* ಅಪರೂಪದ ಬಿಳಿ ತಿಮಿಂಗಿಲವೊಂದು ಇತ್ತೀಚೆಗೆ ಥೈಲ್ಯಾಂಡ್ ನ ಫುಕೆಟ್ (Phuket) ಪ್ರಾಂತ್ಯದಲ್ಲಿ ಕಂಡು ಬಂದಿದೆ. 2015 ರಲ್ಲಿ ಮೊದಲ ಬಾರಿಗೆ ಜೀವಂತ 'ಒಮುರಾ ಬಿಳಿ' ತಿಮಿಂಗಿಲ ಪತ್ತೆಯಾಗಿತ್ತು
* ಒಮುರಾ ತಿಮಿಂಗಿಲಗಳು ಸಾಮಾನ್ಯವಾಗಿ ಆಗ್ನೇಯ ಏಷ್ಯಾದ ಸಮುದ್ರಗಳು ಮತ್ತು ಜಪಾನ್‌ನ ದಕ್ಷಿಣದ ನೀರಿನಲ್ಲಿ ವಾಸಿಸುವ ಅಪರೂಪದ ಪ್ರಭೇದವೆಂದು ವರ್ಗೀಕರಿಸಲಾಗಿದೆ. ಸಾಂದರ್ಭಿಕವಾಗಿ ಅಂಡಮಾನ್ ಸಮುದ್ರ ಮತ್ತು ಥೈಲ್ಯಾಂಡ್ ಕೊಲ್ಲಿಯಲ್ಲಿ ಕಂಡುಬರುತ್ತದೆ.
* ಸಮುದ್ರ ಮತ್ತು ಕರಾವಳಿ ಸಂಪನ್ಮೂಲಗಳ ಇಲಾಖೆಯ ಹೊಸದಾಗಿ ನೇಮಕಗೊಂಡ ಮುಖ್ಯಸ್ಥ ಪಿನ್ಸಾಕ್ ಸುರಸವಾಡಿ, ಇಲಾಖೆಯ ಪ್ರಾಣಿ ತಜ್ಞರ ತಂಡವು ಅಲ್ಬಿನೋ ಒಮುರಾ ತಿಮಿಂಗಿಲವನ್ನು ಗುರುತಿಸಿದ ಪ್ರದೇಶವನ್ನು ಶೋಧಿಸಿದೆ ಆದರೆ ಇನ್ನೂ ಪತ್ತೆಯಾಗಿಲ್ಲ ಎಂದು ಬ್ಯಾಂಕಾಕ್ ಪೋಸ್ಟ್ ವರದಿ ಮಾಡಿದೆ.
ಥೈಲ್ಯಾಂಡ್ ನಲ್ಲಿ ಅಪರೂಪದ ಬಿಳಿ ತಿಮಿಂಗಿಲ ಪತ್ತೆ
Published by Yallamma G
16 ಜನವರಿ 2024