➤ ಕೇರಳದ 29ನೇ ರಾಜ್ಯಪಾಲರಾಗಿ ಓಂ ಪ್ರಕಾಶ್ ಮಾಥುರ್ ಪ್ರಮಾಣವಚನ ಸ್ವೀಕಾರ: ಓಂ ಪ್ರಕಾಶ್ ಮಾಥುರ್ ಅವರು ಕೇರಳದ 29ನೇ ರಾಜ್ಯಪಾಲರಾಗಿ ಪ್ರಮಾಣವಚನ ಸ್ವೀಕರಿಸಿದ್ದು, ಹೈಕೋರ್ಟ್ ಮುಖ್ಯನ್ಯಾಯಮೂರ್ತಿ ಸೌಮೆನ್ ಸೇನ್ ಅವರು ಪ್ರತಿಜ್ಞಾವಿಧಿ ಬೋಧಿಸಿದರು.  
➤ ದೆಹಲಿಯಲ್ಲಿ ಭಾರತೀಯ ನೌಕಾಪಡೆಯಿಂದ 'ಇಂಡೋ-ಪೆಸಿಫಿಕ್ ಪ್ರಾದೇಶಿಕ ಸಂವಾದ': ಭಾರತೀಯ ನೌಕಾಪಡೆಯು ನವೆಂಬರ್ 3ರಿಂದ 5ರವರೆಗೆ ದೆಹಲಿಯಲ್ಲಿ 'ಇಂಡೋ-ಪೆಸಿಫಿಕ್ ವಲಯದಲ್ಲಿ ವಿಜ್ಞಾನ, ತಂತ್ರಜ್ಞಾನ ಮತ್ತು ಶೈಕ್ಷಣಿಕ ಸಹಕಾರ' ಎಂಬ ಮುಖ್ಯ ವಿಷಯದೊಂದಿಗೆ ಈ ಸಂವಾದವನ್ನು ಆಯೋಜಿಸಲಿದೆ.
➤ ತಮಿಳುನಾಡಿನಲ್ಲಿ 'ತುಳಿ' ಜಲಸಂರಕ್ಷಣಾ ಜಾಗೃತಿ ಅಭಿಯಾನಕ್ಕೆ ಚಾಲನೆ: ತಮಿಳುನಾಡು ರಾಜ್ಯಾದ್ಯಂತ ಮಳೆನೀರು ಕೊಯ್ಲು ಹಾಗೂ ಅಂತರ್ಜಲ ಮರುಪೂರಣವನ್ನು ಉತ್ತೇಜಿಸುವ ಉದ್ದೇಶದಿಂದ ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ ಅವರು 'ತುಳಿ' ಅಭಿಯಾನವನ್ನು ಪ್ರಾರಂಭಿಸಿದ್ದಾರೆ.
➤ ತೆಲಂಗಾಣದಲ್ಲಿ ದೇಶದ ಮೊದಲ ರಾಜ್ಯಮಟ್ಟದ 'ರಕ್ಷಾ ಎಕ್ಸ್‌ಪೋ' ಪ್ರದರ್ಶನ: ತೆಲಂಗಾಣ ಸರಕಾರವು ಡಿಸೆಂಬರ್ 7ರಿಂದ 9ರವರೆಗೆ ಹೈದರಾಬಾದ್‌ನ 'ಭಾರತ್ ಫ್ಯೂಚರ್ ಸಿಟಿ'ಯಲ್ಲಿ ದೇಶದ ಮೊದಲ ರಾಜ್ಯಮಟ್ಟದ ರಕ್ಷಣೆ ಮತ್ತು ಗಗನನೌಕೆ ಪ್ರದರ್ಶನ 'ರಕ್ಷಾ ಎಕ್ಸ್‌ಪೋ' ಆಯೋಜಿಸಲಿದೆ.
➤ 15 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಸೋಶಿಯಲ್ ಮೀಡಿಯಾ ನಿಷೇಧಿಸಿದ ಗ್ರೀಸ್: ಗ್ರೀಸ್ ಸಂಸತ್ತು 15 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಮ್‌ನಂತಹ ಪ್ರಮುಖ ಸಾಮಾಜಿಕ ಜಾಲತಾಣಗಳನ್ನು ಬಳಸುವುದನ್ನು ಜನವರಿ 1ರಿಂದ ನಿಷೇಧಿಸುವ ಕಾನೂನನ್ನು ಅಂಗೀಕರಿಸಿದೆ.
