* ಈ ಹೊಸ ಆವಿಷ್ಕಾರಕ ಸೇರ್ಪಡೆಯೊಂದಿಗೆ ಗ್ರಾಹಕರ ಅನುಭವವನ್ನು ಸುಧಾರಿಸಲು ಹಾಗೂ ಚೆಕ್-ಇನ್ ಪ್ರಕ್ರಿಯೆಯನ್ನು ಸುಗಮ ಗೊಳಿಸಲು ಎಮಿರೇಟ್ಸ್ ಏರ್‌ಲೈನ್ಸ್ ಉದ್ದೇಶಿಸಿದೆ.
* * ಚೆಕ್-ಇನ್ ಪ್ರಕ್ರಿಯೆಗೆ ಅನುಕೂಲ
- ದುಬೈ ಹಣಕಾಸು ಜಿಲ್ಲೆಯಲ್ಲಿ ಎಮಿರೇಟ್ಸ್ ಹೊಂದಿರುವ ಹೊಸ ಸಿಟಿ ಚೆಕ್-ಇನ್ ಮತ್ತು ಟ್ರಾವೆಲ್ ಸ್ಟೋರ್‌ನಲ್ಲಿ ಚೆಕ್-ಇನ್ ಪ್ರಕ್ರಿಯೆಯ ಅನುಕೂಲಕ್ಕಾಗಿ ರೊಬೊಟಿಕ್ ಸಹಾಯಕಿಯನ್ನು ವಿನ್ಯಾಸಗೊಳಿಸಲಾಗಿದೆ.
- ಮುಖ ನೋಡಿ ಗುರುತಿಸುವ (ಫೇಷಿಯಲ್ ರೆಕಗ್ನಿಶನ್) ತಂತ್ರಜ್ಞಾನವನ್ನು ಅಳವಡಿಸಲಾಗಿರುವ 'ಸಾರಾ', ಸ್ಕ್ಯಾನ್ ಮಾಡಲಾದ ಪಾಸ್‌ಪೋರ್ಟ್‌ಗಳೊಂದಿಗೆ ಮುಖವನ್ನು ಹೋಲಿಕೆ ಮಾಡಿ ಪ್ರಯಾಣಿಕರನ್ನು ಒಳಗೆ ಬಿಡುತ್ತದೆ ಹಾಗೂ ಲಗೇಜ್ ಇಡುವ ಸ್ಥಳಕ್ಕೆ ಮಾರ್ಗ ದರ್ಶನ ನೀಡುತ್ತದೆ.
- ಬೋರ್ಡಿಂಗ್ ಪಾಸ್‌ಗಳನ್ನು ಕೂಡ ಮುದ್ರಿಸುವ ಕ್ಷಮತೆ ಹೊಂದಿರುವ ರೊಬೊಟ್, ಚೆಕ್-ಇನ್ ಪ್ರಕ್ರಿಯೆಯನ್ನು ಹೆಚ್ಚು ದಕ್ಷಗೊಳಿಸಲಿದೆ.