* ಹವಾಮಾನ ಬದಲಾವಣೆಯಿಂದಾಗುವ ಪರಿಣಾಮಗಳನ್ನು ನಿವಾರಿಸುವ ಸಲುವಾಗಿ ಶ್ರೀಮಂತ ರಾಷ್ಟ್ರಗಳು ತಮ್ಮ ವಾಗ್ದಾನದಂತೆ, ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳಿಗೆ ಹಣ ಒದಗಿಸಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಸೆಪ್ಟೆಂಬರ್ 07 ರಂದು ಪ್ರತಿಪಾದಿಸಿದ್ದಾರೆ.
* ಜಿ-20 ಶೃಂಗಸಭೆ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಬರೆದಿರುವ ಲೇಖನದಲ್ಲಿ ಹವಾಮಾನ ಬದಲಾವಣೆ ನಿವಾರಿಸುವ ಸವಾಲುಗಳು ಸೇರಿದಂತೆ ಹಲವು ವಿಷಯಗಳನ್ನು ಪ್ರಸ್ತಾಪಿಸಿದ್ದಾರೆ.
* ಹವಾಮಾನ ಬದಲಾವಣೆಗೆ ಸಂಬಂಧಿಸಿ 2015ರ 'ಪ್ಯಾರಿಸ್ ಒಪ್ಪಂದ' ದಂತೆ ವರ್ಷಕ್ಕೆ 7 8 ಲಕ್ಷ ಕೋಟಿ ನೀಡುವಲ್ಲಿ ಶ್ರೀಮಂತ ರಾಷ್ಟ್ರಗಳು ವಿಫಲವಾಗಿವೆ ಎಂದೂ ಮೋದಿ ತಿಳಿಸಿದ್ದಾರೆ.
* ಹವಾಮಾನ ಬದಲಾವಣೆಯಿಂದಾಗುವ ಅಪಾಯಕಾರಿ ಪರಿಣಾಮಗಳನ್ನು ತಡೆಯಲೇಬೇಕಾದಲ್ಲಿ, ವಿಶ್ವದ 20 ಅಗ್ರ ರಾಷ್ಟ್ರಗಳು ಹಣಕಾಸು ಮತ್ತು ತಂತ್ರಜ್ಞಾನ ವರ್ಗಾವಣೆಗೆ ಮುಂದಾಗಬೇಕು ಎಂದೂ ಪ್ರತಿಪಾದಿಸಿದ್ದಾರೆ.
* ಪ್ಯಾರಿಸ್ ನಲ್ಲಿ ನಡೆದ ವಿಶ್ವಸಂಸ್ಥೆ ಹವಾಮಾನ ಬದಲಾವಣೆ ಸಮ್ಮೇಳನದಲ್ಲಿ ವಿಶ್ವ ನಾಯಕರು 2015 ರ ಡಿಸೆಂಬರ್ 12 ರಂದು ಪ್ಯಾರಿಸ್ ಒಪ್ಪಂದಕ್ಕೆ ಸಹಿ ಹಾಕಿದರು.
ರವಿವಾರ, 10 ಸೆಪ್ಟೆಂಬರ್ 2023
11:20 ಪೂರ್ವಾಹ್ನ
Daily PDF
ಪ್ಯಾರಿಸ್ ಹವಾಮಾನ ಬದಲಾವಣೆ ಒಪ್ಪಂದ
Authored by:
Bhagya R K