* ಕ್ರಿಕೆಟ್ ಆಟಗಾರ ಮಹೇಂದ್ರ ಸಿಂಗ್ ಧೋನಿ ಅವರನ್ನು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ(SBI)ದ ನೂತನ ರಾಯಭಾರಿಯಾಗಿ ನೇಮಕ ಮಾಡಲಾಗಿದೆ. ದೋನಿಯು ವಿವಿಧ ಮಾರ್ಕೆಟಿಂಗ್, ಪ್ರಚಾರ ಅಭಿಯಾನಗಳಲ್ಲಿ ಪ್ರಮುಖ ಪಾತ್ರ ವಹಿಸಲಿದ್ದಾರೆ ಎಂದು SBI ಬ್ಯಾಂಕ್ ಹೇಳಿಕೆಗಳಲ್ಲಿ ತಿಳಿಸಿದೆ.
* ಎಸ್‌ಬಿಐ ಅಧ್ಯಕ್ಷ ದಿನೇಶ್ ಖಾರಾ ಅವರು ಧೋನಿ ಅವರನ್ನು ನಮ್ಮ ಬ್ಯಾಂಕ್ನ ಬ್ರಾಂಡ್ ಅಂಬಾಸಿಡರ್ ಸೇರಿಸಿಕೊಳ್ಳುವುದಕ್ಕೆ ತುಂಬಾ ಸಂತೋಷವಾಗಿದೆ. ಎಸ್‌ಬಿಐ ಜತೆಗಿನ ಧೋನಿ ಒಡನಾಟ ನಮ್ಮ ಬ್ರ್ಯಾಂಡ್‌ಗೆ ಹೊಸ ಅವತಾರ ನೀಡಲಿದೆ ಎಂದು ಹೇಳಿದರು.
* ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಆಸ್ತಿಗಳು, ಠೇವಣಿಗಳು, ಶಾಖೆಗಳು, ಗ್ರಾಹಕರು ಮತ್ತು ಉದ್ಯೋಗಿಗಳ ವಿಷಯದಲ್ಲಿ ಅತಿದೊಡ್ಡ ವಾಣಿಜ್ಯ ಬ್ಯಾಂಕ್ ಆಗಿದೆ. ದೇಶದಲ್ಲೇ ಅತಿ ದೊಡ್ಡ ಸಾಲ ನೀಡುವ ಸಂಸ್ಥೆಯೂ ಆಗಿದ್ದು, ಇದುವರೆಗೆ 30 ಲಕ್ಷಕ್ಕೂ ಹೆಚ್ಚು ಭಾರತೀಯ ಕುಟುಂಬಗಳ ಮನೆ ಖರೀದಿ ಕನಸುಗಳನ್ನು ಈಡೇರಿಸಿದೆ.
SBI ದ ನೂತನ ರಾಯಭಾರಿಯಾಗಿ ಮಹೇಂದ್ರ ಸಿಂಗ್ ಧೋನಿ ನೇಮಕ
Published by Yallamma G
30 ಅಕ್ಟೋಬರ್ 2023