* ಶ್ರೀಲಂಕಾದ ಅಧ್ಯಕ್ಷ ಅನುರಾ ಕುಮಾರ ಡಿಸ್ಸಾನಾಯಕೆ ಅವರು ನವೆಂಬರ್ 18 ರಂದು (ಸೋಮವಾರ) ನೂತನ ಪ್ರಧಾನಿ ಮತ್ತು ಸಚಿವರನ್ನು ನೇಮಕ ಮಾಡಲಿದ್ದಾರೆ.
* ಡಿಸ್ಸಾನಾಯಕೆ ಅವರ ನೇತೃತ್ವದ ನ್ಯಾಷನಲ್ ಪೀಪಲ್ಸ್ ಪವರ್ (ಎನ್‌ಪಿಪಿ) ಪಕ್ಷವು ಸಂಸತ್‌ಗೆ ಈಚೆಗೆ ನಡೆದ ಚುನಾವಣೆಯಲ್ಲಿ ಭರ್ಜರಿ ಬಹುಮತ ಗಳಿಸಿತ್ತು.
* ಸಂಸತ್ತಿನ ಒಟ್ಟು 225 ಸ್ಥಾನಗಳಲ್ಲಿ 159 ಸ್ಥಾನಗಳನ್ನು ಎನ್‌ಪಿಪಿ ಗೆದ್ದುಕೊಂಡಿದೆ. ತಮಿಳರು ಪ್ರಾಬಲ್ಕ ಹೊಂದಿರುವ ಜಾಪ್ಪಾದಲ್ಲಿಯೂ ಎನ್‌ಪಿಪಿ ಅಭೂತಪೂರ್ವ ಗೆಲುವು ಪಡೆದಿತ್ತು.
* ಸಂಪುಟದ ಸದಸ್ಯ ಬಲ ಗರಿಷ್ಠ 25 ಆಗಿರಲಿದೆ' ಎಂದು ಎನ್‌ಪಿಪಿ ಹಿರಿಯ ವಕ್ತಾರ ಟಿಲ್ವಿನ್ ಸಿಲ್ವಾ ತಿಳಿಸಿದರು.
* ಶ್ರೀಲಂಕಾ ಸಂವಿಧಾನದಲ್ಲಿ ಗರಿಷ್ಠ 30 ಸಚಿವರ ನೇಮಕಕ್ಕೆ ಅವಕಾಶವಿದ್ದು, ಸಹಾಯಕ ಸಚಿವರನ್ನು ಸೇರಿಸಿದರೆ, 40ಕ್ಕೂ ಹೆಚ್ಚು ಸದಸ್ಯರನ್ನು ನೇಮಿಸಬಹುದು. 'ಸಣ್ಣ ಗಾತ್ರದ ಸರ್ಕಾರ ರಚನೆಯಿಂದ ಆರ್ಥಿಕ ಹೊರೆ ಕುಗ್ಗಿಸಬಹುದು' ಎಂದು ಟಿಲ್ವಿನ್ ಸಿಲ್ವಾ ಅವರು ತಿಳಿಸಿದರು.
ಶ್ರೀಲಂಕಾದ ನೂತನ ಪ್ರಧಾನಿ, ಸಚಿವರ ನೇಮಕ
Published by Bhagya R K
18 ನವೆಂಬರ್ 2024