* ವರ್ಲ್ಡ್ ಎಕನಾಮಿಕ್ ಫೋರಮ್ (WEF) ಇತ್ತೀಚೆಗೆ ಬಿಡುಗಡೆ ಮಾಡಿದ ಪ್ರಯಾಣ ಮತ್ತು ಪ್ರವಾಸೋದ್ಯಮ ಅಭಿವೃದ್ಧಿ ಸೂಚ್ಯಂಕ 2024 ರಲ್ಲಿ ಭಾರತವು 119 ದೇಶಗಳಲ್ಲಿ 39 ನೇ ಸ್ಥಾನದಲ್ಲಿದೆ . ಯುನೈಟೆಡ್ ಸ್ಟೇಟ್ಸ್ ಆಫ್ ಅಮೇರಿಕಾ ನಂ.1 ಸ್ಥಾನದಲ್ಲಿದೆ.
* ಭಾರತವು ದಕ್ಷಿಣ ಏಷ್ಯಾದಲ್ಲಿ ಅಗ್ರ ಶ್ರೇಯಾಂಕದ ದೇಶವಾಗಿದೆ.
* ಪ್ರಯಾಣ ಮತ್ತು ಪ್ರವಾಸೋದ್ಯಮ ಅಭಿವೃದ್ಧಿ ಸೂಚ್ಯಂಕವು ವಿಶ್ವ ಆರ್ಥಿಕ ವೇದಿಕೆ (WEF) ಬಿಡುಗಡೆ ಮಾಡಿದ ಎರಡು ವರ್ಷದ ವರದಿಯಾಗಿದೆ . ಇದಕ್ಕೂ ಮೊದಲ ಈ ಸೂಚ್ಯಂಕವನ್ನು 2022 ರಲ್ಲಿ ಬಿಡುಗಡೆ ಮಾಡಲಾಯಿತು.
* 2024 ರ ಪ್ರಯಾಣ ಮತ್ತು ಪ್ರವಾಸೋದ್ಯಮ ಅಭಿವೃದ್ಧಿ ಸೂಚ್ಯಂಕವನ್ನು ಇಂಗ್ಲೆಂಡ್‌ನ ಸರ್ರೆ ವಿಶ್ವವಿದ್ಯಾಲಯದ ಸಹಯೋಗದೊಂದಿಗೆ ಸಿದ್ಧಪಡಿಸಲಾಗಿದೆ .
* 2024 ರ ಪ್ರಯಾಣ ಮತ್ತು ಪ್ರವಾಸೋದ್ಯಮ ಅಭಿವೃದ್ಧಿ ಸೂಚ್ಯಂಕದ ಪ್ರಕಾರ ವಿಶ್ವದ ಅಗ್ರ ಐದು ಶ್ರೇಯಾಂಕದ ದೇಶಗಳು ಈ ಕೆಳಗಿನಂತಿವೆ :
1. ಯುನೈಟೆಡ್ ಸ್ಟೇಟ್ಸ್ ಆಫ್ ಅಮೇರಿಕಾ - ಸ್ಕೋರ್ 5.24
2. ಸ್ಪೇನ್ - ಸ್ಕೋರ್ 5.18
3. ಜಪಾನ್ - ಸ್ಕೋರ್ 5.09
4. ಫ್ರಾನ್ಸ್ - ಸ್ಕೋರ್ 5.07
5. ಆಸ್ಟ್ರೇಲಿಯಾ - ಸ್ಕೋರ್ 5.00
* 2024 ರ ಪ್ರಯಾಣ ಮತ್ತು ಪ್ರವಾಸೋದ್ಯಮ ಅಭಿವೃದ್ಧಿ ಸೂಚ್ಯಂಕದಲ್ಲಿ ಕೊನೆಯ ಸ್ಥಾನದಲ್ಲಿರುವ ದೇಶ (119) ಮಾಲಿ ಸ್ಕೋರ್ - 2.78, 118ನೇ ಸ್ಥಾನದಲ್ಲಿರುವ ದೇಶ ಸಿಯೆರಾ ಲಿಯೋನ್ -ಸ್ಕೋರ್ 2.9
* 2024 ರ ಸೂಚ್ಯಂಕದಲ್ಲಿ ಭಾರತದ ಒಟ್ಟಾರೆ ಸ್ಕೋರ್ 4.25 ಆಗಿದೆ.
ಬುಧವಾರ, 22 ಮೇ 2024
1:38 ಅಪರಾಹ್ನ
Daily PDF
ಪ್ರವಾಸೋದ್ಯಮ ಅಭಿವೃದ್ಧಿ ಸೂಚ್ಯಂಕ: ಭಾರತಕ್ಕೆ 39 ನೇ ಸ್ಥಾನ
Authored by:
Yallamma G