➤ ವಿಶ್ವ ಆರ್ಥಿಕ ವೇದಿಕೆ (World Economic Forum - WEF) ಸೆಪ್ಟೆಂಬರ್ 25, 2026 ರಂದು ಬಿಡುಗಡೆ ಮಾಡಿರುವ ಪ್ರವಾಸೋದ್ಯಮ ಅಭಿವೃದ್ಧಿ ಸೂಚ್ಯಂಕ 2026 (Travel & Tourism Development Index - TTDI 2026) ವರದಿಯಲ್ಲಿ ಭಾರತವು ಗಮನಾರ್ಹ ಸಾಧನೆ ಮಾಡಿದೆ. ಭಾರತವು 4.42 ಅಂಕಗಳೊಂದಿಗೆ 31ನೇ ಸ್ಥಾನಕ್ಕೇರಿದೆ.
- ವರದಿ ಬಿಡುಗಡೆ ಮಾಡಿದ ಸಂಸ್ಥೆ: ವಿಶ್ವ ಆರ್ಥಿಕ ವೇದಿಕೆ (WEF) - ಜ್ಯೂರಿಚ್ ಇನ್ಶೂರೆನ್ಸ್ ಗ್ರೂಪ್ ಸಹಯೋಗದೊಂದಿಗೆ.
- ಭಾರತದ ಪ್ರಸ್ತುತ ಶ್ರೇಯಾಂಕ (2026): 31ನೇ ಸ್ಥಾನ (ಸ್ಕೋರ್: 4.42).
- 2024ರ ಶ್ರೇಯಾಂಕ: 39ನೇ ಸ್ಥಾನದಲ್ಲಿದ್ದ ಭಾರತ, ಈ ಬಾರಿ 8 ಸ್ಥಾನಗಳ ಬೃಹತ್ ಜಿಗಿತ ಕಂಡಿದೆ.
- ಒಟ್ಟು ಮೌಲ್ಯಮಾಪನಕ್ಕೊಳಗಾದ ದೇಶಗಳು: 110 ಆರ್ಥಿಕತೆಗಳು.
- ದಕ್ಷಿಣ ಏಷ್ಯಾದಲ್ಲಿ ಭಾರತದ ಸ್ಥಾನ: ದಕ್ಷಿಣ ಏಷ್ಯಾ ಪ್ರದೇಶದಲ್ಲೇ ಭಾರತ ಅತ್ಯುನ್ನತ ಶ್ರೇಯಾಂಕ ಹೊಂದಿದ ದೇಶವಾಗಿದೆ.
➤ ಜಾಗತಿಕವಾಗಿ ಪ್ರಥಮ 10 ಸ್ಥಾನ ಪಡೆದ ದೇಶಗಳು:
1. ಜಪಾನ್ (Japan)
2. ಅಮೆರಿಕ (United States)
3. ಸ್ಪೇನ್ (Spain)
4. ಆಸ್ಟ್ರೇಲಿಯಾ (Australia)
5. ಫ್ರಾನ್ಸ್ (France)
6. ಜರ್ಮನಿ (Germany)
7. ಯುನೈಟೆಡ್ ಕಿಂಗ್ಡಮ್ (UK)
8. ಚೀನಾ (China)
9. ಸ್ವಿಟ್ಜರ್ಲ್ಯಾಂಡ್ (Switzerland)
10. ಇಟಲಿ (Italy)
ಗಮನಿಸಿ: ಅಗ್ರ 10 ದೇಶಗಳಲ್ಲಿ ಚೀನಾವನ್ನು ಹೊರತುಪಡಿಸಿ ಉಳಿದ 9 ದೇಶಗಳು ಮುಂದುವರಿದ ಆರ್ಥಿಕತೆಗಳಾಗಿವೆ.
