* ಇರಾನ್ ಅಧ್ಯಕ್ಷೀಯ ಚುನಾವಣೆಯ ಅಂತಿಮ ಸುತ್ತಿನಲ್ಲಿ ಹೃದಯ ಶಸ್ತ್ರಚಿಕಿತ್ಸಕ ಮತ್ತು ಶಾಸಕರಾಗಿರುವ ಮಸೌದ್ ಪೆಜೆಶ್ಕಿಯಾನ್ ಅವರು ಇರಾನ್‌ನ ಅಧ್ಯಕ್ಷೀಯ ಚುನಾವಣೆಯಲ್ಲಿ ಜಯಗಳಿಸಿದ್ದಾರೆ ಎಂದು ಇರಾನ್‌ನ ಆಂತರಿಕ ಸಚಿವಾಲಯ ಜುಲೈ 06 (ಶನಿವಾರ) ತಿಳಿಸಿದೆ.
* ಸಂಪ್ರದಾಯವಾದಿ ಸಯೀದ್ ಜಲೀಲಿ ಮತ್ತು ಸುಧಾರಣಾವಾದಿ ನಾಯಕ ಮಸೂದ್ ಪೆಜೆಶ್ಚಿಯಾನ್ ಅವರ ನಡುವೆ ನಡೆದ ಚುನಾವಣೆಯಲ್ಲಿ 69 ವರ್ಷದ ಪೆಜೆಶ್ಚಿಯಾನ್ 1.6 ಕೋಟಿಗೂ ಅಧಿಕ ಮತಗಳನ್ನು ಪಡೆದು ವಿಜೇತರಾಗಿದ್ದಾರೆ. ಜಲೀಲಿ ಅವರು ಸುಮಾರು 1.3 ಕೋಟಿ ಮತಗಳನ್ನು ಗಳಿಸಿದ್ದಾರೆ.
* 3 ಕೋಟಿಗೂ ಹೆಚ್ಚು ಮಂದಿ ಮತದಾನದಲ್ಲಿ ಪಾಲ್ಗೊಂಡಿದ್ದು, ಶೇ.49.8ರಷ್ಟು ಮತದಾನ ನಡೆದಿದೆ. 6 ಲಕ್ಷಕ್ಕೂ ಅಧಿಕ ಮತಗಳು ಅಸಿಂಧುವಾಗಿವೆ ಎಂದು ಚುನಾವಣಾ ಆಯೋಗದ ವಕ್ತಾರ ಮೊಕ್ಸಿನ್ ಇಸ್ಲಾಮಿ ಅವರು ಮಾಹಿತಿ ನೀಡಿದ್ದಾರೆ.
* ಮೊಹಮ್ಮದ್ ಖತಾಮಿ ಅವರ ಸರ್ಕಾರದಲ್ಲಿ 2001 ಮತ್ತು 2005ರ ನಡುವೆ ಅರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವರಾಗಿದ್ದರು. 2016 ರಿಂದ 2020ರವರೆಗೆ ತಬ್ರಿಜ್, ಓಸ್ಕು ಮತ್ತು ಅಜರ್‌ಶಹರ್ ಜಿಲ್ಲೆಗಳ ಮೊದಲ ಉಪ ಸ್ಪೀಕರ್ ಆಗಿ ಕಾರ್ಯ ನಿರ್ವಹಿಸಿದ್ದಾರೆ.
ಸೋಮವಾರ, 08 ಜುಲೈ 2024
10:50 ಪೂರ್ವಾಹ್ನ
Daily PDF
ಪೆಜೆಶ್ಕಿಯಾನ್ ಇರಾನ್ ನ ನೂತನ ಅಧ್ಯಕ್ಷರಾಗಿ ಆಯ್ಕೆ
Authored by:
Bhagya R K