀಯ ವಿಜ್ಞಾನ ಪುರಸ್ಕಾರವನ್ನು ನೀಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ.
* ದೇಶದ ವಿಜ್ಞಾನ ಕ್ಷೇತ್ರದಲ್ಲಿ ಸಾಧನೆ ಮಾಡಿದವರಿಗೆ ವಿಜ್ಞಾನ ಶ್ರೀ ಮತ್ತು ವಿಜ್ಞಾನಿ ಶಾಂತಿ ಸ್ವರೂಪ ಭಟ್ಟಾಗರ್' ಪ್ರಶಸ್ತಿಯನ್ನು ವಿಜ್ಞಾನ ಮತ್ತು ಕೈಗಾರಿಕಾ ಸಂಶೋಧನೆ ಪರಿಷತ್ ನಿಂದ ಈ ಪ್ರಶಸ್ತಿಗಳನ್ನು ನೀಡಲಾಗುತ್ತದೆ.
* ಪ್ರತಿ ವರ್ಷ ಮೇ 11 ರ ರಾಷ್ಟ್ರೀಯ ತಂತ್ರಜ್ಞಾನ ದಿನದಂದು ಈ ಪ್ರಶಸ್ತಿಗಳನ್ನು ಘೋಷಿಸಲಾಗುತ್ತದೆ ಮತ್ತು 'ಚಂದ್ರಯಾನ -3 ರ ಯಶಸ್ಸಿಗಾಗಿ ಘೋಷಿಸಿರುವ ಆಗಸ್ಟ್ 23 ರ ಬಾಹ್ಯಾಕಾಶ ದಿನದಂದು ರಾಷ್ಟ್ರಪತಿ ಅವರು ಈ ವಿಜ್ಞಾನ ಶ್ರೀ ಮತ್ತು ವಿಜ್ಞಾನಿ ಶಾಂತಿ ಸ್ವರೂಪ ಭಟ್ಟಾಗರ್' ಪ್ರಶಸ್ತಿಗಳನ್ನೂ ಪ್ರದಾನ ಮಾಡಲಿದ್ದಾರೆ.
* ಭೌತ ವಿಜ್ಞಾನ, ರಸಾಯನ ವಿಜ್ಞಾನ, ಜೈವಿಕ ವಿಜ್ಞಾನ, ಗಣಿತ, ಕಂಪ್ಯೂಟರ್ ವಿಜ್ಞಾನ, ಭೂವಿಜ್ಞಾನ, ಔಷಧಿ ವಿಜ್ಞಾನ, ಎಂಜಿನಿಯರಿಂಗ್, ಕೃಷಿ, ಪರಿಸರ, ತಂತ್ರಜ್ಞಾನ ಮತ್ತು ಅನ್ವೇಷಣೆ, ಪರಮಾಣು ಶಕ್ತಿ, ಬಾಹ್ಯಾಕಾಶ ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರಗಳಲ್ಲಿನ ಸಾಧನೆಯನ್ನು ಪ್ರಶಸ್ತಿಗೆ ಪರಿಗಣಿಸಲಾಗುತ್ತದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.
* ವಿಜ್ಞಾನಶ್ರೀ ಹಾಗೂ ವಿಜ್ಞಾನ ಯುವ ಶಾಂತಿ ಸ್ವರೂಪ ಭಟ್ನಾಗರ್ ಪುರಸ್ಕೃತರಿಗೆ ತಲಾ 5 ಲಕ್ಷ ನಗದು ಬಹುಮಾನ ಮತ್ತು ಸರಕಾರಿ ಸೇವೆಯಲ್ಲಿ ಇರುವವರೆಗೂ ಪ್ರತಿ ಮಾಸಿಕ 15 ಸಾವಿರ ಗೌರವ ಧನವನ್ನು ನೀಡಲಾಗುತ್ತದೆ.
ಶುಕ್ರವಾರ, 22 ಸೆಪ್ಟೆಂಬರ್ 2023
10:57 ಪೂರ್ವಾಹ್ನ
Daily PDF
ವಿಜ್ಞಾನಗಳಿಗೆ 'ವಿಜ್ಞಾನ ಶ್ರೀ' ಹಾಗೂ ವಿಜ್ಞಾನ ಯುವ ಶಾಂತಿ ಸ್ವರೂಪ ಭಟ್ನಾಗರ್' ಪ್ರಶಸ್ತಿ ಘೋಷಣೆ
Authored by:
Yallamma G