➤ ಹಸಿರು ದೀಪಾವಳಿ ಅಭಿಯಾನ: ಪರಿಸರ ಮಾಲಿನ್ಯ ತಡೆಯಲು ಡಬ್ಲ್ಯೂಡಬ್ಲ್ಯೂಎಫ್-ಇಂಡಿಯಾ ದೇಶದಾದ್ಯಂತ 'ಹಸಿರು ದೀಪಾವಳಿ ಅಭಿಯಾನ' ಆರಂಭಿಸಿದ್ದು, ರಾಷ್ಟ್ರೀಯ ಸ್ವಚ್ಛ ಗಾಳಿ ಕಾರ್ಯಕ್ರಮದಡಿಯ 130 ನಗರಗಳಲ್ಲಿ ಪಟಾಕಿ ನಿಷೇಧಿಸಿ ಮಣ್ಣಿನ ದೀಪ ಹಾಗೂ ಸುಸ್ಥಿರ ಅಭ್ಯಾಸಗಳನ್ನು ಬಳಸಲು ಕರೆ ನೀಡಿದೆ.
➤ ಹಕ್ಕಿಗಳ ರೆಡ್ ಲಿಸ್ಟ್: ಭಾರತದಲ್ಲಿನ 1,211 ಪಕ್ಷಿ ಪ್ರಭೇದಗಳ ರಾಷ್ಟ್ರೀಯ 'ರೆಡ್ ಲಿಸ್ಟ್' ಮೌಲ್ಯಮಾಪನ ಪ್ರಕ್ರಿಯೆಯು ಪ್ರಾಣಿಶಾಸ್ತ್ರ ಸರ್ವೇಕ್ಷಣಾ ಸಂಸ್ಥೆ ಮತ್ತು ವನ್ಯಜೀವಿ ಸಂಘಟನೆಗಳ ಸಹಯೋಗದೊಂದಿಗೆ ಅಧಿಕೃತವಾಗಿ ಆರಂಭಗೊಂಡಿದ್ದು 2027ರ ವೇಳೆಗೆ ಪೂರ್ಣಗೊಳ್ಳಲಿದೆ.
➤ ಆಸ್ಟ್ರಾಹಿಂದ್ ಸಮರಾಭ್ಯಾಸ: ಭಾರತ ಮತ್ತು ಆಸ್ಟ್ರೇಲಿಯಾ ಸೈನ್ಯಗಳ ನಡುವಿನ ಜಂಟಿ ಮಿಲಿಟರಿ ಅಭ್ಯಾಸ 'ಆಸ್ಟ್ರಾ ಹಿಂದ್'ನ 5ನೇ ಆವೃತ್ತಿಯು ಕೇರಳದ ತಿರುವನಂತಪುರಂನಲ್ಲಿ ಆರಂಭಗೊಂಡಿದ್ದು, ಕರಾವಳಿ-ದ್ವೀಪ ಪ್ರದೇಶಗಳ ಭದ್ರತೆ ಹಾಗೂ ವಿಪತ್ತು ನಿರ್ವಹಣೆಯಲ್ಲಿ ಸಹಕಾರ ಹೆಚ್ಚಿಸುವ ಗುರಿ ಹೊಂದಿದೆ.
➤ ಖೇತ್ ಬಚಾವೋ ಅಭಿಯಾನ: ಕೇಂದ್ರ ಕೃಷಿ ಸಚಿವಾಲಯವು ಹರಿಯಾಣದ ಕರ್ನಲ್ನಲ್ಲಿ 'ಖೇತ್ ಬಚಾವೋ ಅಭಿಯಾನ'ಕ್ಕೆ ಚಾಲನೆ ನೀಡಿದ್ದು, ಮಣ್ಣಿನ ಆರೋಗ್ಯ, ಸಮತೋಲಿತ ಗೊಬ್ಬರ ಬಳಕೆ ಮತ್ತು ಬೆಳೆ ವೈವಿಧ್ಯತೆ ಬಗ್ಗೆ ಕಿಸಾನ್ ಚೌಪಾಲ್ಗಳ ಮೂಲಕ ರೈತರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ.
➤ ಟಿ20 ವಿಶ್ವಕಪ್ಗೆ ಬಾಂಗ್ಲಾ, ನೇಪಾಳ: 2027ರ ಐಸಿಸಿ ಮಹಿಳಾ ಅಂಡರ್-19 ಟಿ20 ವಿಶ್ವಕಪ್ ಪಂದ್ಯಾವಳಿಯನ್ನು ಬಾಂಗ್ಲಾದೇಶ ಮತ್ತು ನೇಪಾಳ ಜಂಟಿಯಾಗಿ ಆಯೋಜಿಸಲಿದ್ದು, ಜನವರಿ 2 ರಿಂದ ಫೆಬ್ರವರಿ 6 ರವರೆಗೆ ಒಟ್ಟು 16 ತಂಡಗಳ ನಡುವೆ 41 ಪಂದ್ಯಗಳು ನಡೆಯಲಿವೆ.
➤ ಮಹಿಳಾ ಕ್ಲಬ್ ವಿಶ್ವಕಪ್ ಆತಿಥ್ಯ: ಪ್ರಥಮ ಆವೃತ್ತಿಯ ಫಿಫಾ ಮಹಿಳಾ ಕ್ಲಬ್ ಸಾಕರ್ ವಿಶ್ವಕಪ್ ಸರಣಿಗೆ ಅಮೆರಿಕ ಆತಿಥ್ಯ ವಹಿಸಲಿದ್ದು, 2028ರ ಜನವರಿಯಲ್ಲಿ ನಡೆಯಲಿರುವ ಈ ಜಾಗತಿಕ ಕೂಟದಲ್ಲಿ 6 ಒಕ್ಕೂಟಗಳ 19 ಪ್ರಮುಖ ಕ್ಲಬ್ಗಳು ಭಾಗವಹಿಸಲಿವೆ.
➤ ಜೈಪುರಕ್ಕೆ ಜಾಗತಿಕ ಮಾನ್ಯತೆ: ನ್ಯಾಷನಲ್ ಜಿಯೋಗ್ರಾಫಿಕ್ನ 'ಬೆಸ್ಟ್ ಆಫ್ ದಿ ವರ್ಲ್ಡ್' ಅತ್ಯುತ್ತಮ ಪ್ರವಾಸಿ ತಾಣಗಳ ಪಟ್ಟಿಯಲ್ಲಿ ರಾಜಸ್ಥಾನದ ರಾಜಧಾನಿ ಜೈಪುರ ಸ್ಥಾನ ಪಡೆದುಕೊಂಡಿದೆ.
ಸ್ಪರ್ಧಾ ಕೋಶ 26-10-2026
Published by Akshata Halli
4 hours ago