* ಕೇಂದ್ರ ಸರ್ಕಾರವು ಶುಕ್ರವಾರ(ಜ.10) ರಾಜ್ಯ ಸರ್ಕಾರಗಳ ಪಾಲಿನ 1,73,030 ಕೋಟಿ ರೂ.ಗಳ ತೆರಿಗೆ ಹಂಚಿಕೆಯನ್ನು ಬಿಡುಗಡೆ ಮಾಡಿದೆ. ರಾಜ್ಯಗಳು ತಮ್ಮ ಬಂಡವಾಳ ವೆಚ್ಚ ಹೆಚ್ಚಿಸಲು, ತಮ್ಮ ಅಭಿವೃದ್ಧಿ ಮತ್ತು ಕಲ್ಯಾಣ ಸಂಬಂಧಿತ ವೆಚ್ಚಗಳಿಗೆ ಹಣಕಾಸು ಒದಗಿಸಲು ಸಾಧ್ಯವಾಗುವಂತೆ ಈ ತಿಂಗಳು ಹೆಚ್ಚಿನ ಮೊತ್ತವನ್ನು ರಾಜ್ಯಗಳಿಗೆ ಹಂಚಿಕೆ ಮಾಡಲಾಗುತ್ತಿದೆ ಎಂದು ಹಣಕಾಸು ಸಚಿವಾಲಯ ತಿಳಿಸಿದೆ.
* ರಾಜ್ಯಗಳಲ್ಲಿ ಉತ್ತರ ಪ್ರದೇಶವು ಅತಿ ಹೆಚ್ಚು ತೆರಿಗೆ ಹಂಚಿಕೆಯನ್ನು ಪಡೆದಿದ್ದು ನಂತರದ ಸ್ಥಾನದಲ್ಲಿ ಬಿಹಾರ ಇದೆ. ಕರ್ನಾಟಕಕ್ಕೆ 6310.40 ಕೋಟಿ ರೂ.ಗಳನ್ನು ತೆರಿಗೆ ಪಾಲಾಗಿ ವಿತರಿಸಿದೆ.
* ಕೇಂದ್ರ ಸರಕಾರವು ಡಿಸೆಂಬರ್ ತಿಂಗಳಲ್ಲಿ 28 ರಾಜ್ಯಗಳಿಗೆ 89,086 ಕೋಟಿ ಬಿಡುಗಡೆ ಮಾಡಬೇಕಿತ್ತು. ಬದಲಾಗಿ, ರಾಜ್ಯ ಸರಕಾರಗಳಿಗೆ 1,73,030 ಕೋಟಿ ರೂ. ಬಿಡುಗಡೆ ಮಾಡಲಾಗಿದೆ.
* ತೆರಿಗೆ ಹಣವನ್ನು ಹಂಚಲು ಕೇಂದ್ರ ಸರಕಾರ ಪ್ರತಿಯೊಂದು ರಾಜ್ಯಕ್ಕೆ ಸಂಬಂಧಿಸಿದಂತೆ ಹಲವು ಅಂಶಗಳನ್ನು ಪರಿಗಣಿಸುತ್ತದೆ. ರಾಜ್ಯದಲ್ಲಿ ಜನಸಂಖ್ಯಾ ನಿಯಂತ್ರಣ, ಶಿಶು ಮರಣ ನಿಯಂತ್ರಣ, ಲಿಂಗಾನುಪಾತ ಸುಧಾರಣೆ ಸೇರಿದಂತೆ ಜನಸಂಖ್ಯಾಶಾಸ್ತ್ರಕ್ಕೆ ಸಂಬಂಧಿಸಿದ ಕಾರ್ಯದಕ್ಷತೆಗೆ 12.5% ಅಂಕ, ರಾಜ್ಯದ ಆದಾಯಕ್ಕೆ 45% ಅಂಕ, ಜನಸಂಖ್ಯೆ ಮತ್ತು ರಾಜ್ಯದ ಭೂ ಪ್ರದೇಶಕ್ಕೆ 15 ಅಂಕ, ಅರಣ್ಯ ಮತ್ತು ಪರಿಸರ ಸುಧಾರಣೆಗೆ 2.5% ಅಂಕ ಹಾಗೂ ತೆರಿಗೆ ಮತ್ತು ವಿತ್ತೀಯ ಸುಧಾರಣಾ ಕ್ರಮಗಳಿಗೆ 2.5% ಅಂಕಗಳನ್ನು ಪರಿಗಣಿಸಿ ಆಯಾ ರಾಜ್ಯಕ್ಕೆ ನೀಡಬೇಕಾದ ತೆರಿಗೆ ಮೊತ್ತವನ್ನು ನಿರ್ಧರಿಸಲಾಗುತ್ತದೆ.
