➤ ಅಸ್ಸಾಂ ಸರ್ಕಾರದ ಪ್ರತಿಷ್ಠಿತ ‘ಭಾರತರತ್ನ ಡಾ. ಭೂಪೇನ್ ಹಜಾರಿಕಾ ರಾಷ್ಟ್ರೀಯ ಪ್ರಶಸ್ತಿ’ಯ (Dr. Bhupen Hazarika National Award) ಮೊದಲನೇ ಆವೃತ್ತಿಗೆ ಹಿರಿಯ ಹಿನ್ನೆಲೆ ಗಾಯಕಿ ಉಷಾ ಮಂಗೇಶ್ಕರ್ ಅವರು ಆಯ್ಕೆಯಾಗಿದ್ದಾರೆ.
➤ ಅಸ್ಸಾಂ ಸಚಿವ ಸಂಪುಟದ ತೀರ್ಮಾನದಂತೆ, ಅಸ್ಸಾಂ ಸರ್ಕಾರದ ವತಿಯಿಂದ ಹೊಸದಾಗಿ ಸ್ಥಾಪಿಸಲಾಗಿರುವ 'ಭಾರತರತ್ನ ಡಾ. ಭೂಪೇನ್ ಹಜಾರಿಕಾ ರಾಷ್ಟ್ರೀಯ ಪ್ರಶಸ್ತಿ'ಯನ್ನು ಮೊದಲ ಬಾರಿಗೆ ನೀಡಲಾಗುತ್ತಿದೆ. ಸಂಗೀತ ಮತ್ತು ಕಲಾ ಕ್ಷೇತ್ರಕ್ಕೆ ಉಷಾ ಮಂಗೇಶ್ಕರ್ ಅವರು ನೀಡಿರುವ ಅಮೂಲ್ಯ ಕೊಡುಗೆಯನ್ನು ಪರಿಗಣಿಸಿ ಈ ಗೌರವಕ್ಕೆ ಆಯ್ಕೆ ಮಾಡಲಾಗಿದೆ.
➤ ನವೆಂಬರ್ 29, 2026 ರಂದು ನವದೆಹಲಿಯ ಭಾರತ್ ಮಂಟಪದಲ್ಲಿ ನಡೆಯಲಿರುವ ಡಾ. ಭೂಪೇನ್ ಹಜಾರಿಕಾ ಅವರ ವರ್ಷಪೂರ್ತಿ ಜನ್ಮ ಶತಾಬ್ಧಿ ಆಚರಣೆಯ ಸಮಾರೋಪ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಈ ಪ್ರಶಸ್ತಿಯನ್ನು ಪ್ರದಾನ ಮಾಡಲಿದ್ದಾರೆ.
➤ ಪ್ರಶಸ್ತಿಯ ವಿಶೇಷತೆಗಳು:
- ನಗದು ಪುರಸ್ಕಾರ: ಈ ಪ್ರಶಸ್ತಿಯು ₹10 ಲಕ್ಷ ನಗದು ಮತ್ತು ಪ್ರಶಸ್ತಿ ಫಲಕವನ್ನು (Citation) ಒಳಗೊಂಡಿದೆ.
- ಆವರ್ತನ: ಸಂಗೀತ, ಗಾಯನ, ಸಂಯೋಜನೆ, ಗೀತರಚನೆ, ಚಲನಚಿತ್ರ ನಿರ್ದೇಶನ ಅಥವಾ ನಟನೆ ಮುಂತಾದ ಕ್ಷೇತ್ರಗಳಲ್ಲಿ ರಾಷ್ಟ್ರೀಯ ಅಥವಾ ಅಂತರರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿದ ಸಾಧಕರಿಗೆ ಪ್ರತಿ ಮೂರು ವರ್ಷಗಳಿಗೊಮ್ಮೆ ಈ ಪ್ರಶಸ್ತಿಯನ್ನು ನೀಡಲಾಗುತ್ತದೆ.   
➤ ಡಾ. ಭೂಪೇನ್ ಹಜಾರಿಕಾ: ಇವರು ಅಸ್ಸಾಂನ ಹೆಮ್ಮೆಯ ಖ್ಯಾತ ಗಾಯಕ, ಸಂಗೀತ ಸಂಯೋಜಕ, ಗೀತರಚನೆಕಾರ ಮತ್ತು ಚಲನಚಿತ್ರ ನಿರ್ಮಾಪಕರಾಗಿದ್ದರು. ಭಾರತದ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ 'ಭಾರತರತ್ನ'ವನ್ನು ಇವರಿಗೆ 2019ರಲ್ಲಿ ಮರಣೋತ್ತರವಾಗಿ ಪ್ರದಾನ ಮಾಡಲಾಗಿದೆ.