Job Description: ➤ ಕೇಂದ್ರ ಯುವ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯವು ‘ತೆನ್ಸಿಂಗ್ ನೋರ್ಗೆ ರಾಷ್ಟ್ರೀಯ ಸಾಹಸ ಪ್ರಶಸ್ತಿ 2024’ (Tenzing Norgay National Adventure Awards - TNNAA 2024) ನ ವಿಜೇತರ ಪಟ್ಟಿಯನ್ನು ಅಧಿಕೃತವಾಗಿ ಪ್ರಕಟಿಸಿದೆ. ಸಾಹಸ ಕ್ಷೇತ್ರದಲ್ಲಿ ಅತ್ಯುನ್ನತ ಸಾಧನೆ ಮಾಡಿದ ನಾಲ್ವರು ಪ್ರಮುಖ ಸಾಧಕರಿಗೆ ಈ ಪ್ರತಿಷ್ಠಿತ ಗೌರವ ಲಭಿಸಿದೆ. ರಾಷ್ಟ್ರಪತಿ ಭವನದಲ್ಲಿ ನಡೆಯಲಿರುವ ರಾಷ್ಟ್ರೀಯ ಕ್ರೀಡಾ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಭಾರತದ ಗೌರವಾನ್ವಿತ ರಾಷ್ಟ್ರಪತಿ ಶ್ರೀಮತಿ ದ್ರೌಪದಿ ಮುರ್ಮು ಅವರು ವಿಜೇತರಿಗೆ ಈ ಪ್ರಶಸ್ತಿಗಳನ್ನು ಪ್ರಧಾನ ಮಾಡಲಿದ್ದಾರೆ.➤ ವಿಜೇತರ ಸಂಪೂರ್ಣ ಪಟ್ಟಿ (List of Winners): ಸಚಿವಾಲಯವು ರಚಿಸಿದ್ದ ರಾಷ್ಟ್ರೀಯ ಆಯ್ಕೆ ಸಮಿತಿಯ ಶಿಫಾರಸಿನಂತೆ ನಾಲ್ವರು ಸಾಧಕರನ್ನು ಈ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ:1. ಬಲ್ಜೀತ್ ಕೌರ್ (Baljeet Kaur): ಭೂ ಸಾಹಸ (Land Adventure)2. ಸ್ಕಲ್ಜಾಂಗ್ ರಿಗ್ಜಿನ್ (Skalzang Rigzin): ಭೂ ಸಾಹಸ (Land Adventure)3. ರಿಮೋ ಸಹಾ (Rimo Saha): ಜಲ ಸಾಹಸ (Water Adventure)4. ಶಿವಪ್ರಸಾದ್ ಚಮೋಲಿ (Shiv Prasad Chamoli): ಜೀವಮಾನ ಸಾಧನೆ (Lifetime Achievement)➤ ಪ್ರಶಸ್ತಿಯ ಸ್ವರೂಪ ಮತ್ತು ಬಹುಮಾನ ಮೊತ್ತ: ತೆನ್ಸಿಂಗ್ ನೋರ್ಗೆ ರಾಷ್ಟ್ರೀಯ ಸಾಹಸ ಪ್ರಶಸ್ತಿಯು ದೇಶದ ಅತ್ಯುನ್ನತ ಸಾಹಸ ಪ್ರಶಸ್ತಿಯಾಗಿದ್ದು, ಅರ್ಜುನ ಪ್ರಶಸ್ತಿಗೆ ತತ್ಸಮಾನ ಗೌರವವನ್ನು ಹೊಂದಿದೆ.- ನಗದು ಬಹುಮಾನ: ₹15 ಲಕ್ಷ ರೂ.- ಇತರ ಗೌರವಗಳು: ಕಂಚಿನ ಪ್ರತಿಮೆ (Bronze Statuette), ಪ್ರಮಾಣಪತ್ರ ಹಾಗೂ ರೇಷ್ಮೆ ಟೈ ಹೊಂದಿರುವ ಬ್ಲೇಜರ್/ಸೀರೆ.