* ಡಿಫೆನ್ಸ್ ರಿಸರ್ಚ್ ಅಂಡ್ ಡೆವಲಪ್‌ಮೆಂಟ್ ಆರ್ಗನೈಸೇಶನ್(DRDO) ನವೆಂಬರ್ 16 ರಂದು ಒಡಿಸಾದ ಕರಾವಳಿಯ ಡಾ. ಎಪಿಜೆ ಅಬ್ದುಲ್ ಕಲಾಂ ದ್ವೀಪದಿಂದ ಭಾರತದ ಮೊದಲ ದೀರ್ಘ-ಶ್ರೇಣಿಯ ಹೈಪರ್‌ಸಾನಿಕ್ ಕ್ಷಿಪಣಿಯ ಯಶಸ್ವಿ ಹಾರಾಟ-ಪ್ರಯೋಗವನ್ನು ನಡೆಸಿತು.
* ಇದರಿಂದ ದೇಶದ ರಕ್ಷಣಾ ಸಾಮರ್ಥ್ಯ ಮತ್ತಷ್ಟು ಬಲಗೊಂಡಿದೆ ಮತ್ತು ಇಂತಹ ಕ್ಷಿಪಣಿ ವ್ಯವಸ್ಥೆ ಇರುವ ಕೆಲವೇ ದೇಶಗಳ ಪಟ್ಟಿಗೆ ಭಾರತವು ಸೇರ್ಪಡೆಯಾಗಿದೆ.
* ಈ ಹೈಪರ್ಸಾನಿಕ್ ಕ್ಷಿಪಣಿಯನ್ನು ಸಶಸ್ತ್ರ ಪಡೆಗಳಿಗೆ 1,500 ಕಿ.ಮೀ ಗಿಂತ ಹೆಚ್ಚಿನ ವ್ಯಾಪ್ತಿಯ ವಿವಿಧ ಪೇಲೋಡ್‌ಗಳನ್ನು ಸಾಗಿಸಲು ವಿನ್ಯಾಸಗೊಳಿಸಲಾಗಿದೆ.
* ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಕ್ಷಿಪಣಿ ಪ್ರಯೋಗವನ್ನು ಐತಿಹಾಸಿಕ ಸಾಧನೆ ಎಂದು ಬಣ್ಣಿಸಿದ್ದಾರೆ, ಇದು ಅಂತಹ ನಿರ್ಣಾಯಕ ಮತ್ತು ಸುಧಾರಿತ ಮಿಲಿಟರಿ ತಂತ್ರಜ್ಞಾನಗಳ ಸಾಮರ್ಥ್ಯವನ್ನು ಹೊಂದಿರುವ ಆಯ್ಕೆ ರಾಷ್ಟ್ರಗಳ ಗುಂಪಿನಲ್ಲಿ ಭಾರತವನ್ನು ಇರಿಸಿದೆ ಎಂದು ತಿಳಿಸಿದ್ದಾರೆ.
* ಯಶಸ್ವಿ ಹಾರಾಟ ಪ್ರಯೋಗಕ್ಕಾಗಿ ಅವರು DRDO ಸಶಸ್ತ್ರ ಪಡೆಗಳು ಮತ್ತು ಉದ್ಯಮವನ್ನು ಅಭಿನಂದಿಸಿದ್ದಾರೆ. ಕ್ಷಿಪಣಿಯನ್ನು ವಿವಿಧ ಶ್ರೇಣಿಯ ವ್ಯವಸ್ಥೆಗಳಿಂದ ಟ್ರ್ಯಾಕ್ ಮಾಡಲಾಗಿದ್ದು, ಬಹು ಡೊಮೇನ್‌ಗಳಲ್ಲಿ ನಿಯೋಜಿಸಲಾಗಿದೆ.
* ಕೆಳ-ಶ್ರೇಣಿಯ ಹಡಗು ನಿಲ್ದಾಣಗಳಿಂದ ಪಡೆಥ್ಯ ಹಾರಾಟದ ಮಾಹಿತಿಯು ಯಶಸ್ವಿ ಕಟರ್ಮಿನಲ್ ಕುಶಲತೆ ಮತ್ತು ಹೆಚ್ಚಿನ ಮಟ್ಟದ ನಿಖರತೆಯೊಂದಿಗೆ ಪ್ರಭಾವವನ್ನು ದೃಢಪಡಿಸಿದೆ.
* ಹೈಪರ್‌ಸಾನಿಕ್ ಕ್ಷಿಪಣಿಗಳು ಸಾಂಪ್ರದಾಯಿಕ ಶಸ್ತ್ರಾಸ್ತ್ರ ಮತ್ತು ಅಣ್ವಸ್ತ್ರ ಗಳನ್ನು ಹೊತ್ತೊಯ್ಯುವ ಸಾಮರ್ಥ್ಯ " ಹೊಂದಿವೆ. ಶಬ್ದದ ವೇಗದ ಐದು ಪಟ್ಟು ವೇಗದಲ್ಲಿ ಈ ಕ್ಷಿಪಣಿ ಸಾಗುತ್ತದೆ (ಗಂಟೆಗೆ - 1,220 ಕಿ.ಮೀ).
* ಇದರ ಮೂರೂ ಪಟ್ಟು ವೇಗದಲ್ಲಿ ಸಾಗುವ ಕ್ಷಿಪಣಿಗಳನ್ನು ಚೀನಾ ಮತ್ತು ರಷ್ಯಾ ಅಭಿವೃದ್ಧಿಪಡಿಸಿವೆ. ಅಮೇರಿಕ ಅಭಿವೃದ್ಧಿ ಪಡಿಸಿವೆ.
ಸೋಮವಾರ, 18 ನವೆಂಬರ್ 2024
3:20 ಅಪರಾಹ್ನ
Daily PDF
"ಹೈಪರ್ ಸಾನಿಕ್" ಕ್ಷಿಪಣಿ ಹಾರಾಟ ಪ್ರಯೋಗ ಯಶಸ್ವಿ
Authored by:
Jyoti Angadi