➤ ಜಪಾನ್‌ನ ಐಚಿ-ನಗೋಯಾದಲ್ಲಿ ನಡೆಯುತ್ತಿರುವ 2026ರ ಏಷ್ಯನ್ ಗೇಮ್ಸ್ (Asian Games 2026) ಕ್ರೀಡಾಕೂಟದಲ್ಲಿ ಭಾರತದ ಮಹಿಳಾ ಕ್ರೀಡಾಪಟುಗಳು ಅದ್ಭುತ ಸಾಧನೆ ಮಾಡಿದ್ದಾರೆ. ಸೆಪ್ಟೆಂಬರ್ 26, 2026 ರಂದು ನಡೆದ ರೋಚಕ ಫೈನಲ್ ಪಂದ್ಯದಲ್ಲಿ ಭಾರತ ಮಹಿಳಾ ಕಬಡ್ಡಿ ತಂಡವು ಇರಾನ್ ತಂಡವನ್ನು ಮಣಿಸಿ ಚಿನ್ನದ ಪದಕವನ್ನು ತನ್ನದಾಗಿಸಿಕೊಂಡಿದೆ. ಜೊತೆಗೆ ಮಹಿಳೆಯರ 50 ಮೀಟರ್ ರೈಫಲ್ 3 ಪೊಸಿಷನ್ ಶೂಟಿಂಗ್ ತಂಡ ವಿಭಾಗದಲ್ಲಿ ಭಾರತ ಬೆಳ್ಳಿ ಪದಕ ಜಯಿಸಿದೆ.
➤ ಮಹಿಳಾ ಕಬಡ್ಡಿ: ಇರಾನ್ ಮಣಿಸಿ ಬಂಗಾರದ ಪದಕ ಗೆದ್ದ ಭಾರತ: ಏಷ್ಯನ್ ಗೇಮ್ಸ್‌ನ ಮಹಿಳಾ ಕಬಡ್ಡಿ ವಿಭಾಗದಲ್ಲಿ ಭಾರತದ ಪ್ರಾಬಲ್ಯ ಮುಂದುವರಿದಿದೆ. ಹ್ಯಾಂಗ್‌ಝೌನಲ್ಲಿ ನಡೆದ ಕಳೆದ ಆವೃತ್ತಿಯ ಚಾಂಪಿಯನ್ ಪಟ್ಟವನ್ನು ಭಾರತೀಯ ಮಹಿಳಾ ತಂಡ ಯಶಸ್ವಿಯಾಗಿ ಉಳಿಸಿಕೊಂಡಿದೆ.
- ಫೈನಲ್ ಸ್ಕೋರ್: ಭಾರತ 37 – 34 ಇರಾನ್.
- ರೋಚಕ ಕ್ಷಣ: ಪಂದ್ಯ ಮುಗಿಯಲು ಕೇವಲ 1 ನಿಮಿಷ ಬಾಕಿ ಇದ್ದಾಗ, ಇರಾನ್‌ನ ಪ್ರಮುಖ ರೈಡರ್ ಅಯ್ನಾಜ್ ಅವರನ್ನು ಭಾರತೀಯ ಟ್ಯಾಕಲ್ ಪಡೆ ಕಟ್ಟಿಹಾಕುವ ಮೂಲಕ ಜಯವನ್ನು ಖಚಿತಪಡಿಸಿಕೊಂಡಿತು.
- ಪ್ರಮುಖ ಆಟಗಾರ್ತಿ: ಸಂಜು ದೇವಿ (Sanju Devi) ಇಡೀ ಟೂರ್ನಿಯುದ್ದಕ್ಕೂ ಅದ್ಭುತ ಪ್ರದರ್ಶನ ನೀಡಿ ಭಾರತದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.
- ತಂಡದಲ್ಲಿದ್ದ ಆಟಗಾರ್ತಿಯರು: ಪೂಜಾ, ರಾಜ್ ರಾಣಿ, ಸೊನಾಲಿ ವಿಷ್ಣು ಶಿಂಗಾಟೆ, ಪುಷ್ಪಾ, ಭಾವನಾ ದೇವಿ, ರಿತು, ಸಂಜು ದೇವಿ, ರಿತು ನೇಗಿ, ಮನಿಷಾ ಕುಮಾರಿ, ಪಿಂಕಿ ರಾಯ್, ಜ್ಯೋತಿ ಮತ್ತು ನಿಕಿತಾ.
➤ ಶೂಟಿಂಗ್: 50m ರೈಫಲ್ 3 P ವಿಭಾಗದಲ್ಲಿ ಭಾರತಕ್ಕೆ ಬೆಳ್ಳಿ: ಮಹಿಳೆಯರ 50 ಮೀಟರ್ ರೈಫಲ್ 3 ಪೊಸಿಷನ್ಸ್ (50m Rifle 3 Positions) ತಂಡ ವಿಭಾಗದ ಶೂಟಿಂಗ್ ಸ್ಪರ್ಧೆಯಲ್ಲಿ ಭಾರತ ಬೆಳ್ಳಿ ಪದಕ ಜಯಿಸಿದೆ.
- ಭಾರತೀಯ ತಂಡ: ತಿಲೋತ್ತಮಾ ಸೇನ್ (Tilottama Sen), ವಿಲ್ದಾರ್ಸಾ ವಿನೋದ್ (Vidarsa Vinod) ಮತ್ತು ಆಶಿ ಚೌಕ್ಸೆ (Ashi Chouksey).
- ಒಟ್ಟು ಅಂಕಗಳು: ಭಾರತದ ಶೂಟರ್‌ಗಳು ಜಂಟಿಯಾಗಿ 1763 ಅಂಕಗಳನ್ನು ಗಳಿಸಿ 2ನೇ ಸ್ಥಾನ ಪಡೆದರು.
- ಚಿನ್ನ ಮತ್ತು ಕಂಸ ಪದಕ: ಚೀನಾ ತಂಡ 1773 ಅಂಕಗಳೊಂದಿಗೆ (ಏಷ್ಯನ್ ಗೇಮ್ಸ್ ದಾಖಲೆ) ಚಿನ್ನ ಗೆದ್ದರೆ, ಕಝಕಿಸ್ತಾನ್ 1754 ಅಂಕಗಳೊಂದಿಗೆ ಕಾಂಸ್ಯ ಪದಕ ಪಡೆಯಿತು.
- ವೈಯಕ್ತಿಕ ಸಾಧನೆ: ವೈಯಕ್ತಿಕ ಅರ್ಹತಾ ಸುತ್ತಿನಲ್ಲಿ ತಿಲೋತ್ತಮಾ ಸೇನ್ 3ನೇ ಸ್ಥಾನ (590 ಅಂಕ) ಹಾಗೂ ವಿಲ್ದಾರ್ಸಾ ವಿನೋದ್ 6ನೇ ಸ್ಥಾನ (588 ಅಂಕ) ಗಳಿಸಿ ಫೈನಲ್‌ಗೆ ಅರ್ಹತೆ ಪಡೆದರು.
ಶನಿವಾರ, 26 ಸೆಪ್ಟೆಂಬರ್ 2026
10:31 ಪೂರ್ವಾಹ್ನ
Daily PDF
ಏಷ್ಯನ್ ಗೇಮ್ಸ್ 2026: ಮಹಿಳಾ ಕಬಡ್ಡಿಯಲ್ಲಿ ಭಾರತಕ್ಕೆ ಸ್ವರ್ಣ, ಶೂಟಿಂಗ್ನಲ್ಲಿ ಬೆಳ್ಳಿ ಸಾಧನೆ!
Authored by:
Akshata Halli