* ವಿಶ್ವ ಆರ್ಥಿಕ ವೇದಿಕೆಯ (ಡಬ್ಲ್ಯುಇಎಫ್) ದಾವೋಸ್ ಶೃಂಗದ ಮೊದಲ ದಿನವಾದ ಜನವರಿ 15 ರಂದು (ಸೋಮವಾರ) ಸಂಪತ್ತಿನ ಅಸಮಾನ ಹಂಚಿಕೆ ಕುರಿತು ಅಕ್ಸ್‌ಫ್ಯಾಮ್ ಸಂಸ್ಥೆ ಬಿಡುಗಡೆಗೊಳಿಸಿರುವ ವಾರ್ಷಿಕ ಸಮೀಕ್ಷೆಯಾಗಿದೆ.
* ವಿಶ್ವದ ಅತಿದೊಡ್ಡ ಹತ್ತು ಕಂಪನಿಗಳ ಪೈಕಿ ಏಳು ಕಂಪನಿಗಳ ಸಿಇಒ ಅಥವಾ ಪ್ರಮುಖ ಷೇರುದಾರರು ಕೋಟ್ಯಧಿಪತಿಗಳಾಗಿದ್ದಾರೆ ಎಂದು ಅಕ್ಸ್‌ಫ್ಯಾಮ್ ಸಂಸ್ಥೆ ತಿಳಿಸಿದೆ.
* ವಿಶ್ವದ ಪ್ರಮುಖ 148 ಕಂಪನಿಗಳು ₹149 ಲಕ್ಷ ಕೋಟಿ (1.8 ಟ್ರಿಲಿಯನ್ ಡಾಲರ್) ಲಾಭ ಗಳಿಸಿವೆ. ಮೂರು ವರ್ಷಗಳ ಅವಧಿಯಲ್ಲಿ ಅವು ಸರಾಸರಿ ಶೇ 52ರಷ್ಟು ಆದಾಯ ಗಳಿಸಿವೆ.
* ಜಗತ್ತಿನ ಶೇ 21ರಷ್ಟು ಜನಸಂಖ್ಯೆ ಹೊಂದಿರುವ ಹೊರತಾಗಿಯೂ ವಿಶ್ವದ ಉತ್ತರದಲ್ಲಿರುವ ಸಿರಿವಂತ ರಾಷ್ಟ್ರಗಳು ಜಾಗತಿಕ ಸಂಪತ್ತಿನ ಶೇ 69ರಷ್ಟು ಪಾಲನ್ನು ಹೊಂದಿವೆ. ವಿಶ್ವದ ಶೇ 74ಷ್ಟು ಕೋಟ್ಯಧಿಪತಿಗಳ ಸಂಪತ್ತಿನ ನೆಲೆಯೂ ಆಗಿದೆ.
* 2020ರಿಂದ ವಿಶ್ವದ ಐವರು ಉದ್ಯಮಿಗಳ ಅಸ್ತಿಯು ₹33 ಲಕ್ಷ ಕೋಟಿಯಿಂದ ₹72 ಲಕ್ಷ ಕೋಟಿಗೆ ಏರಿಕೆಯಾಗಿದೆ. ಈ ಉದ್ಯಮಿಗಳು ಒಂದು ಗಂಟೆಯಲ್ಲಿ ₹116 ಕೋಟಿ ಆದಾಯಗಳಿಸಿದ್ದಾರೆ. 
* ವಿಶ್ವದ ಅತಿದೊಡ್ಡ 7 ಕಂಪನಿಗಳ ಮಾರುಕಟ್ಟೆ ಬಂಡವಾಳವು ₹845 ಲಕ್ಷ ಕೋಟಿ ಆಗಿದೆ. ಇದು ಆಫ್ರಿಕಾ ಹಾಗೂ ಲ್ಯಾಟಿನ್ ಅಮೆರಿಕ ದೇಶಗಳ ಜಿಡಿಪಿಗೆ ಸಮನಾಗಿದೆ ಎಂದು ವಿವರಿಸಿದೆ.