* ಭಾರತವು ಭೂತಾನ್‌ಗೆ ಗ್ಯಾಲ್‌ಸಂಗ್ ಯೋಜನೆಗೆ ಸಂಬಂಧಿಸಿದ ಮೂಲಸೌಕರ್ಯಗಳ ಅಭಿವೃದ್ಧಿಗಾಗಿ 500 ಕೋಟಿ ರೂಪಾಯಿಗಳ ಎರಡನೇ ಕಂತನ್ನು ಬಿಡುಗಡೆ ಮಾಡಿದೆ.
* ಪ್ರಧಾನಿ ನರೇಂದ್ರ ಮೋದಿ ಅವರು ಮಾರ್ಚ್ 23ರಂದು ಭೂತಾನ್‌ಗೆ ಭೇಟಿ ನೀಡಿದ್ದ ವೇಳೆ ಹಿಮಾಲಯ ದೇಶದ ಅಭಿವೃದ್ಧಿಗಾಗಿ ಮುಂದಿನ ಐದು ವರ್ಷಗಳಲ್ಲಿ 10,000 ಕೋಟಿ ನೆರವು ನೀಡುವುದಾಗಿ ಘೋಷಣೆ ಮಾಡಿದ್ದಾರೆ.
* 2024 ರ ಆರಂಭದ ವರ್ಷದಲ್ಲಿ ಜನವರಿ 28 ರಂದು ಮೊದಲ ಕಂತಿನ 500 ಕೋಟಿ ರೂ.ಬಿಡುಗಡೆ ಮಾಡಲಾಯಿತು.
* ಭೂತಾನ್‌ನಲ್ಲಿರುವ ಭಾರತದ ರಾಯಭಾರಿ ಸುಧಾಕರ್ ದಲೇಲಾ ಅವರು, ಭೂತಾನ್ ವಿದೇಶಾಂಗ ವ್ಯವಹಾರಗಳ ಸಚಿವ ಲಿಯಾನ್‌ಪೋ ಡಿ.ಎನ್. ಧುಂಗೈಲ್ ಅವರಿಗೆ ಎರಡನೇ ಕಂತಿನ ಮೊತ್ತವನ್ನು ಹಸ್ತಾಂತರಿಸಿದರು.
* ಭಾರತ ಸರ್ಕಾರವು ಗ್ಯಾಲ್‌ಸಂಗ್ ಮೂಲಸೌಕರ್ಯ ಯೋಜನೆಗೆ ರಿಯಾಯಿತಿ ಹಣಕಾಸು ವ್ಯವಸ್ಥೆಗಳ ಕುರಿತು ತಿಳುವಳಿಕೆ ಒಪ್ಪಂದದ ಅಡಿಯಲ್ಲಿ ಭೂತಾನ್ ಸರ್ಕಾರಕ್ಕೆ 1,000 ಕೋಟಿ ರೂಪಾಯಿಗಳನ್ನು ಬಿಡುಗಡೆ ಮಾಡಿದೆ ಎಂದು ಹೇಳಿಕೆಯಲ್ಲಿ ತಿಳಿಸಿದೆ.
* ಜನವರಿ 2024 ರಲ್ಲಿ ಸಹಿ ಹಾಕಲಾದ MOU ಗ್ಯಾಲ್‌ಸಂಗ್ ಮೂಲಸೌಕರ್ಯ ಯೋಜನೆಗೆ ಸಂಬಂಧಿಸಿದ ಮೂಲಸೌಕರ್ಯ ಅಭಿವೃದ್ಧಿಗಾಗಿ ಭೂತಾನ್ ಸರ್ಕಾರಕ್ಕೆ 1,500 ಕೋಟಿ ರೂಪಾಯಿಗಳನ್ನು ರಿಯಾಯಿತಿಯ ಹಣಕಾಸು ರೂಪದಲ್ಲಿ ವಿತರಿಸಲು ಚೌಕಟ್ಟನ್ನು ಒದಗಿಸುತ್ತದೆ.
ಭಾರತದಿಂದ ಭೂತಾನ್ ಗೆ 500 ಕೋಟಿ ರೂಪಾಯಿಗಳ ಎರಡನೇ ಕಂತು ಬಿಡುಗಡೆ
Published by Bhagya R K
28 ಮಾರ್ಚ್ 2024