* ದಕ್ಷಿಣ ಕೊರಿಯಾ ತನ್ನ ಮೊದಲ ಸೇನಾ ಬೇಹುಗಾರಿಕಾ ಉಪಗ್ರಹವನ್ನು ಉಡಾವಣೆ ಮಾಡಿದೆ. ಫಾಲ್ಕನ್ -9 ರಾಕೆಟ್ ಮೂಲಕ ಕ್ಯಾಲಿಫೋರ್ನಿಯಾದ ವಂಡೆನ್‌ಬರ್ಗ್ ಬಾಹ್ಯಾಕಾಶ ನೆಲೆಯಿಂದ ನಭಕ್ಕೆ ಕಳುಹಿಸಿದೆ.
* ಸ್ಪೇಸ್ ಎಕ್ಸ್‌ನೊಂದಿಗಿನ ಒಪ್ಪಂದದ ಪ್ರಕಾರ, 2025ರ ಒಳಗಾಗಿ ದಕ್ಷಿಣ ಕೊರಿಯಾ ಇಂಥ ಐದು ಉಪಗ್ರಹಗಳನ್ನು ಬಾಹ್ಯಾಕಾಶಕ್ಕೆ ಕಳುಹಿಸಲಿದೆ. ದಕ್ಷಿಣ ಕೊರಿಯಾ ಇದುವರೆಗೂ ಬಾಹ್ಯಾಕಾಶದಲ್ಲಿ ಸ್ವಂತ ಸೇನಾ ಬೇಹುಗಾರಿಕಾ ಉಪಗ್ರಹವನ್ನು ಹೊಂದಿರಲಿಲ್ಲ.
* ಉತ್ತರ ಕೊರಿಯಾದ ಚಲನವನಗಳ ಮೇಲೆ ನಿಗಾವಹಿಸಲು ಅಮೆರಿಕದ ಉಪಗ್ರಹವನ್ನು ಅವಲ೦ಬಿಸಿತ್ತು.'ಉಪಗ್ರಹದಿಂದ ದೇಶವು ಸ್ವತಂತ್ರ ಬಾಹ್ಯಾಕಾಶ ಕಣ್ಣಾವಲು ವ್ಯವಸ್ಥೆಯನ್ನು ಹೊಂದಲಿದೆ' ಎಂದು ರಕ್ಷಣಾ ಸಚಿವಾಲಯ ಹೇಳಿದೆ.
ದಕ್ಷಿಣ ಕೊರಿಯಾ : ಸೇನಾ ಬೇಹುಗಾರಿಕಾ ಉಪಗ್ರಹ ಉಡಾವಣೆ
Published by Tajabi Pathan
04 ಡಿಸೆಂಬರ್ 2023