* ಭಾರತದ ಒಲಿಂಪಿಯನ್ ನೀರಜ್ ಚೋಪ್ರಾ ಅವರನ್ನು ಅಮೆರಿಕದ ‘ಟ್ರ್ಯಾಕ್ ಅ್ಯಂಡ್ ಫೀಲ್ಡ್ ನ್ಯೂಸ್’ ಮ್ಯಾಗ್‌ಜೀನ್ 2024ರ ಶ್ರೇಷ್ಠ ಅಥ್ಲೀಟ್ ಎಂದು ಘೋಷಿಸಿದೆ.
* ಕಳೆದ ವರ್ಷ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಚೋಪ್ರಾ ಪುರುಷರ ಜಾವೆಲಿನ್ ಥ್ರೋದಲ್ಲಿ ಬೆಳ್ಳಿ ಪದಕ ಜಯಿಸಿದ್ದು, ಪಾಕಿಸ್ತಾನದ ಅರ್ಷದ್ ನದೀಂ ಚಿನ್ನ ಪಡೆದರು.
* 1948ರಲ್ಲಿ ಕ್ಯಾಲಿಫೋರ್ನಿಯಾದಲ್ಲಿ ಆರಂಭವಾದ ಈ ಪ್ರತಿಷ್ಠಿತ ನಿಯತಕಾಲಿಕೆ, ‘ಕ್ರೀಡೆಯ ಬೈಬಲ್’ ಎಂದು ಪ್ರಸಿದ್ಧಿ ಪಡೆದಿದ್ದು, ಪ್ರತಿವರ್ಷ ವಿಶ್ವ ಮತ್ತು ಅಮೆರಿಕನ್ ರ‍್ಯಾಂಕಿಂಗ್ ಪ್ರಕಟಿಸುತ್ತದೆ. ಇದು ಟ್ರ್ಯಾಕ್ ಮತ್ತು ಫೀಲ್ಡ್ ಕ್ಷೇತ್ರದಲ್ಲಿ ವಿಶ್ವವಿಖ್ಯಾತವಾಗಿದೆ.
* 2023ರಲ್ಲಿ ಪುರುಷರ ರ‍್ಯಾಂಕಿಂಗ್‌ನಲ್ಲಿ ನೀರಜ್ ಚೋಪ್ರಾ ಪ್ರಥಮ ಸ್ಥಾನದಲ್ಲಿದ್ದರು. 2024ರಲ್ಲಿ ಅವರು ಪಾವೊ ನುರ್ಮಿ ಗೇಮ್ಸ್‌ನಲ್ಲಿ ಜಯಗಳಿಸಿದರು ಮತ್ತು ಲಾಸೆನ್ ಹಾಗೂ ಬ್ರಸೆಲ್ಸ್‌ನಲ್ಲಿ ನಡೆದ ಡೈಮಂಡ್ ಲೀಗ್ ಟೂರ್ನಿಯಲ್ಲಿ ಎರಡನೇ ಸ್ಥಾನ ಪಡೆದರು.
ನೀರಜ್ ಚೋಪ್ರಾಗೆ ಅಮೆರಿಕದ ಶ್ರೇಷ್ಠ ಅಥ್ಲೆಟ್ ಗೌರವ
Published by Jyoti Angadi
11 ಜನವರಿ 2025