➤ ಪಂಜಾಬ್‌ನ 40 ಕಾಲೇಜುಗಳಲ್ಲಿ 'ಸಂಗತ್' ಮಾನಸಿಕ ಆರೋಗ್ಯ ಕ್ಲಬ್‌ಗಳ ಸ್ಥಾಪನೆ: ಯುವಕರ ಮಾನಸಿಕ ಆರೋಗ್ಯ ಬೆಂಬಲಿಸಲು ಮತ್ತು ಮಾದಕದ್ರವ್ಯ ತಡೆಯಲು ಪಂಜಾಬ್ ಸರಕಾರವು ರಾಜ್ಯದ 40 ಕಾಲೇಜುಗಳಲ್ಲಿ 'ಸಂಗತ್' ಕ್ಲಬ್‌ಗಳನ್ನು ಪ್ರಾರಂಭಿಸಿದೆ.
➤ ಫ್ರಾನ್ಸ್‌ನಲ್ಲಿ ಪ್ರಪ್ರಥಮ ಬಾರಿಗೆ ಮಾನವರಲ್ಲಿ ಶಮೋಂಡಾ ವೈರಸ್ ಸೋಂಕು ಪತ್ತೆ: ಕಚ್ಚುವ ಕೀಟಗಳ ಮೂಲಕ ಹರಡುವ ಹಾಗೂ ಸಾಮಾನ್ಯವಾಗಿ ಜಾನುವಾರುಗಳಲ್ಲಿ ಕಂಡುಬರುವ ಶಮೋಂಡಾ ವೈರಸ್ ಸೋಂಕಿಗೆ ಒಳಗಾಗಿ ಫ್ರಾನ್ಸ್‌ನಲ್ಲಿ ಮೊದಲ ಬಾರಿಗೆ ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ.
➤ ಅಮೆರಿಕ ಸರಕಾರಿ ಐಟಿ ವ್ಯವಸ್ಥೆಗಳಿಂದ 'ಡೀಪ್‌ಸೀಕ್' ಆ್ಯಪ್‌ಗಳ ತೆಗೆದುಹಾಕಲು ಆದೇಶ: ಅಮೆರಿಕದ ಹೋಮ್ ಲ್ಯಾಂಡ್ ಸೆಕ್ಯುರಿಟಿ ಇಲಾಖೆಯು ಚೀನಾದ ಕೃತಕ ಬುದ್ಧಿಮತ್ತೆ ಸಂಸ್ಥೆ 'ಡೀಪ್‌ಸೀಕ್' ಉತ್ಪನ್ನಗಳು ಮತ್ತು ಸೇವೆಗಳನ್ನು ತನ್ನ ನಾಗರಿಕ ಸರಕಾರಿ ಐಟಿ ವ್ಯವಸ್ಥೆಗಳಿಂದ ತೆಗೆದುಹಾಕಲು ಸೂಚಿಸಿದೆ.
➤ ಡಿಸೆಂಬರ್ 27 ಅನ್ನು 'ರಾಜ್ಯ ಅಗ್ರಿಕೋಸ್ ಕೃಷಿ-ವಿದ್ಯಾರ್ಥಿಗಳ ದಿನ' ಎಂದ ಮಹಾರಾಷ್ಟ್ರ: ಮಹಾರಾಷ್ಟ್ರ ಸರಕಾರವು ಕೃಷಿ ರಂಗದ ವಿದ್ಯಾರ್ಥಿಗಳ ಕೊಡುಗೆಯನ್ನು ಗೌರವಿಸಲು ಡಿಸೆಂಬರ್ 27 ಅನ್ನು ಅಧಿಕೃತವಾಗಿ 'ರಾಜ್ಯ ಅಗ್ರಿಕೋಸ್ ಕೃಷಿ – ವಿದ್ಯಾರ್ಥಿಗಳ ದಿನ' ಎಂದು ಘೋಷಿಸಿದೆ.
➤ ಕೇಸರಿ ಟೂರ್ಸ್‌ಗೆ 'ಅತ್ಯುತ್ತಮ ಅಂತಾರಾಷ್ಟ್ರೀಯ ಗ್ರೂಪ್ ಟೂರ್ ಆಪರೇಟರ್' ಪ್ರಶಸ್ತಿ: ಪ್ರಸಿದ್ಧ 'ಇಂಡಿಯಾ ಟ್ರಾವೆಲ್ ಅವಾರ್ಡ್ಸ್' ಸಮಾರಂಭದಲ್ಲಿ ಕೇಸರಿ ಟೂರ್ಸ್ ಸಂಸ್ಥೆಯು ಅತ್ಯುತ್ತಮ ಅಂತಾರಾಷ್ಟ್ರೀಯ ಗ್ರೂಪ್ ಟೂರ್ ಆಪರೇಟರ್ ಪ್ರಶಸ್ತಿಗೆ ಭಾಜನವಾಗಿದೆ.