* ಮಾರ್ಚ್ 27 ರಂದು ರಾಜೀವ್ ಗಾಂಧಿ ಇಂಟರ್‌ನ್ಯಾಷನಲ್ ಸ್ಟೇಡಿಯಂನಲ್ಲಿ ನಡೆದ 17ನೇ ಆವೃತ್ತಿಯ ಐಪಿಎಲ್ನ ಒಂಬತ್ತನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಸನ್ರೈಸರ್ಸ್ ಹೈದರಾಬಾದ್ ಸುನಾಮಿ ಬ್ಯಾಟಿಂಗ್ ನಡೆಸಿದ್ದು, ಇಂಡಿಯನ್ ಪ್ರೀಮಿಯರ್ ಲೀಗ್ ದಾಖಲೆಗಳು ಧೂಳೀಪಟಗೊಂಡಿದೆ.
* ಮುಂಬೈ ಇಂಡಿಯನ್ಸ್ ವಿರುದ್ಧ 277 ರನ್ ಸಿಡಿಸಿ ಸನ್ರೈಸರ್ಸ್ ಹೈದರಾಬಾದ್ ಐಪಿಎಲ್ನಲ್ಲಿ ಹೊಸ ದಾಖಲೆ ಬರೆದಿದೆ. IPL ಲೀಗ್ ಇತಿಹಾಸದಲ್ಲೇ ಅತ್ಯಧಿಕ ರನ್ ಗಳಿಸಿದ ಮೊದಲ ತಂಡ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
* ಆರ್‌ಸಿಬಿ ತಂಡ 2013ರ ಏಪ್ರಿಲ್ 23 ರಂದು ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಪುಣೆ ವಾರಿಯರ್ಸ್ ತಂಡದ ವಿರುದ್ಧ 5 ವಿಕೆಟ್‌ಗೆ 263 ರನ್ ಬಾರಿಸಿದ್ದು ಈವರೆಗಿನ ಐಪಿಎಲ್ ದಾಖಲೆಯಾಗಿತ್ತು. 11 ವರ್ಷಗಳ ಹಿಂದೆ ಆರ್‌ಸಿಬಿ 263 ರನ್ ಗಳಿಸುವ ಮೂಲಕ ದಾಖಲೆಯನ್ನು ನಿರ್ಮಿಸಿತ್ತು.
* ಎಸ್ಆರ್ಹೆಚ್ 10 ಓವರ್ಗಳಲ್ಲಿ ಗರಿಷ್ಠ ಮೊತ್ತ ದಾಖಲಿಸಿದೆ. 2 ವಿಕೆಟ್ ನಷ್ಟಕ್ಕೆ 148 ರನ್ ಗಳಿಸಿದ್ದು, ಐಪಿಎಲ್ ಇತಿಹಾಸದಲ್ಲೇ 10 ಓವರ್ಗಳಲ್ಲಿ ಅಧಿಕ ಮೊತ್ತ ಕಲೆಹಾಕಿದ ಪ್ರಥಮ ತಂಡ ಹೆಗ್ಗಳಿಕೆಗೆ ಪಾತ್ರವಾಗಿದೆ. ಇದಕ್ಕೂ ಮುನ್ನ ಈ ಸಾಧನೆ ಮುಂಬೈ ಇಂಡಿಯನ್ಸ್ ಹೆಸರಿನಲ್ಲಿತ್ತು. 2021ರಲ್ಲಿ ಹೈದರಾಬಾದ್ ಎದುರು 3 ವಿಕೆಟ್ ನಷ್ಟಕ್ಕೆ 131 ರನ್ ಗಳಿಸತ್ತು.
* ಹೆನ್ರಿಚ್ ಕ್ಲಾಸೆನ್ ಅವರು 34 ಎಸೆತದಲ್ಲಿ 80 ರನ್ ಸಿಡಿಸಿದರು, ಅಭಿಷೇಕ್ ಶರ್ಮಾ 63, ಟ್ರಾವಿಸ್ ಹೆಡ್ 62, ಮತ್ತು ಏಡನ್ ಮಾರ್ಕ್ರಮ್ 42 ರನ್ನ ಸಿಡಿಸುವ ಮೂಲಕ ದಾಖಲೆಗಳನ್ನು ನಿರ್ಮಾಣ ಮಾಡಿದ್ದಾರೆ.
IPL ನಲ್ಲಿ ಚಾರಿತ್ರಿಕ ಮೊತ್ತ ದಾಖಲಿಸಿದ ಸನ್ ರೈಸರ್ಸ್
Published by Akshata Halli
28 ಮಾರ್ಚ್ 2024