* ಸಲಿಂಗ ವಿವಾಹವನ್ನು ಕಾನೂನುಬದ್ಧಗೊಳಿಸುವ ಮಸೂದೆಯನ್ನು ಮಾರ್ಚ್ 27 ರಂದು (ಬುಧವಾರ) ಥಾಯ್ಲೆಂಡ್ ಸಂಸತ್ತು ಅನುಮೋದಿಸಿದೆ. ಈ ಮಸೂದೆಗೆ ಥಾಯ್ಲೆಂಡ್ ರಾಜನಿಂದ ಅಂಗೀಕಾರ ದೊರೆಯಬೇಕಿದೆ.
* ಈಗಾಗಲೇ ಏಷ್ಯಾದ ತೈವಾನ್ ಮತ್ತು ನೇಪಾಳ ಈ ಕಾನೂನನ್ನು ಜಾರಿಗೆ ತಂದಿವೆ. ಥಾಯ್ಲೆಂಡ್ ಸಂಸತ್ತಿನ ಕೆಳಮನೆಯ 415 ಸದಸ್ಯರಲ್ಲಿ 400 ಸದಸ್ಯರು ಈ ಮಸೂದೆಗೆ ಒಪ್ಪಿಗೆ ಸೂಚಿಸಿದ್ದಾರೆ.
* ಯಾವುದೇ ಲಿಂಗದವರು ವಿವಾಹವಾದಲ್ಲಿ ಸಿಗಬೇಕಾದ ಸಮಾನ ಹಕ್ಕುಗಳನ್ನು ಕಾನೂನುಬದ್ಧಗೊಳಿಸಿದ ಮತ್ತು ಸಲಿಂಗ ವಿವಾಹಕ್ಕೆ ಅಧಿಕೃತ ಒಪ್ಪಿಗೆ ನೀಡಿದ ಆಗ್ನೇಯ ಏಷ್ಯಾದ ಮೊದಲ ರಾಷ್ಟ್ರವಾಗಿ ಥಾಯ್ಲೆಂಡ್ ಹೊರಹೊಮ್ಮಲಿದೆ.
* ಈ ಮಸೂದೆಯು ಕಾನೂನಾಗಿ ಜಾರಿಗೆ ಬಂದಮೇಲೆ ಪುರುಷ ಮತ್ತು ಮಹಿಳೆ, ಗಂಡ ಮತ್ತು ಹೆಂಡತಿ ಎಂಬ ಲಿಂಗವನ್ನು ಸೂಚಿಸುವ ಪದಗಳನ್ನು ವಿವಾಹ ಪಾಲುದಾರ (ಮ್ಯಾರೇಜ್ ಪಾರ್ಟನರ್) ಹಾಗೂ 'ವ್ಯಕ್ತಿ' ಎಂಬ ವೈಯಕ್ತಿಕ ಪದಗಳಿಗೆ ಬದಲಾಯಿಸಲು ನಾಗರಿಕ ಮತ್ತು ವಾಣಿಜ್ಯ ಸಂಹಿತೆಗೆ ತಿದ್ದುಪಡಿ ತರುವ ಅವಕಾಶ ಕಲ್ಪಿಸಲಿದೆ.
* ಥಾಯ್ಲೆಂಡ್ ಸಂಸತ್ತು ದಂಪತಿಗಳಿಗೆ ಸಂಪೂರ್ಣ ಕಾನೂನು, ವೈದ್ಯಕೀಯ ಮತ್ತು ಆರ್ಥಿಕ ಹಕ್ಕುಗಳನ್ನು ನೀಡುತ್ತದೆ.
ಥಾಯ್ಲೆಂಡ್ ‘ಸಲಿಂಗ ವಿವಾಹ ಕಾನೂನುಬದ್ಧ’ ಮಸೂದೆ ಅಂಗೀಕಾರ
Published by Bhagya R K
28 ಮಾರ್ಚ್ 2024