* ''ಫಾತಿಮಾ ವಾಸಿಮ್'' ಅವರು ಉತ್ತರ ಭಾರತದ ಸಿಯಾಚಿನ್ ಗ್ಲೇಸಿಯರ್‌ನ 15 ಸಾವಿರ ಅಡಿ ಎತ್ತರದಲ್ಲಿ ಕಾರ್ಯಾಚರಣಾ ಪೋಸ್ಟ್‌ಗೆ ನಿಯೋಜನೆಗೊಂಡ ಮೊದಲ ಮಹಿಳಾ ಅಧಿಕಾರಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
* ಸಿಯಾಚಿನ್ ಗ್ಲೇಸಿಯರ್ ಅನ್ನು ವಿಶ್ವದ ಅತಿ ಎತ್ತರದ ಯುದ್ಧ ತಾಣವೆಂದು ಕರೆಯಲಾಗುತ್ತದೆ. ಮತ್ತು ಇಂಡೋ-ಪಾಕ್ ನಿಯಂತ್ರಣ ರೇಖೆಯ ಸಮೀಪದಲ್ಲಿದೆ. ಇದರ ಎತ್ತರ 20,062 ಅಡಿ. ಭಾರತದ ಅತಿದೊಡ್ಡ ಮತ್ತು ವಿಶ್ವದ ಎರಡನೇ ಅತಿದೊಡ್ಡ ಹಿಮನದಿ ಇಲ್ಲಿ ಹರಿಯುತ್ತದೆ.
* ಫಾತಿಮಾ ಅವರನ್ನು 15,200 ಅಡಿ ಎತ್ತರದಲ್ಲಿ ನಿಯೋಜಿಸಲಾಗಿದೆ. ಎಂದು ಭಾರತೀಯ ಸೇನೆಯ ಫೈರ್ ಅಂಡ್ ಫ್ಯೂರಿ ಕಾರ್ಪ್ಸ್ ಹೇಳಿದೆ.
* ಕ್ಯಾಪ್ಟನ್ ಫಾತಿಮಾ ವಾಸಿಂ ಸಿಯಾಚಿನ್ ಬ್ಯಾಟಲ್ ಸ್ಕೂಲ್‌ನಲ್ಲಿ ತರಬೇತಿ ಪಡೆದಿದ್ದಾರೆ. ಸಿಯಾಚಿನ್ ಬ್ಯಾಟಲ್ ಸ್ಕೊ ಇಂಡಕ್ಷನ್ ತರಬೇತಿಯನ್ನು
ಯಶಸ್ವಿಯಾಗಿ ಪೂರ್ಣಗೊಳಿಸಿದ ನಂತರ ಅವರನ್ನು ವಿಶ್ವದ ಅತಿ ಎತ್ತರದ ಯುದ್ಧಭೂಮಿ ಸಿಯಾಚಿನ್‌ನಲ್ಲಿ ನಿಯೋಜಿಸಲಾಗಿದೆ.
ಸಿಯಾಚಿನ್ ಗ್ಲೇಸಿಯರ್‌ನ 15 ಸಾವಿರ ಅಡಿ ಎತ್ತರದಲ್ಲಿ ನಿಯೋಜನೆಗೊಂಡ ಮೊದಲ ಮಹಿಳಾ ಕ್ಯಾಪ್ಟನ್ ''ಫಾತಿಮಾ ವಾಸಿಮ್''
Published by Yallamma G
13 ಡಿಸೆಂಬರ್ 2023