* ರಾಷ್ಟ್ರೀಯ ತನಿಖಾ ಸಂಸ್ಥೆಯ (ಎನ್‌ಐಎ) ಮುಖ್ಯಸ್ಥರಾದ ದಿನಕರ್ ಗುಪ್ತಾ ನಿವೃತ್ತಿಯಾದ ನಂತರ ಅವರ ಸ್ಥಾನಕ್ಕೆ ನೂತನ ಮಹಾನಿರ್ದೇಶಕರಾಗಿ ಐಪಿಎಸ್ ಅಧಿಕಾರಿ ಸದಾನಂದ ವಸಂತ್ ದಾಟೆ ಅವರು ಅಧಿಕಾರ ಸ್ವೀಕರಿಸಿದ್ದಾರೆ.
* 2008ರಲ್ಲಿ ನವೆಂಬರ್ 26ರಂದು ನಡೆದಿದ್ದ ಮುಂಬೈ ದಾಳಿಯ ವೇಳೆ ಶಸ್ತ್ರಸಜ್ಜಿತ ಉಗ್ರರ ವಿರುದ್ಧ ಸಮರ್ಥವಾಗಿ ಹೋರಾಡಿದ್ದಕ್ಕೆ ದಾಟೆ ಅವರಿಗೆ ರಾಷ್ಟ್ರಪತಿ ಪದಕ ನೀಡಲಾಗಿತ್ತು. ಅಂದಿನಿಂದ ದಾಟೆ ಅವರು ಮುಂಬೈ ದಾಳಿಯ ಹೀರೊ ಎಂದೇ ಖ್ಯಾತರಾಗಿದ್ದಾರೆ.
* 2007 ರಲ್ಲಿ ಶ್ಲಾಘನೀಯ ಸೇವೆಗಾಗಿ ಮತ್ತು 2014 ರಲ್ಲಿ ವಿಶಿಷ್ಟ ಸೇವೆಗಾಗಿ ರಾಷ್ಟ್ರಪತಿಗಳ ಪೊಲೀಸ್ ಪದಕವನ್ನು ಪಡೆದಿದ್ದಾರೆ.
* ಮುಂಬೈ ದಾಳಿಯ ನಂತರ ಭಯೋತ್ಪಾದನೆ ಮಟ್ಟ ಹಾಕಲು 2008ರಲ್ಲಿ ಕೇಂದ್ರ ಸರ್ಕಾರ ಎನ್‌ಐಎ ಅನ್ನು ಸ್ಥಾಪಿಸಿತು.
* ಮಹಾರಾಷ್ಟ್ರ ಕೇಡರ್ ನ 1990ರ ಬ್ಯಾಚ್ ನ ಐಪಿಎಸ್ ಅಧಿಕಾರಿಯಾಗಿರುವ ಸದಾನಂದ ಅವರು ಈ ಹಿಂದೆ ಮಹಾರಾಷ್ಟ್ರದ ಭಯೋತ್ಪಾದನಾ ನಿಗ್ರಹ ದಳದ (ಎಟಿಎಸ್) ಮುಖ್ಯಸ್ಥರಾಗಿ ಸೇವೆ ಸಲ್ಲಿಸಿದ್ದರು. ಅವರು ಮೀರಾ-ಭಯಂದರ್ ವಸಾಯಿ ವಿರಾರ್ನ ಪೊಲೀಸ್ ಆಯುಕ್ತರಾಗಿ, ಕಾನೂನು ಮತ್ತು ಸುವ್ಯವಸ್ಥೆಯ ಜಂಟಿ ಆಯುಕ್ತರಾಗಿ ಮತ್ತು ಮುಂಬೈನ ಅಪರಾಧ ವಿಭಾಗದ ಜಂಟಿ ಆಯುಕ್ತರಾಗಿ ಸೇವೆ ಸಲ್ಲಿಸಿದ್ದಾರೆ.
ರಾಷ್ಟ್ರೀಯ ತನಿಖಾ ದಳದ (NIA) ನೂತನ ಮುಖ್ಯಸ್ಥರಾಗಿ ಸದಾನಂದ ದಾಟೆ ನೇಮಕ
Published by Akshata Halli
02 ಏಪ್ರಿಲ್ 2024