➤ ನ್ಯೂಯಾರ್ಕ್‌ನಲ್ಲಿ ನಡೆದ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ (UNGA81) 81ನೇ ಅಧಿವೇಶನದ ಸಂದರ್ಭದಲ್ಲಿ, ಭಾರತದ ವಿದೇಶಾಂಗ ವ್ಯವಹಾರಗಳ ಸಚಿವ ಡಾ. ಎಸ್. ಜೈಶಂಕರ್ ಅವರು ‘ವಿಶ್ವಸಂಸ್ಥೆಯ ಸೈಬರ್ ಅಪರಾಧ ತಡೆ ಒಪ್ಪಂದ’ (UN Convention against Cybercrime)ಕ್ಕೆ ಅಧಿಕೃತವಾಗಿ ಸಹಿ ಹಾಕಿದ್ದಾರೆ. ಸುರಕ್ಷಿತ ಡಿಜಿಟಲ್ ಭವಿಷ್ಯವನ್ನು ನಿರ್ಮಿಸುವಲ್ಲಿ ಮತ್ತು ಗಡಿಯಾಚೆಗಿನ ಸೈಬರ್ ಅಪರಾಧಗಳನ್ನು ತಡೆಯುವಲ್ಲಿ ಈ ಒಪ್ಪಂದವು ಪ್ರಮುಖ ಮೈಲಿಗಲ್ಲಾಗಿದೆ.
➤ ಒಪ್ಪಂದದ ಮುಖ್ಯ ಮುಖ್ಯಾಂಶಗಳು:
- ಅಂತಾರಾಷ್ಟ್ರೀಯ ಸಹಕಾರ: ಈ ಒಪ್ಪಂದವು ಡಿಜಿಟಲ್ ತಂತ್ರಜ್ಞಾನ ಮತ್ತು ಮಾಹಿತಿ ಸಂಪರ್ಕ ವ್ಯವಸ್ಥೆಗಳನ್ನು ಬಳಸಿ ಮಾಡುವ ಅಪರಾಧಗಳನ್ನು ತಡೆಗಟ್ಟಲು ಜಾಗತಿಕ ಮಟ್ಟದಲ್ಲಿ ಸಹಕಾರ ನೀಡುತ್ತದೆ.
- ಇವಿಡೆನ್ಸ್ (ಸಾಕ್ಷ್ಯ) ಹಂಚಿಕೆ: ಗಂಭೀರ ಸ್ವರೂಪದ ಅಪರಾಧಗಳ ತನಿಖೆಗೆ ಅಗತ್ಯವಿರುವ ಇಲೆಕ್ಟ್ರಾನಿಕ್ ಮತ್ತು ಡಿಜಿಟಲ್ ಸಾಕ್ಷ್ಯಾಧಾರಗಳನ್ನು (Digital Evidence) ವಿವಿಧ ದೇಶಗಳ ನಡುವೆ ತ್ವರಿತವಾಗಿ ವಿನಿಮಯ ಮಾಡಿಕೊಳ್ಳಲು ಇದು ಸುಲಭ ವೇದಿಕೆ ಕಲ್ಪಿಸುತ್ತದೆ.
- 24/7 ನೆಟ್‌ವರ್ಕ್: ಅಪರಾಧಿಗಳು ಒಂದು ದೇಶದಲ್ಲಿದ್ದು, ಅಪರಾಧವನ್ನು ಮತ್ತೊಂದು ದೇಶದಲ್ಲಿ ಎಸಗುವ ಸಂದರ್ಭಗಳಲ್ಲಿ ತನಿಖಾ ಸಂಸ್ಥೆಗಳು ತಕ್ಷಣ ಸ್ಪಂದಿಸಲು 24/7 ಜಾಗತಿಕ ನೆಟ್‌ವರ್ಕ್ ಅನ್ನು ರಚಿಸಲಾಗುತ್ತದೆ.
➤ ಭಾರತವು ಸೆಪ್ಟೆಂಬರ್ 25, 2026 ರಂದು ನ್ಯೂಯಾರ್ಕ್‌ನಲ್ಲಿ ನಡೆದ 81ನೇ UNGA ಅಧಿವೇಶನದಲ್ಲಿ United Nations Convention against Cybercrime (ಡಿಸೆಂಬರ್ 24, 2024 ರಂದು ಅಂಗೀಕಾರಗೊಂಡ) ಒಪ್ಪಂದಕ್ಕೆ ಸಹಿ ಹಾಕಿದ್ದು, 40 ದೇಶಗಳು ಅನುಮೋದನೆ ನೀಡಿದ 90 ದಿನಗಳ ನಂತರ ಇದು ಜಾಗತಿಕವಾಗಿ ಜಾರಿಗೆ ಬರಲಿದೆ.
➤ ಗಮನಿಸಿ: ಒಪ್ಪಂದಕ್ಕೆ ಸಹಿ ಹಾಕುವುದು (Signing) ಮತ್ತು ಒಪ್ಪಂದ ಜಾರಿಗೆ ಬರುವುದು (Entering into force) ವಿಭಿನ್ನ. ಭಾರತ ಸಹಿ ಹಾಕಿದೆಯಾದರೂ, 40 ದೇಶಗಳು ಇದನ್ನು ಅಧಿಕೃತವಾಗಿ ಸಂಸತ್ತಿನಲ್ಲಿ ಅಂಗೀಕರಿಸಿ ಅನುಮೋದನೆ ನೀಡಿದ ನಂತರವಷ್ಟೇ ಇದು ಜಾಗತಿಕವಾಗಿ ಜಾರಿಗೆ ಬರಲಿದೆ.
ಶನಿವಾರ, 26 ಸೆಪ್ಟೆಂಬರ್ 2026
3:24 ಅಪರಾಹ್ನ
Daily PDF
ಸೈಬರ್ ಅಪರಾಧ ತಡೆಗೆ UN ಒಪ್ಪಂದಕ್ಕೆ ಭಾರತ ಸಹಿ
Authored by:
Akshata Halli