* ಸುಳ್ಳು ಸುದ್ದಿಗಳ ಹರಡುವಿಕೆ ತಡೆಗೆ ಮತ್ತು ಅಂಥವುಗಳ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಆರಂಭದಿಂದಲೂ ಹೇಳುತ್ತಲೇ ಬಂದಿದ್ದ ಕರ್ನಾಟಕ ಸರ್ಕಾರ ಕ್ರಮ ಆರಂಭಿಸಿರುವ ಬಗ್ಗೆ ವರದಿಯಾಗಿದೆ.
* ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುವ ಸುಳ್ಳು ಸುದ್ದಿಗಳ ಪತ್ತೆಗೆ ಫ್ಯಾಕ್ಟ್ಚೆಕ್ ಘಟಕಗಳನ್ನು ಸ್ಥಾಪಿಸಲು 5 ಸಂಸ್ಥೆಗಳನ್ನು ಸರ್ಕಾರ ಗುರುತಿಸಿದೆ.
* ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳಲ್ಲಿ ಹರಿದಾಡುವ ಸುಳ್ಳು ಸುದ್ದಿಗಳ ಫ್ಯಾಕ್ಟ್ಚೆಕ್ ವಿಚಾರವಾಗಿ ಐಟಿ-ಬಿಟಿ ಇಲಾಖೆಯು ಈ ವರ್ಷದ ಅಕ್ಟೋಬರ್‌ನಲ್ಲಿ ಕಂಪನಿಗಳಿಗೆ ಆಹ್ವಾನ ನೀಡಿತ್ತು. ನಂತರ 7 ಕಂಪನಿಗಳು ಬಿಡ್ ಸಲ್ಲಿಸಿದ್ದವು. ಆ ನಂತರ ಐದು ಕಂಪನಿಗಳನ್ನು ಆಯ್ಕೆ ಮಾಡಲಾಗಿದೆ.
ರವಿವಾರ, 10 ಡಿಸೆಂಬರ್ 2023
10:19 ಪೂರ್ವಾಹ್ನ
Daily PDF
ಸುಳ್ಳು ಸುದ್ದಿ ಪತ್ತೆಗೆ ಐದು ಸಂಸ್ಥೆ ಆಯ್ಕೆ
Authored by:
Tajabi Pathan