* 'ಚಂದ್ರಯಾನ-3ರ ವಿಕ್ರಮ್ ಚಂದ್ರನ ಮೇಲಿಳಿದ ಸ್ಥಳವನ್ನು 'ಶಿವಶಕ್ತಿ ಪಾಯಿಂಟ್' ಎಂದು ನಾಮಕರಣ ಮಾಡಲಾಗುವುದು' ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಘೋಷಿಸಿದರು.
* 'ಚಂದ್ರಯಾನ-3 ಚಂದ್ರನ ಮೇಲಿಳಿದ ನೆನಪಿಗಾಗಿ ಆಗಸ್ಟ್ 23 ಅನ್ನು ಇನ್ನು ಮುಂದೆ ರಾಷ್ಟ್ರೀಯ ಬಾಹ್ಯಾಕಾಶ ದಿನವನ್ನಾಗಿ ಆಚರಿಸಲಾಗುವುದು' ಎಂದು ಪ್ರಧಾನಿ ನರೇಂದ್ರ ಮೋದಿ ಪ್ರಕಟಿಸಿದರು.
* ಚಂದ್ರಯಾನ- 2 ಪತನಗೊಂಡ ಸ್ಥಳಕ್ಕೆ ತಿರಂಗಾ ಪಾಯಿಂಟ್ ಎಂದು ಹೆಸರಿಸಲಾಗಿದೆ.
* ಪೀಣ್ಯದಲ್ಲಿರುವ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ಇಸ್ರೋ) ಟೆಲಿಮೆಟ್ರಿ ಟ್ರ್ಯಾಕಿಂಗ್ ಕಮಾಂಡ್ ಸೆಂಟರ್‌ನಲ್ಲಿ ಆಗಸ್ಟ್ 26 ರಂದು ವಿಜ್ಞಾನಿಗಳನ್ನು 'ಇಂತಹ ಅಧ್ಯಯನ ನೌಕೆಗಳು ಇಳಿದ ಸ್ಥಳಕ್ಕೆ ನಾಮಕರಣ ಮಾಡುವ ಪರಂಪರೆ ವೈಜ್ಞಾನಿಕ ಕ್ಷೇತ್ರದಲ್ಲಿದೆ.
* 'ಶಿವಶಕ್ತಿ ಪಾಯಿಂಟ್' : 'ಶಿವ ಎಂದರೆ ಮನುಕುಲದ ಕಲ್ಯಾಣಕ್ಕಾಗಿ ನಿರ್ಣಯ ಕೈಗೊಳ್ಳುವುದು. ಶಕ್ತಿ ಎಂದರೆ ಆ ನಿರ್ಣಯಗಳನ್ನು ಅನುಷ್ಠಾನಕ್ಕೆ ತರಲು ಬೇಕಾದ ಬಲ ಎಂದರ್ಥ. ಶಿವಶಕ್ತಿ ಹಿಮಾಲಯದಿಂದ ಪಾಯಿಂಟ್ ಕನ್ಯಾಕುಮಾರಿ. ವರೆಗಿನ ಪ್ರದೇಶಗಳನ್ನು ಜೋಡಿಸಲಿದೆ' ಎಂದು ತಿಳಿಸಿದ್ದರು.
* ವಿಜ್ಞಾನ, ತಂತ್ರಜ್ಞಾನ ಮತ್ತು ಬಾಹ್ಯಾಕಾಶ ವಿಜ್ಞಾನಕ್ಕೆ ಸಂಬಂಧಿಸಿದ ಚಟುವಟಿಕೆಗಳನ್ನು ಪ್ರೋತ್ಸಾಹಿಸುವುದಕ್ಕಾಗಿ ಆಗಸ್ಟ್ 23 ರಾಷ್ಟ್ರೀಯ ಬಾಹ್ಯಾಕಾಶ ದಿನವನ್ನು ಮೀಸಲಿಡಲಾಗುವುದು ಎಂದು ತಿಳಿಸಿದ್ದಾರೆ.
'ತ್ರಿ' ವಿಕ್ರಮ ನೆಲೆಯೀಗ 'ಶಿವಶಕ್ತಿ ಪಾಯಿಂಟ್' ಎಂದು ನಾಮಕರಣ
Published by Yallamma G
28 ಆಗಸ್ಟ್ 2023