➤ ಭಾರತದ ಪ್ರಮುಖ ಬಹುರಾಷ್ಟ್ರೀಯ ವಾಯುಪಡೆ ಸಮರಾಭ್ಯಾಸವಾದ 'ತರಂಗ ಶಕ್ತಿ' (Tarang Shakti) ಅಭ್ಯಾಸವನ್ನು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಜೋಧಪುರ ವಾಯುಪಡೆ ನಿಲ್ದಾಣದಲ್ಲಿ ವೀಕ್ಷಿಸಿ, ಭಾಗವಹಿಸಿದ ಸಶಸ್ತ್ರ ಪಡೆಗಳನ್ನು ಉದ್ದೇಶಿಸಿ ಮಾತನಾಡಿದರು. 

  1. ಸಮರಾಭ್ಯಾಸದ ಸ್ಥಳ: ಜೋಧಪುರ ವಾಯುಪಡೆ ನಿಲ್ದಾಣ, ರಾಜಸ್ಥಾನ.
  2. ಧೈಯವಾಕ್ಯ (Motto): 'ಪವರ್ ಪಾರ್ಟನರ್‌ಶಿಪ್' (Power Partnership).
  3. ಮುಖ್ಯ ಅತಿಥಿ: ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್.
  4. ಸಾಹಸ ಪ್ರದರ್ಶನ:
    • ಭಾರತೀಯ ವಾಯುಪಡೆಯ 'ಸಾರಂಗ್' ಹೆಲಿಕಾಪ್ಟರ್ ಪ್ರದರ್ಶನ ತಂಡ.
    • 'ಸೂರ್ಯಕಿರಣ್' ಏರೋಬ್ಯಾಟಿಕ್ ಸೂರ್ಯಕಿರಣ್ ವಿಮಾನ ಪ್ರದರ್ಶನ ತಂಡ.
  5. ಭಾಗವಹಿಸಿದ ಪ್ರಮುಖ ರಾಷ್ಟ್ರಗಳು: ಆಸ್ಟ್ರೇಲಿಯಾ, ಅಮೆರಿಕ (USA), ಸಂಯುಕ್ತ ಅರಬ್ ಎಮಿರೇಟ್ಸ್ (UAE), ಫ್ರಾನ್ಸ್, ಜರ್ಮನಿ, ಶ್ರೀಲಂಕಾ ಮತ್ತು ಬಾಂಗ್ಲಾದೇಶ ಸೇರಿದಂತೆ ಹಲವು ಸ್ನೇಹಪರ ದೇಶಗಳ ವಾಯುಪಡೆಗಳು ಭಾಗವಹಿಸಿದ್ದವು.

➤ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರ ಸಂದೇಶ: ಜೋಧಪುರ ವಾಯುನೆಲೆಯಲ್ಲಿ ಮಾತನಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು, "ವಿವಿಧ ದೇಶಗಳು, ವಿಭಿನ್ನ ಯುದ್ಧ ವಿಮಾನಗಳು, ವಿಭಿನ್ನ ಅನುಭವಗಳು - ಆದರೆ ಒಂದೇ ಆಕಾಶ. ಇದೇ ತರಂಗ ಶಕ್ತಿಯ ಮುಖ್ಯ ಸಂದೇಶ" ಎಂದು ಹೇಳಿದರು. ಅಲ್ಲದೆ, ಭವಿಷ್ಯದ ಮಿಲಿಟರಿ ಶಕ್ತಿಯು ಗ್ರಹಿಕೆ, ವಿಶ್ಲೇಷಣೆ, ನಿರ್ಧಾರ ಕೈಗೊಳ್ಳುವಿಕೆ ಮತ್ತು ಕಾರ್ಯಾಚರಣೆಯ ವೇಗವನ್ನು ಆಧರಿಸಿ ನಿರ್ಧಾರವಾಗುತ್ತದೆ ಎಂದು ಅವರು ಪ್ರತಿಪಾದಿಸಿದರು. ಸ್ವಾವಲಂಬನೆ (ಆತ್ಮನಿರ್ಭರತೆ) ಮತ್ತು ತಂತ್ರಜ್ಞಾನ ಆಧಾರಿತ ರಕ್ಷಣಾ ಸಹಭಾಗಿತ್ವಕ್ಕೆ ಭಾರತ ಆದ್ಯತೆ ನೀಡುತ್ತಿದೆ ಎಂದು ಅವರು ಪುನರುಚ್ಚರಿಸಿದರು.