* ವಿದೇಶೀ ವಿನಿಮಯ ದೇಶದ ವಿದೇಶಿ ವಿನಿಮಯ ಮೀಸಲು(ಫಾರೆಕ್ಸ್) ಸಂಗ್ರಹದಲ್ಲಿ ಸತತ ಎರಡನೇ ವಾರವೂ ಏರಿಕೆಯಾಗಿದ್ದು, ನವೆಂಬರ್ 24ಕ್ಕೆ ಕೊನೆಗೊಳ್ಳುವ ವಾರದಲ್ಲಿ ವಿದೇಶಿ ವಿನಿಮಯ ಸಂಗ್ರಹದಲ್ಲಿ 2.53 ಶತಕೋಟಿ ಡಾಲರ್ ಹೆಚ್ಚಳವಾಗಿದೆ.
* ರಿಸರ್ವ್ ಬ್ಯಾಂಕ್ ಅಂಕಿ-ಅಂಶಗಳ ಪ್ರಕಾರ, ವಿದೇಶಿ ವಿನಿಮಯ ಮೀಸಲು ಈ ಏರಿಕೆಯೊಂದಿಗೆ 597.39 ಶತಕೋಟಿ ಡಾಲರ್‌ಗಳಿಗೆ ತಲುಪಿದೆ. ಇದು ಕಳೆದ ವಾರ 595.39 ಶತಕೋಟಿ ಡಾಲರ್‌ಗಳಷ್ಟಿತ್ತು.
* ಮೀಸಲಿನಲ್ಲಿ ಪ್ರಮುಖ ಭಾಗವಾದ ವಿದೇಶಿ ಕರೆನ್ಸಿ ಆಸ್ತಿಯು ವಿನಿಮಯ ಸಂಗ್ರಹವು ನವೆಂಬರ್ 24ರ ಹೊತ್ತಿಗೆ 2.14 ಶತಕೋಟಿ ಡಾಲರ್ ಏರಿಕೆಯಾಗಿದ್ದು, 528.53 ಶತಕೋಟಿ ಡಾಲರ್‌ಗೆ ಮುಟ್ಟಿದೆ. ಕಳೆದ ಎರಡು ವಾರಗಳಲ್ಲಿ ವಿದೇಶಿ ವಿನಿಮಯ ಸಂಗ್ರಹದಲ್ಲಿ ಸುಮಾರು 7.50 ಶತಕೋಟಿ ಡಾಲರ್‌ಗಳಷ್ಟು ಹೆಚ್ಚಳವಾಗಿದೆ.
ವಿದೇಶಿ ವಿನಿಮಯ ಸಂಗ್ರಹ ಹೆಚ್ಚಳ
Published by Tajabi Pathan
04 ಡಿಸೆಂಬರ್ 2023