* ‘ನೆವರ್ ಗೀವ್ ಅಪ್’ ಎಂಬ ಘೋಷವಾಕ್ಯದೊಂದಿಗೆ ರಿಂಗ್ ನಲ್ಲಿ ಕಾದಾಡುತ್ತಿದ್ದ ಮೆಗಾ ಸ್ಟಾರ್ ಜಾನ್ ಸೀನ(John Cena) ಇದೀಗ ತಮ್ಮ ರಸ್ಲಿಂಗ್ ವೃತ್ತಿಜೀವನಕ್ಕೆ ನಿವೃತ್ತಿ ಘೋಷಣೆ ಮಾಡಿದ್ದಾರೆ.
* ಡಬ್ಲ್ಯೂ ಡಬ್ಲ್ಯೂಇ(WWE) ಬಾಕ್ಸಿಂಗ್ ರಿಂಗ್ನಲ್ಲಿ 16 ಬಾರಿ ಚಾಂಪಿಯನ್ ಪಟ್ಟ ಅಲಂಕರಿಸಿದ್ದ ಖ್ಯಾತ ರೆಸ್ಲರ್ ಜಾನ್ ಸೀನ(John Cena) ತಮ್ಮ ರೆಸ್ಲಿಂಗ್ ವೃತ್ತಿ ಜೀವನಕ್ಕೆ ತೆರೆ ಎಳೆದಿದ್ದಾರೆ.
* ಟೊರೊಂಟೋದಲ್ಲಿ ನಡೆದ ಮನಿ ಇನ್ ದಿ ಬ್ಯಾಂಕ್ ಟೂರ್ನಿಯಲ್ಲಿ ತಮ್ಮ ನಿವೃತ್ತಿ ಪ್ರಕಟಿಸಿದ್ದಾರೆ.
* '‘ದಿ ಲಾಸ್ಟ್ ಟೈಮ್ ಈಸ್ ನೌ” ಎಂದು ಬರೆದ ಟಿ-ಶರ್ಟ್ ಧರಿಸಿ ಸೀನಾ ತನ್ನ ನಿವೃತ್ತಿಯನ್ನು ಪ್ರಕಟಿಸಿದರು. ಈ ವರ್ಷ ನಡೆಯುವ 2024ರ ರಾಯಲ್ ರಂಬಲ್, ಎಲಿಮಿನೇಶನ್ ಚೇಂಬರ್ ಮತ್ತು ರಸಲ್ ಮೇನಿಯಾ 41ರಲ್ಲಿ ಭಾಗಿಯಾಗಲಿದ್ದಾರೆ ಎನ್ನಲಾಗಿದೆ. ಮುಂದಿನ ವರ್ಷ 2025ರಲ್ಲಿ ರಿಂಗ್ ನಲ್ಲಿ ನಿವೃತ್ತಿಯಾಗಲಿದ್ದಾರೆ.
* 2002ರಲ್ಲಿ ಡಬ್ಲ್ಯೂ ಡಬ್ಲ್ಯೂಇ ಕಂಪನಿಗೆ ಸೇರಿದ ಜಾನ್ ಸೀನ 13 ಬಾರಿ ಡಬ್ಲ್ಯೂ ಡಬ್ಲ್ಯೂಇ ಟೈಟಲ್, ಮೂರು ಬಾರಿ ಹೆವಿವೈಟ್ ಚಾಂಪಿಯನ್ ಶಿಪ್ ಮತ್ತು ಎರಡು ಬಾರಿ ರಾಯಲ್ ರಂಬಲ್ ಗೆಲುವು ಸಾಧಿಸಿದ್ದಾರೆ.
* ಪ್ರಸ್ತುತ ಜಾನ್ ಸೀನಾ ಅವರಿಗೆ 47 ವರ್ಷ ವಯಸ್ಸಾಗಿದೆ. WWE ಮಾತ್ರವಲ್ಲದೇ ಹಾಲಿವುಡ್ ಸಿನಿಮಾಗಳಲ್ಲೂ ಜಾನ್ ನಟಿಸಿ ಪ್ರೇಕ್ಷಕರನ್ನು ರಂಜಿಸಿದ್ದರು. ಈಗ ಸಿನಿಮಾ ರಂಗದ ಕಡೆಗೆ ಸಂಪೂರ್ಣ ಗಮನ ಕೇಂದ್ರಿಕರಿಸಿರುವ ಅವರು ಸದ್ಯ WWE ರಿಂಗ್‌ಗೆ ವಿದಾಯ ಹೇಳಲು ನಿರ್ಧರಿಸಿದ್ದಾರೆ.
ಸೋಮವಾರ, 08 ಜುಲೈ 2024
10:33 ಪೂರ್ವಾಹ್ನ
Daily PDF
ರಸ್ಲಿಂಗ್ ವೃತ್ತಿಜೀವನಕ್ಕೆ ವಿದಾಯ ಘೋಷಿಸಿದ WWE ಸೂಪರ್ ಸ್ಟಾರ್ ಜಾನ್ ಸೀನ
Authored by:
Yallamma G