* ರಾಜ್ಯವಾರು ವಿವರ (ಕೋಟಿ ರೂ.ಗಳಲ್ಲಿ) :
- ಉತ್ತರ ಪ್ರದೇಶ: 31,039.84 ಕೋಟಿ ರೂ.
- ಆಂಧ್ರ ಪ್ರದೇಶ: 7002.52 ಕೋಟಿ ರೂ.
- ಅರುಣಾಚಲ ಪ್ರದೇಶ: 3040.14 ಕೋಟಿ ರೂ.
- ಅಸ್ಸಾಂ: 5412.38 ಕೋಟಿ ರೂ.
- ಬಿಹಾರ- 17403.36 ಕೋಟಿ ರೂ.
- ಛತ್ತೀಸ್‌ಗಢ- 5895.13 ಕೋಟಿ ರೂ.
- ಗೋವಾ - 667.91 ಕೋಟಿ ರೂ.
- ಗುಜರಾತ್ - 6017.99 ಕೋಟಿ ರೂ.
- ಹರ್ಯಾಣ- 1891.22 ಕೋಟಿ ರೂ.
- ಹಿಮಾಚಲ ಪ್ರದೇಶ- 1436.16 ಕೋಟಿ ರೂ.
- ಜಾರ್ಖಂಡ್- 5722.10 ಕೋಟಿ ರೂ.
- ಕರ್ನಾಟಕ- 6310.40 ಕೋಟಿ ರೂ.
- ಕೇರಳ- 3330.83 ಕೋಟಿ ರೂ.
- ಮಧ್ಯಪ್ರದೇಶ- 13582.86 ಕೋಟಿ ರೂ.
- ಮಹಾರಾಷ್ಟ್ರ- 10930.31 ಕೋಟಿ ರೂ.
- ಮಣಿಪುರ- 1238.90 ಕೋಟಿ ರೂ.
- ಮೇಘಾಲಯ- 1327.13 ಕೋಟಿ ರೂ.
- ಮಿಜೋರಾಂ- 865.15 ಕೋಟಿ ರೂ.
- ನಾಗಾಲ್ಯಾಂಡ್- 984.54 ಕೋಟಿ ರೂ.
- ಒಡಿಶಾ- 7834.80 ಕೋಟಿ ರೂ.
- ಪಂಜಾಬ್- 3126.65 ಕೋಟಿ ರೂ.
- ರಾಜಸ್ಥಾನ- 10426.78 ಕೋಟಿ ರೂ.
- ಸಿಕ್ಕಿಂ- 671.35 ಕೋಟಿ ರೂ.
- ತಮಿಳುನಾಡು- 7057.89 ಕೋಟಿ ರೂ.
- ತೆಲಂಗಾಣ- 3637.09 ಕೋಟಿ ರೂ.
- ತ್ರಿಪುರಾ - 1225.04 ಕೋಟಿ ರೂ.
- ಉತ್ತರಾಖಂಡ- 1934.47 ಕೋಟಿ ರೂ.
- ಪಶ್ಚಿಮ ಬಂಗಾಳ- 13017.06 ಕೋಟಿ ರೂ.
ಶನಿವಾರ, 11 ಜನವರಿ 2025
11:59 ಪೂರ್ವಾಹ್ನ
Daily PDF
ತೆರಿಗೆ ಹಂಚಿಕೆ : ಕರ್ನಾಟಕಕ್ಕೆ 6310 ಕೋಟಿ ರೂ. ಬಿಡುಗಡೆ ಮಾಡಿದ ಕೇಂದ್ರ ಸರಕಾರ
Authored by:
Yallamma G