* ವಲಸೆಯೇತರ ಯುಎಸ್ ವೀಸಾಗಳಾದ ಹೆಚ್-1ಬಿ (H-1B Visa), ಇಬಿ-5 (EB-5 Visa) ಹಾಗೂ ಎಲ್-1 (L-1 Visa) ವೀಸಾಗಳ ಮೇಲಿನ ಏಪ್ರಿಲ್ 1 ರಿಂದ ಶುಲ್ಕವನ್ನು ಹೆಚ್ಚಿಸಲಾಗಿದೆ. 2016 ರಿಂದ ವೀಸಾ ವರ್ಗಗಳ ಶುಲ್ಕದಲ್ಲಿ ಇದೇ ಮೊದಲ ಬಾರಿಗೆ ಹೆಚ್ಚಳವನ್ನು ಮಾಡಲಾಗಿದೆ.
* ಭಾರತೀಯರು ಹೆಚ್ಚಾಗಿ ಎಚ್-1ಬಿ, ಎಲ್-1 ಮತ್ತು ಇಬಿ-5 ವೀಸಾಗಳ ಮೂಲಕ ಅಮೆರಿಕಗೆ ಭೇಟಿ ನೀಡಲು ವೀಸಾಗಳನ್ನು ಪಡೆಯುತ್ತಾರೆ.
- ಎಚ್-1ಬಿ ವೀಸಾ ಅರ್ಜಿ ಶುಲ್ಕವನ್ನು 460 ಡಾಲರ್ (38,000 ರೂಪಾಯಿಗಿಂತ ಹೆಚ್ಚು) ನಿಂದ 780 ಡಾಲರ್‌ಗೆ (64,000 ರೂ ಕ್ಕಿಂತ ಹೆಚ್ಚು) ಹೆಚ್ಚಿಸಲಾಗಿದೆ.
- ಎಲ್1 ವೀಸಾ ಶುಲ್ಕವನ್ನು 460 ಡಾಲರ್‌ಗಳಿಂದ (38,000 ರೂಪಾಯಿಕ್ಕಿಂತ ಹೆಚ್ಚು) 1,385 ಡಾಲರ್‌ಗಳಿಗೆ (1,10,000 ರೂಪಾಯಿಕ್ಕಿಂತ ಹೆಚ್ಚು) ಹೆಚ್ಚಿಸಲಾಗಿದೆ.
- ಇಬಿ-5 ವೀಸಾ ಅರ್ಜಿ ಶುಲ್ಕವನ್ನು 3,675 ಡಾಲರ್‌ಗಳಿಂದ (3,00,000 ರೂಪಾಯಿಕ್ಕಿಂತ ಹೆಚ್ಚು) 11,160 ಡಾಲರ್‌ಗಳಿಗೆ (9,00,000 ರೂಪಾಯಿಕ್ಕಿಂತ ಹೆಚ್ಚು) ಹೆಚ್ಚಿಸಲಾಗಿದೆ. ಈ ವೀಸಾವನ್ನು ಹೂಡಿಕೆದಾರರ ವೀಸಾ ಎಂದೂ ಕರೆಯುತ್ತಾರೆ.
ಸೋಮವಾರ, 01 ಎಪ್ರಿಲ್ 2024
4:55 ಅಪರಾಹ್ನ
Daily PDF
ಏಪ್ರಿಲ್ 1 ರಿಂದ ಯುಎಸ್ ವೀಸಾ ಶುಲ್ಕದಲ್ಲಿ ಏರಿಕೆ
Authored by:
Yallamma G