* ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ)ನಿಂದ 90 ರೂಪಾಯಿ ನಾಣ್ಯ ಭಾರತೀಯ ರಿಸರ್ವ್ ಬ್ಯಾಂಕ್‌ನ 90 ನೇ ವರ್ಷದ ಸ್ಮರಣಾರ್ಥ ಪ್ರಧಾನಿ ನರೇಂದ್ರ ಮೋದಿ ಅವರು ಏಪ್ರಿಲ್ 01 ರಂದು (ಸೋಮವಾರ) ವಿಶೇಷ ನಾಣ್ಯವನ್ನು ಬಿಡುಗಡೆ ಮಾಡಿದರು.
* ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್ ಮತ್ತು ಇತರ ಆರ್‌ಬಿಐ ನ ಇತರ ಸದಸ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
* ಆರ್‌ಬಿಐ ಸ್ಥಾಪನೆಯಾಗಿ ಈಗ 89 ವರ್ಷ ಪೂರ್ಣವಾಗಿದ್ದು, 90ನೇ ವರ್ಷ ಕಾಲಿಟ್ಟಿದೆ. 40 ಗ್ರಾಂ ತೂಕದ ಈ ಸ್ಪೆಷಲ್ ಕಾಯಿನ್ ಅನ್ನು ಶೇ. 99.99 ರಷ್ಟು ಶುದ್ಧ ಬೆಳ್ಳಿಯಲ್ಲಿ ತಯಾರಿಸಲಾಗಿದೆ.
* ಭಾರತೀಯ ರಿಸರ್ವ್ ಬ್ಯಾಂಕ್‌ನ ಲಾಂಛನ ಮತ್ತು ಅಶೋಕ ಸ್ತಂಭದ ನಾಲ್ಕು ಸಿಂಹಗಳ ಲಾಂಛನ ಈ ನಾಣ್ಯದಲ್ಲಿವೆ. ಹಾಗೂ ರಾಷ್ಟ್ರೀಯ ಧ್ಯೇಯವಾಕ್ಯ "ಸತ್ಯಮೇವ್ ಜಯತೆ" (ಸತ್ಯ ಮಾತ್ರ ವಿಜಯಗಳು) ಅನ್ನು ದೇವನಾಗರಿ ಲಿಪಿಯಲ್ಲಿ ಕೆತ್ತಲಾಗಿದೆ.
* ಭಾರತೀಯ ರಿಸರ್ವ್ ಬ್ಯಾಂಕ್ 1935ರ ಏಪ್ರಿಲ್ 1ರಂದು ಸ್ಥಾಪನೆಯಾಗಿದೆ. 2024ನೇ ಸಾಲಿನ ಏಪ್ರಿಲ್ 1 ಆರ್ಬಿಐನ 90ನೇ ಸಂಸ್ಥಾಪನಾ ದಿನವಾಗಿದೆ. ಹಿಲ್ಟನ್ ಯಂಗ್ ಆಯೋಗದ ಶಿಫಾರಸ್ಸುಗಳನ್ನು ಆಧರಿಸಿ ಆರ್ ಬಿಐ ಅನ್ನು ಸ್ಥಾಪಿಸಲಾಗಿದೆ.
* ಡೆಪಾಸಿಟ್ ವಿಮೆ, ಕ್ರೆಡಿಟ್ ಗ್ಯಾರಂಟಿ ಕಾರ್ಪೊರೇಶನ್ ಆಫ್ ಇಂಡಿಯಾ, ಯುನಿಟ್ ಟ್ರಸ್ಟ್ ಆಫ್ ಇಂಡಿಯಾ, ಇಂಡಸ್ಟ್ರಿಯಲ್ ಡೆವಲಪ್‌ಮೆಂಟ್ ಬ್ಯಾಂಕ್ ಆಫ್ ಇಂಡಿಯಾ, ನ್ಯಾಷನಲ್ ಬ್ಯಾಂಕ್ ಆಫ್ ಅಗ್ರಿಕಲ್ಚರ್ ಆಂಡ್ ರೂರಲ್ ಡೆವಲಪ್‌ಮೆಂಟ್, ಫೈನಾನ್ಸ್ ಹೌಸ್ ಆಫ್ ಇಂಡಿಯಾದಂತಹ ಘಟಕಗಳನ್ನು ಸ್ಥಾಪಿಸುವ ಮೂಲಕ ಸಾಂಸ್ಥಿಕ ಅಭಿವೃದ್ಧಿಯನ್ನು ಉತ್ತೇಜಿಸುವಲ್ಲಿ ಬ್ಯಾಂಕ್ ನಿರ್ಣಾಯಕ ಪಾತ್ರವನ್ನು ವಹಿಸಿದೆ.
* ಈ ಉಪಕ್ರಮಗಳು ರಾಷ್ಟ್ರದ ಆರ್ಥಿಕ ಮೂಲಸೌಕರ್ಯವನ್ನು ಬಲಪಡಿಸುವ ಗುರಿಯನ್ನು ಹೊಂದಿವೆ.
ಮಂಗಳವಾರ, 02 ಎಪ್ರಿಲ್ 2024
10:52 ಪೂರ್ವಾಹ್ನ
Daily PDF
RBI : 90 ರೂಪಾಯಿ ನಾಣ್ಯ ಬಿಡುಗಡೆ ಮಾಡಿದ ಪ್ರಧಾನಿ ನರೇಂದ್ರ ಮೋದಿ
Authored by:
Bhagya R K