* ಇಸ್ರೋ ಡಿಸೇಂಬರ್ 8 ರಂದು ಸೂರ್ಯನತ್ತ ಪ್ರಯಾಣ ಕೈಗೊಂಡಿರುವ ಭಾರತದ ಆದಿತ್ಯ ಎಲ್1 ಯೋಜನೆಯಲ್ಲಿ ಮತ್ತೊಂದು ಯಶಸ್ಸು ಸಾಧಿಸಲಾಗಿದೆ. ಸೂರ್ಯನ ಮೊದಲ ಪೂರ್ಣ ಚಿತ್ರಗಳನ್ನು ಆದಿತ್ಯ ಎಲ್​ 1 ಸೆರೆಹಿಡಿದಿದೆ ಎಂದು ತಿಳಿಸಿದೆ.
* ಈ ಫೋಟೋಗಳು ಹತ್ತಿರದ ನೇರಳಾತೀತ ತರಂಗಾಂತರಗಳಲ್ಲಿ “ಸೂರ್ಯನ ದ್ಯುತಿಗೋಳ ಮತ್ತು ವರ್ಣಗೋಳದ ಸಂಕೀರ್ಣ ವಿವರಗಳಿಗೆ ಒಳನೋಟಗಳನ್ನು ಒದಗಿಸುತ್ತವೆ” ಎಂದು ಎಕ್ಸ್ ಸೋಷಿಯಲ್​ ಮೀಡಿಯಾದಲ್ಲಿ ಇಸ್ರೋ ಪೋಸ್ಟ್ ಮಾಡಿದೆ.
* ಆದಿತ್ಯ-ಎಲ್1 ಬಾಹ್ಯಾಕಾಶ ನೌಕೆಯಲ್ಲಿರುವ ಸೌರ ನೇರಳಾತೀತ ಇಮೇಜಿಂಗ್ ಟೆಲಿಸ್ಕೋಪ್ ಅಥವಾ SUIT ಉಪಕರಣವು 200-400 ನ್ಯಾನೊ ಮೀಟರ್​ ತರಂಗಾಂತರ ವ್ಯಾಪ್ತಿಯಲ್ಲಿ ಚಿತ್ರಗಳನ್ನು ಸೆರೆಹಿಡಿದಿದೆ ಎಂದು ಇಸ್ರೋ ತಿಳಿಸಿದೆ. 
* ವಿವಿಧ ವೈಜ್ಞಾನಿಕ ಶೋಧಕಗಳನ್ನು ಬಳಸಿಕೊಂಡು ಈ ತರಂಗಾಂತರ ವ್ಯಾಪ್ತಿಯಲ್ಲಿ ಸೂರ್ಯನ ದ್ಯುತಿಗೋಳ ಮತ್ತು ವರ್ಣಗೋಳದ ಚಿತ್ರಗಳನ್ನು SUIT ಸೆರೆಹಿಡಿದಿದೆ.