➤ ಲಡಾಖ್‌ನ ದುರ್ಗಮ ಜನ್ಸ್ಕಾರ್ (Zanskar) ಪ್ರದೇಶ ಹಾಗೂ ಕಾರ್ಗಿಲ್ ಜಿಲ್ಲೆಯ ಮೊದಲ ಮಹಿಳಾ ಅಧಿಕಾರಿಯಾಗಿ ಸ್ಟಾನ್ಜಿನ್ ತ್ಸಾಂಗ್ಯಾಂಗ್ (Stanzin Tsangyang) ಅವರು ಭಾರತೀಯ ಸೇನೆಗೆ (Indian Army) ನಿಯೋಜನೆಗೊಳ್ಳುವ (Commissioned) ಮೂಲಕ ಐತಿಹಾಸಿಕ ಸಾಧನೆ ಮಾಡಿದ್ದಾರೆ. ಚೆನ್ನೈನ ಆಫೀಸರ್ಸ್ ಟ್ರೈನಿಂಗ್ ಅಕಾಡೆಮಿ (OTA) ಯಲ್ಲಿ ಸೆಪ್ಟೆಂಬರ್ 5, 2026 ರಂದು ನಡೆದ ಪಾಸಿಂಗ್ ಔಟ್ ಪರೇಡ್‌ (Passing Out Parade) ನಂತರ ಅವರು ಅಧಿಕೃತವಾಗಿ ಭಾರತೀಯ ಸೇನಾ ಅಧಿಕಾರಿಯಾಗಿ ಸೇರ್ಪಡೆಯಾದರು.➤ ಸ್ಟಾನ್ಜಿನ್ ತ್ಸಾಂಗ್ಯಾಂಗ್ ಅವರ ಹಿನ್ನೆಲೆ ಮತ್ತು ಶಿಕ್ಷಣ:- ಹುಟ್ಟೂರು: ಲಡಾಖ್‌ನ ಅತಿ ಎತ್ತರದ ಮತ್ತು ಕಠಿಣ ವಾತಾವರಣ ಹೊಂದಿರುವ ಜನ್ಸ್ಕಾರ್ ಕಣಿವೆ (Zanskar Valley).- ಪೋಷಕರು: ತಂದೆ ತುಂಡುಪ್ ತ್ಸೆರಿಂಗ್ (ಶಾಲಾ ಶಿಕ್ಷಕ) ಮತ್ತು ತಾಯಿ ರಿಗ್ಜಿನ್ ಲಾಡೋಲ್.- ಆರಂಭಿಕ ಶಿಕ್ಷಣ: ಲೆಹ್‌ನಲ್ಲಿರುವ 'ಲಮ್ಡಾನ್ ಮಾಡಲ್ ಶಾಲೆ'ಯಲ್ಲಿ (Lamdon Model School) ಸುಮಾರು 14 ವರ್ಷಗಳ ಕಾಲ ಹಾಸ್ಟೆಲ್‌ನಲ್ಲಿದ್ದು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಮುಗಿಸಿದರು.- ಉನ್ನತ ಶಿಕ್ಷಣ: ವಿದ್ಯಾಭ್ಯಾಸದಲ್ಲಿ ಪ್ರವೀಣರಾಗಿದ್ದ ಇವರು ಸ್ಕಾಲರ್‌ಶಿಪ್ ಪಡೆದು ಅಸ್ಸಾಂನ ತೇಜ್‌ಪುರ ವಿಶ್ವವಿದ್ಯಾಲಯದಲ್ಲಿ (Tezpur University) ಮೆಕ್ಯಾನಿಕಲ್ ಎಂಜಿನಿಯರಿಂಗ್ (Mechanical Engineering) ಪದವಿ ಪಡೆದರು.- NCC ಯೋಗದಾನ: ಇಂಜಿನಿಯರಿಂಗ್ ಓದುತ್ತಿದ್ದಾಗ ರಾಷ್ಟ್ರೀಯ ಕೆಡೆಟ್ ಕಾರ್ಪ್ಸ್ (NCC) ಸೇರಿದರು. ಇಲ್ಲಿಯೇ ಅವರಿಗೆ ಭಾರತೀಯ ಸೇನೆಗೆ ಅಧಿಕಾರಿಯಾಗಿ ಸೇರುವ ಆಸೆ ಮತ್ತು ಮಾರ್ಗದರ್ಶನ ದೊರೆಯಿತು.➤ ಸಾಧನೆಯ ವಿಶೇಷತೆ ಹಾಗೂ ಪ್ರಮುಖ ಅಂಶಗಳು:- ಸೇನಾ ಹಿನ್ನೆಲೆ ಇಲ್ಲದ ಕುಟುಂಬ: ಸ್ಟಾನ್ಜಿನ್ ಅವರ ಕುಟುಂಬದಲ್ಲಾಗಲಿ ಅಥವಾ ಅವರ ಗ್ರಾಮದಲ್ಲಾಗಲಿ ಯಾರೂ ಸೇನೆಯಲ್ಲಿರಲಿಲ್ಲ. ಸಂಪೂರ್ಣವಾಗಿ ಸಿವಿಲಿಯನ್ ಹಿನ್ನೆಲೆಯಿಂದ ಬಂದ ಇವರು ತಮ್ಮ ಪೀಳಿಗೆಯಲ್ಲೇ ಮೊದಲ ಸೇನಾ ಅಧಿಕಾರಿಯಾಗಿದ್ದಾರೆ.- ಸವಾಲಿನ ಹಾದಿ: ಲಡಾಖ್‌ನ ಚಳಿಗಾಲ ಹಾಗೂ ಭೌಗೋಳಿಕ ಸವಾಲುಗಳನ್ನು ಮೀರಿ ಬೆಳೆದ ಇವರು, ಓಟಿಎ (OTA Chennai) ತರಬೇತಿಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ 342 ಕೆಡೆಟ್‌ಗಳ ತಂಡದಲ್ಲಿದ್ದರು.- ಒಲಿವ್ ಗ್ರೀನ್ ಯುನಿಫಾರ್ಮ್: ಸೇನೆಯ ಆಲಿವ್ ಗ್ರೀನ್ (Olive Green) ಸಮವಸ್ತ್ರ ಧರಿಸುವ ಮೂಲಕ ಗಡಿ ಪ್ರದೇಶದ ನೂರಾರು ಯುವತಿಯರಿಗೆ ಪ್ರೇರಣೆಯಾಗಿದ್ದಾರೆ.➤ ಆಫೀಸರ್ಸ್ ಟ್ರೈನಿಂಗ್ ಅಕಾಡೆಮಿ (OTA): ತಮಿಳುನಾಡಿನ ಚೆನ್ನೈನಲ್ಲಿದ್ದು, ಭಾರತೀಯ ಸೇನೆಗೆ 'ಶಾರ್ಟ್ ಸರ್ವಿಸ್ ಕಮಿಷನ್' (Short Service Commission) ಮೂಲಕ ಅಧಿಕಾರಿಗಳನ್ನು ತರಬೇತಿಗೊಳಿಸುತ್ತದೆ. ಮಹಿಳಾ ಅಧಿಕಾರಿಗಳಿಗೆ ತರಬೇತಿ ನೀಡುವ ಪ್ರಮುಖ ಕೇಂದ್ರ ಇದಾಗಿದೆ. (ಮತ್ತೊಂದು ಪ್ರಮುಖ ಸೇನಾ ಅಕಾಡೆಮಿ: Indian Military Academy - IMA, Dehradun).