- ಅಮೇರಿಕದ ಬಾಹ್ಯಾಕಾಶ ಕ್ಷೇತ್ರದಲ್ಲಿ ಹೊಸ ಪ್ರಯೋಗವೊಂದಕ್ಕೆ ಈಗ ನಾಸಾ ಮುಂದಾಗಿದೆ. ಶನಿ ಗ್ರಹದ ಉಪಗ್ರಹವಾದ “ಎನ್‌ಸೆಲಡಸ್’ನ ಅಂಗಳದಲ್ಲಿ ಅಧ್ಯಯನ ನಡೆಸಲು ಹಾವಿನ ಆಕಾರದ ರೊಬೋಟ್‌ವೊಂದನ್ನು ನಾಸಾವು ಅಭಿವೃದ್ಧಿಪಡಿಸುತ್ತಿದೆ.
- ಎನ್‌ಸೆಲಡಸ್‌ನಲ್ಲಿನ ಭೌಗೋಳಿಕ ರಚನೆಯನ್ನು ಅಭ್ಯಸಿಸಿ, ಅದು ವಾಸಯೋಗ್ಯವೇ, ಅಲ್ಲಿ ಜೀವಸಂಕುಲದ ಕುರುಹೇನಾದರೂ ಇದೆಯೇ ಎಂಬ ಬಗ್ಗೆ ಈ ರೊಬೋಟ್ ಅಧ್ಯಯನವನ್ನು ಮಾಡಲಿದೆ.
- ಈ ಅಧ್ಯಯನಕ್ಕೆಂದೇ ಎಕೊಬಯಾಲಜಿ ಎಕ್ಸ್‌ಟೆಂಟ್ ಲೈಫ್ ಸರ್ವೇಯರ್(ಈಲ್ಸ್) ಎಂಬ ಸಂಚಾರಿ ಸಾಧನವನ್ನು ನಾಸಾ ಅಭಿವೃದ್ಧಿಪಡಿಸುತ್ತಿದೆ. ಈ ಸಾಧನವು ನೋಡಲು ಹಾವಿನಂತಿರಲಿದೆ. ಉಬ್ಬು, ತಗ್ಗು ಸೇರಿದಂತೆ ಎಲ್ಲ ರೀತಿಯ ಭೂ ಪ್ರದೇಶದಲ್ಲೂ ಸರಳವಾಗಿ ಸಂಚರಿಸಲು ಆಗಬೇಕು ಎಂಬ ಕಾರಣದಿಂದಲೇ ಇದಕ್ಕೆ ಹಾವಿನ ಆಕಾರವನ್ನು ನೀಡಲಾಗುತ್ತಿದೆ.
ಶನಿ ಗ್ರಹದ ಉಪಗ್ರ "ಎನ್‌ಸೆಲಡಸ್" ಅಧ್ಯಯನಕ್ಕೆ ಉರಗರೂಪದ ರೊಬೋಟ್ ಕಳುಹಿಸಿದ ನಾಸಾ!
Published by Yallamma G
13 ಮೇ 2023