➤ ಭಾರತದ ಸಾಧನೆಗೆ ಪ್ರಮುಖ ಕಾರಣಗಳು:
- ಸಾಂಸ್ಕೃತಿಕ ಹಾಗೂ ನೈಸರ್ಗಿಕ ಸಂಪನ್ಮೂಲಗಳು: ಭಾರತವು ನೈಸರ್ಗಿಕ ಸಂಪನ್ಮೂಲಗಳಲ್ಲಿ (Natural Resources) ಜಾಗತಿಕವಾಗಿ 6ನೇ ಸ್ಥಾನ ಮತ್ತು ಸಾಂಸ್ಕೃತಿಕ ಸಂಪನ್ಮೂಲಗಳಲ್ಲಿ (Cultural Resources) 9ನೇ ಸ್ಥಾನದಲ್ಲಿದೆ.
- ಯುನೆಸ್ಕೋ ತಾಣಗಳು: ಭಾರತದಲ್ಲಿ ಪ್ರಸ್ತುತ 44 ಯುನೆಸ್ಕೋ ವಿಶ್ವ ಪಾರಂಪರಿಕ ತಾಣಗಳು (UNESCO World Heritage Sites), 106 ರಾಷ್ಟ್ರೀಯ ಉದ್ಯಾನವನಗಳು ಹಾಗೂ 18 ಜೈವಿಕ ಸಂರಕ್ಷಿತ ಪ್ರದೇಶಗಳು (Biosphere Reserves) ಇವೆ.
- ಸಾರಿಗೆ ಸಂಪರ್ಕ ಮತ್ತು ಮೂಲಸೌಕರ್ಯ: ವಿಮಾನ ಯಾನ ಸಂಪರ್ಕ (Air Connectivity) ಮತ್ತು ಪ್ರವಾಸಿ ಸೇವೆಗಳ ಮೂಲಸೌಕರ್ಯ ಹೆಚ್ಚಿರುವುದು ಭಾರತಕ್ಕೆ ಪ್ಲಸ್ ಪಾಯಿಂಟ್ ಆಗಿದೆ.
➤ TTDI ಸೂಚ್ಯಂಕ:
- ಹಳೆಯ ಹೆಸರು: ಪ್ರವಾಸೋದ್ಯಮ ಸ್ಪರ್ಧಾತ್ಮಕತೆಯ ಸೂಚ್ಯಂಕ (Travel & Tourism Competitiveness Index - TTCI).
- ಹೊಸ ಸ್ವರೂಪ: 2022ರಿಂದ ಇದನ್ನು Travel & Tourism Development Index (TTDI) ಎಂದು ಮರುನಾಮಕರಣ ಮಾಡಲಾಯಿತು.
- ಮೌಲ್ಯಮಾಪನ ಮಾನದಂಡ: ಇದು ಕೇವಲ ಪ್ರವಾಸಿಗರ ಸಂಖ್ಯೆಯನ್ನು ಎಣಿಸುವುದಿಲ್ಲ. ಬದಲಿಗೆ ವ್ಯಾಪಾರ ವಾತಾವರಣ, ಸುರಕ್ಷತೆ, ಆರೋಗ್ಯ ಮತ್ತು ನೈರ್ಮಲ್ಯ, ICT ಸಿದ್ಧತೆ, ಸುಸ್ಥಿರತೆ ಸೇರಿದಂತೆ 17 ಪ್ರಮುಖ ಸ್ತಂಭಗಳ (17 Pillars) ಆಧಾರದ ಮೇಲೆ ದೇಶಗಳನ್ನು ಶ್ರೇಣೀಕರಿಸುತ್ತದೆ.
WEF ಪ್ರವಾಸೋದ್ಯಮ ಅಭಿವೃದ್ಧಿ ಸೂಚ್ಯಂಕ 2026: ಭಾರತಕ್ಕೆ 31ನೇ ಸ್ಥಾನ
Published by Akshata Halli
26 ಸೆಪ್ಟೆಂಬರ್ 2026